ಆಂಡ್ರಾಯ್ಡ್ ಫೋನ್ ಬಳಕೆದಾರರೇ ನಿಮ್ಮ ಫೋನಿಗೆ ಬರುವ ಅಪರಿಚಿತ ಸಂಖ್ಯೆಗಳನ್ನು ಹೇಗೆ ನಿರ್ಬಂಧಿಸುವುದು ಎಂಬುದನ್ನು ಯೋಚಿಸುತ್ತಿದ್ದಿರಾ? ಅದಕ್ಕಾಗಿ ಗೂಗಲ್ ಆಂಡ್ರಾಯ್ಡ್‌ನಲ್ಲಿ ಅಪರಿಚಿತ ಸಂಖ್ಯೆಗಳನ್ನು ನಿರ್ಬಂಧಿಸುವ ಆಯ್ಕೆ ಒದಗಿಸಿದೆ. ವಿಭಿನ್ನ ಸ್ಕಿನ್‌ಗಳು ಮತ್ತು ಇಂಟರ್‌ಫೇಸ್‌ಗಳು ಫೋನ್‌ನಲ್ಲಿ ಅಪರಿಚಿತ ಸಂಖ್ಯೆಗಳನ್ನು ನಿರ್ಬಂಧಿಸಲು ವಿಭಿನ್ನ ಮಾರ್ಗಗಳನ್ನು ಹೊಂದಿವೆ. ಈ ಆಯ್ಕೆಯು ಅನಗತ್ಯ ಕರೆ ಮಾಡುವವರ ಕಿರಿ ಕಿರಿ ತಪ್ಪಿಸುವಲ್ಲಿ ನೆರವಾಗಲಿದೆ.

ಹೌದು, ಬಳಕೆದಾರರು ತಮ್ಮ ಆಂಡ್ರಾಯ್ಡ್ ಫೋನ್‌ನಲ್ಲಿ ಕೆಲವೊಂದು ಕ್ರಮಗಳನ್ನು ಅನುಸರಿಸುವ ಮೂಲಕ ಅಪರಿಚಿತ ಸಂಖ್ಯೆಯನ್ನು ನಿರ್ಬಂಧಿಸಬಹುದಾಗಿದೆ. ನಿಮ್ಮ ಬಳಿ ಗೂಗಲ್ ಪಿಕ್ಸಲ್ ಫೋನ್ ಅಥವಾ ಗೂಗಲ್ ಫೋನ್ ಆಪ್ ಇದ್ದರೇ, ಅಪರಿಚಿತ ಸಂಖ್ಯೆಯನ್ನು ನಿರ್ಬಂಧಿಸುವುದು ಸುಲಭ. ಇನ್ನು ಆಂಡ್ರಾಯ್ಡ್ ಫೋನ್ ಬಳಕೆದಾರರು ತಮ್ಮ ಫೋನ್‌ಗಳಲ್ಲಿ ಗೂಗಲ್ ಪ್ಲೇ ಸ್ಟೋರ್ (Google Play) ನಿಂದ ಗೂಗಲ್ ಫೋನ್ (Google Phone) ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದಾಗಿದೆ. ಈ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಗೂಗಲ್ ಫೋನ್ ಆಪ್ ಮೂಲಕ ಆಂಡ್ರಾಯ್ಡ್ ಫೋನ್‌ನಲ್ಲಿ ಈ ಕ್ರಮ ಅನುಸರಿಸಿ:
ಅಂಡ್ರಾಯ್ಡ್ ಫೋನಿನಲ್ಲಿ ‘ಗೂಗಲ್ ಫೋನ್’ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್ ಮಾಡಿ ಅಪರಿಚಿತ ಸಂಖ್ಯೆಗಳನ್ನು ನಿರ್ಬಂಧಿಸಲು ತೆಗೆದುಕೊಳ್ಳಬಹುದಾದ ಹಂತಗಳು ತಿಳಿಸಲಾಗಿದೆ. ಒಂದು ವೇಳೆ ನಿವು ಸ್ಯಾಮ್‌ಸಂಗ್ ಫೋನ್ ಹೊಂದಿದ್ದರೆ ಈ ಮುಂದಿನ ಕ್ರಮ ಅನುಸರಿಸಿ.
* ಫೋನ್ ಅಪ್ಲಿಕೇಶನ್ ತೆರೆಯಿರಿ.
* ಡಯಲರ್ ಹುಡಕಾಟ ಪಟ್ಟಿಯ ಮೇಲಿನ ಬಲಭಾಗದಿಂದ ಮೂರು ಡಾಟ್ ಬಟನ್ ಅನ್ನು ಟ್ಯಾಪ್ ಮಾಡಿ.
* ಈಗ, ಸೆಟ್ಟಿಂಗ್‌ಗಳು ಮತ್ತು ನಂತರ ನಿರ್ಬಂಧಿಸಿದ ಸಂಖ್ಯೆಗಳನ್ನು (Blocked numbers) ಟ್ಯಾಪ್ ಮಾಡಿ.
* ಅಪರಿಚಿತ (Unknown) ಆಯ್ಕೆಯನ್ನು ಆನ್ ಮಾಡಿ.

ಸ್ಯಾಮ್‌ಸಂಗ್ ಫೋನ್‌ನಲ್ಲಿ ಈ ಕ್ರಮ ಅನುಸರಿಸಿ:
* ಫೋನ್ ಅಪ್ಲಿಕೇಶನ್ ತೆರೆಯಿರಿ.
* ಮೂರು ಡಾಟ್ ಮೆನುವನ್ನು ಟ್ಯಾಪ್ ಮಾಡಿ ಮತ್ತು ನಂತರ ಸೆಟ್ಟಿಂಗ್‌ಗಳನ್ನು ಆಯ್ಕೆಮಾಡಿ.
* ಈಗ, ಬ್ಲಾಕ್ ಸಂಖ್ಯೆಗಳನ್ನು ಟ್ಯಾಪ್ ಮಾಡಿ.
* ನಿಮ್ಮ ಫೋನ್‌ನಲ್ಲಿ ಖಾಸಗಿ ಮತ್ತು ಅಪರಿಚಿತ ಸಂಖ್ಯೆಗಳನ್ನು ನಿರ್ಬಂಧಿಸಲು ಅಪರಿಚಿತ ಸಂಖ್ಯೆಗಳನ್ನು ನಿರ್ಬಂಧಿಸಿ ಒತ್ತಿರಿ.
ಶಿಯೋಮಿ ಫೋನ್‌ನಲ್ಲಿ ಅಪರಿಚಿತ ಈ ಕ್ರಮ ಅನುಸರಿಸಿ:
* ಫೋನ್ ತೆರೆಯಿರಿ.
* ಸರ್ಚ್ ಪಟ್ಟಿಯಿಂದ ಮೂರು ಡಾಟ್ ಬಟನ್ ಅನ್ನು ಟ್ಯಾಪ್ ಮಾಡಿ.
* ಮೆನುವಿನಿಂದ ಸೆಟ್ಟಿಂಗ್‌ಗಳನ್ನು ಆಯ್ಕೆಮಾಡಿ.
* ಈಗ, ಗುರುತಿಸದ ಕರೆ ಮಾಡುವವರ ಎಲ್ಲಾ ಕರೆಗಳನ್ನು ನಿರ್ಬಂಧಿಸಲು ಅಪರಿಚಿತ ಟ್ಯಾಪ್ ಮಾಡಿ.
Best Mobiles in India
English summary
How to Block Unknown Numbers on Your Smartphone.
Story first published: Saturday, January 29, 2022, 17:29 [IST]
Read more…
[wpas_products keywords=”smartphones under 15000 6gb ram”]