ಹುಮ್ನಾಬಾದ್‌ನಲ್ಲಿ ಮನವಿ ಸ್ವೀಕರಿಸಲು ಬಾರದ ತಹಶೀಲ್ದಾರ್‌ಗೆ ಒದ್ದ ದಲಿತ ಸಂಘಟನೆ ಕಾರ್ಯಕರ್ತರು..!
ಮನವಿ ಪತ್ರ ತೆಗೆದುಕೊಳ್ಳಲು ಬಾರದ ತಹಶೀಲ್ದಾರಗೆ ಕಾಲಿಂದ ಒದ್ದು ಹಲ್ಲೆ ಮಾಡಿದ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಟಣದಲ್ಲಿರುವ ತಹಶೀಲ್ದಾರ ಕಚೇರಿಯಲ್ಲಿ ನಡೆದಿತ್ತು. ಬಿಎಸ್ಪಿ ರಾಜ್ಯ ಕಾರ್ಯದರ್ಶಿ ಅಂಕುಶ್ ಗೋಖಲೆ ಹುಮ್ನಾಬಾದ್ ತಹಶೀಲ್ದಾರ ಪ್ರದೀಪ ಕುಮಾರ್ ಹಿರೇಮಠ್ ಗೆ ಕಾಲಿಂದ ಒದ್ದು ಹಲ್ಲೆ ಮಾಡಿ ಚೇರ್‌ಗಳನ್ನು ಧ್ವಂಸ ಮಾಡಿ ತಹಶೀಲ್ದಾರ್‌ಗೆ ಅವಾಚ್ಯ ಶಬ್ದಗಳಿಂದ ನಿಂಧನೆ ಮಾಡಿದ ಘಟನೆ ನಿನ್ನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ಪಟ್ಟಣದಲ್ಲಿ ನಡೆದಿತ್ತು.
ಹಲ್ಲೆಯಾಗುತ್ತಿದ್ದಂತೆ ಪ್ರದೀಪ್ ಕುಮಾರ್ ಹಿರೇಮಠ, ಹುಮ್ನಾಬಾದ್ ಠಾಣೆಯಲ್ಲಿ ಹಲ್ಲೆ ಪ್ರಕರಣ ದಾಖಲಿಸಿದ್ದರು. ಇದಕ್ಕೆ ಪ್ರತಿ ದೂರಾಗಿ ಬಿಎಸ್‍ಪಿ ಮುಖಂಡರು ಕೂಡಾ ತಹಶೀಲ್ದಾರ್ ಮೇಲೆ ಜಾತಿ ನಿಂದನೆ ಕೇಸ್ ದಾಖಲಿಸಿದ್ದರು.
ತಾಲೂಕು ಕಚೇರಿಗಳಲ್ಲಿ ಅಧಿಕಾರಿಗಳ ಪ್ರತಿಭಟನೆ
ತಹಶೀಲ್ದಾರ್ ಪ್ರದೀಪ್ ಹಿರೇಮಠ ಅವರು ಹುಮನಾಬಾದ್ ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದರು. ಆಯಾ ತಾಲ್ಲೂಕು ತಹಶೀಲ್ ಕಚೇರಿಗಳಲ್ಲಿ ಹಲ್ಲೆ ಖಂಡಿಸಿ ಕಚೇರಿಗೆ ಬೀಗ ಹಾಕಿ ಅಧಿಕಾರಿಗಳು ಪ್ರತಿಭಟನೆ ನಡೆಸಿದರು.
ಬಳಿಕ ಮಾತನಾಡಿದ ಅಧಿಕಾರಿಗಳು ತಹಶೀಲ್ದಾರ ಅವರ ಮೇಲೆ ನಡೆದ ಹಲ್ಲೆ ಇಡೀ ಜಿಲ್ಲೆಯ ಅಧಿಕಾರಿಗಳ ಮೇಲೆ ಹಲ್ಲೆ ನಡೆದಂತಾಗಿದೆ ತಾಲೂಕಿನ ಮುಖ್ಯಸ್ಥರಂತಿರುವ ನಮ್ಮ ತಹಶೀಲ್ದಾರ ಮೇಲೆ ಹಲ್ಲೆ ನಡೆದಿದ್ದು ನಾವು ಖಂಡಿಸುತ್ತೇವೆ. ಜಿಲ್ಲೆಯಲ್ಲಿ ಎಲ್ಲ ಅಧಿಕಾರಿಗಳು ಕಾಯಕವೇ ಕೈಲಾಸ ಎಂದು ತಿಳಿದು ನಿಷ್ಠೆಯಿಂದ ಹಗಲಿರುಳು ಕೆಲಸಮಾಡುವ ನಮಗೆ ರಕ್ಷಣೆ ಇಲ್ಲದಂತಾಗಿದೆ. ನಮ್ಮ ಕರ್ತವ್ಯದಲ್ಲಿ ಏನಾದರು ತಪ್ಪಾದರೆ ಸಾರ್ವಜನಿಕರು ಪ್ರಶ್ನಿಸಬಹುದು. ಆದರೆ ಇ ರೀತಿಯ ವರ್ತನೆ ಸರಕಾರಿ ನೌಕರರು ಖಂಡಿಸುತ್ತೇವೆ. ಈ ಘಟನೆಗೆ ಸಂಬಂಧಿಸಿದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಇಲ್ಲವಾದರೆ ಇದು ಹೀಗೆ ಮುಂದುವರಿಯಬಹುದು ಮುಂದಿನ ದಿನಗಳಲ್ಲಿ ಅಧಿಕಾರಿಗಳು ನೆಮ್ಮದಿಯಿಂದ ಕೆಲಸ ಮಾಡಲು ಸಾಧ್ಯ ವಾಗದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹಕ್ಕಿಗಳ ಆಹಾರಕ್ಕಾಗಿಯೇ ಒಂದು ಎಕರೆ ಬೆಳೆ ಮೀಸಲು! ಬೀದರ್‌ನ ರೈತ ದಂಪತಿಯ ಸಾರ್ಥಕ ಕಾರ್ಯ
ಸರಕಾರಿ ನೌಕರರ ಸಂಘದ ವತಿಯಿಂದ ಈ ಘಟನೆ ಸಂಬಂಧ ಪೋಲಿಸ್ ವರಿಷ್ಠಾಧಿಕಾರಿ ಡಿ.ಕಿಶೋರಬಾಬು ಭೇಟಿ ಮಾಡಿ ಮನವಿ ಸಲ್ಲಿಸಿದರು. ಆರೋಪಿಗಳನ್ನು ಹುಮ್ನಾಬಾದ್ ಪೊಲೀಸರು ಬಂಧಿಸಿದ್ದಾರೆ. ಉಳಿದ ಆರೋಪಿಗಳ ಶೋಧ ನಡೆದಿದೆ ಎಂದು ತಿಳಿಸಿದರು.
Read more
[wpas_products keywords=”deal of the day sale today offer all”]