Karnataka news paper

‘ಸಾರ್ವಜನಿಕ ಸಾಲ’ ಎಂದರೇನು? ಇದರ ಅಡಿಯಲ್ಲಿ ಯಾವೆಲ್ಲ ಸಾಲಗಳು ಬರುತ್ತವೆ?


ತೆರಿಗೆಗಳು ಮತ್ತು ಇತರ ಮೂಲಗಳಿಂದ ಸರ್ಕಾರ ಪಡೆಯುವ ಆದಾಯವು ಅದರ ಖರ್ಚಿಗಿಂತ ಕಡಿಮೆ ಇದ್ದಾಗ ಸರ್ಕಾರವು ಮಾರುಕಟ್ಟೆ ಮತ್ತು ಬಾಹ್ಯ ಮೂಲಗಳಿಂದ ಸಾಲವನ್ನು ಪಡೆಯುತ್ತದೆ.ಕನ್ಸಾಲಿಡೇಟೆಡ್ ಫಂಡ್ ಆಫ್‌ ಇಂಡಿಯಾ (ಸರಕಾರದ ಮುಖ್ಯ ಬ್ಯಾಂಕ್‌ ಖಾತೆ)ಕ್ಕೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಂಡು ಕೇಂದ್ರ ಸರ್ಕಾರ ಪಡೆಯುವ ಸಾಲ ಸಾರ್ವಜನಿಕ ಸಾಲವಾಗಿರುತ್ತದೆ. ಇದನ್ನು ಮತ್ತಷ್ಟು ವಿಸ್ತರಿಸಿ ಆಂತರಿಕ ಮತ್ತು ಬಾಹ್ಯ ಸಾಲ ಎಂದು ವರ್ಗೀಕರಿಸಲಾಗಿರುತ್ತದೆ. ಆಂತರಿಕ ಸಾಲವನ್ನು ಮಾರಾಟ ಮಾಡಬಹುದಾದ ಮತ್ತು ಮಾರಾಟ ಮಾಡಲಾಗದ ಭದ್ರತೆಗಳಾಗಿ (ಸೆಕ್ಯೂರಿಟೀಸ್‌) ವರ್ಗೀಕರಿಸಲಾಗಿದೆ.

ಮಾರಾಟ ಮಾಡಬಹುದಾದ ಸರ್ಕಾರಿ ಭದ್ರತೆಗಳಲ್ಲಿ ಹರಾಜಿನ ಮೂಲಕ ನೀಡಲಾಗುವ ಜಿ-ಸೆಕ್‌ಗಳು (ಗವರ್ನ್‌ಮೆಂಟ್‌ ಸೆಕ್ಯೂರಿಟಿಗಳು) ಮತ್ತು ಟಿ-ಬಿಲ್‌ (ಟ್ರೆಷರಿ ಬಿಲ್‌)ಗಳು ಸೇರಿವೆ. ಮಾರಾಟ ಮಾಡಲಾಗದ ಭದ್ರತೆಗಳಲ್ಲಿ ರಾಜ್ಯ ಸರ್ಕಾರಕ್ಕೆ ನೀಡಲಾಗುವ ಮಧ್ಯಂತರ ಟ್ರೆಷರಿ ಬಿಲ್‌ಗಳು, ರಾಷ್ಟ್ರೀಯ ಸಣ್ಣ ಉಳಿತಾಯ ನಿಧಿಗೆ ನೀಡಲಾಗುವ ವಿಶೇಷ ಭದ್ರತೆಗಳು ಸೇರಿವೆ.

ತೆರಿಗೆ ಮತ್ತು ತೆರಿಗೆಯೇತರ ಸಂಭಾವ್ಯ ಸಂಪನ್ಮೂಲ ಕ್ರೋಢೀಕರಣ ಮತ್ತು ಖರ್ಚಿನ ಗುರಿಗಳ ಆಧಾರದ ಮೇಲೆ, ಸರ್ಕಾರವು ಬಜೆಟ್‌ನಲ್ಲಿ ಹಣಕಾಸಿನ ಸಾಲದ ಯೋಜನೆಗಳನ್ನು ಘೋಷಿಸುತ್ತದೆ.

  1. ಸಾರ್ವಜನಿಕ ಸಾಲದ ಗಾತ್ರ ಎಷ್ಟು?
    ಸರ್ಕಾರದ ಸಾಲದ ಗಾತ್ರವು ಮುಖ್ಯವಾಗಿದೆ. ಏಕೆಂದರೆ ವಾರ್ಷಿಕ ಪಾವತಿಗಳ ಗಮನಾರ್ಹ ಭಾಗ (ಸುಮಾರು 25 ಪ್ರತಿಶತ) ಹಿಂದಿನ ಸಾಲದ ಬಡ್ಡಿಗೇ ವೆಚ್ಚವಾಗುತ್ತಿರುತ್ತವೆ. ಸರ್ಕಾರದ ಸಾಲವು ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿಯ ಸುಮಾರು ಶೇ. 62ರಷ್ಟು ಎಂದು ಅಂದಾಜಿಸಲಾಗಿದೆ.
  2. ಸಾಲ-ಜಿಡಿಪಿ ಅನುಪಾತ ಎಂದರೇನು?
    ಸಾಲ-ಜಿಡಿಪಿ ಅನುಪಾತವು ದೇಶವು ತನ್ನ ಸಾಲವನ್ನು ಎಷ್ಟರ ಮಟ್ಟಿಗೆ ಪಾವತಿಸಬಹುದು ಎಂಬುದನ್ನು ಸೂಚಿಸುತ್ತದೆ. ಹೂಡಿಕೆದಾರರು ಸಾಮಾನ್ಯವಾಗಿ ಸಾಲ – ಜಿಡಿಪಿ ಅನುಪಾತವನ್ನು ನೋಡುತ್ತಾರೆ. ಮತ್ತು ಇದರ ಮೇಲೆ ಸರಕಾರದ ಸಾಲ ಪಾವತಿ ಮಾಡುವ ಸಾಮರ್ಥ್ಯವನ್ನು ನಿರ್ಣಯಿಸುತ್ತಾರೆ. ಹೆಚ್ಚಿನ ಸಾಲ-ಜಿಡಿಪಿ ಅನುಪಾತಗಳಿಂದ ವಿಶ್ವಾದ್ಯಂತ ಆರ್ಥಿಕ ಬಿಕ್ಕಟ್ಟುಗಳು ಸಂಭವಿಸುತ್ತಿವೆ. ಐರೋಪ್ಯ ಸಾಲದ ಬಿಕ್ಕಟ್ಟು, ಸರ್ಕಾರದ ಪುಸ್ತಕಗಳ ಮೇಲೆ ದಾಖಲಾಗಿರುವ ಹೇರಳವಾದ ಸಾಲದ ಪರಿಣಾಮವಾಗಿದೆ. ಇದನ್ನು ಪಾವತಿ ಪಾಡುವುದೇ ಕಷ್ಟ ಸಾಧ್ಯವಾಗಿದೆ.

    ಇದೇ ಕಾರಣಕ್ಕಾಗಿ, ಸರ್ಕಾರದ ಕೊರತೆಯ ಸ್ವರೂಪವನ್ನು ನೋಡುವುದು ಮುಖ್ಯವಾಗಿದೆ. ಬಂಡವಾಳ ಸ್ವತ್ತುಗಳನ್ನು ಸೃಷ್ಟಿಸುವುದಕ್ಕಾಗಿ ಅಥವಾ ಸಬ್ಸಿಡಿಗಳು ಮತ್ತು ಇತರ ಯಾವುದೇ ಆಸ್ತಿಯ ಸೃಷ್ಟಿಗೆ ಕಾರಣವಾಗದ ಇತರ ವೆಚ್ಚಗಳ ಮೇಲೆ ಸರ್ಕಾರವು ಹೆಚ್ಚು ಸಾಲವನ್ನು ಪಡೆದರೆ ಅದರಿಂದ ಹೆಚ್ಚಿನ ಉಪಯೋಗವಿಲ್ಲ. ವಿಶೇಷವಾಗಿ ನಿಧಾನಗತಿ ಆರ್ಥಿಕತೆಯ ಸಮಯದಲ್ಲಿ ಸರ್ಕಾರ ಬಂಡವಾಳ ವೆಚ್ಚವನ್ನು ಮಾಡಿದಲ್ಲಿ ಖಾಸಗಿ ಹೂಡಿಕೆಯನ್ನು ಸೆಳೆಯಲು ಸಹಾಯವಾಗುತ್ತದೆ.

  3. ಜಿಡಿಪಿ-ಸಾಲದ ಸ್ವೀಕಾರಾರ್ಹ ಅನುಪಾತ ಮಟ್ಟವಿದೆಯೇ?
    ಎಫ್‌ಆರ್‌ಬಿಎಂ (ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣೆ ಕಾಯಿದೆ) ಮೇಲಿನ ಎನ್‌ಕೆ ಸಿಂಗ್ ಸಮಿತಿಯು ಕೇಂದ್ರ ಸರ್ಕಾರಕ್ಕೆ ಶೇಕಡ 40 ಮತ್ತು ರಾಜ್ಯಗಳಿಗೆ ಶೇಕಡ 20 ರ ಸಾಲ – ಜಿಡಿಪಿ ಅನುಪಾತವನ್ನು ನಿಗದಿಪಡಿಸಿದೆ. ಈ ಮೂಲಕ ಒಟ್ಟು ಶೇ. 60 ಸಾಮಾನ್ಯ ಸರ್ಕಾರಿ ಸಾಲ – ಜಿಡಿಪಿ ಅನುಪಾತದ ಗುರಿ ನೀಡಿದೆ.
  4. ಪಿಡಿಎಂಎ ಎಂದರೇನು?
    2015ರ ತಮ್ಮ ಬಜೆಟ್‌ ಭಾಷಣದಲ್ಲಿ ಅರುಣ್ ಜೇಟ್ಲಿ, ಸಾರ್ವಜನಿಕ ಸಾಲ ನಿರ್ವಹಣಾ ಸಂಸ್ಥೆ (ಪಿಡಿಎಂಎ) ಎಂಬ ಶಾಸನಬದ್ಧ ಸಂಸ್ಥೆಯನ್ನು ರಚಿಸಲು ಯೋಜಿಸಿದ್ದರು. ಆರ್‌ಬಿಐ ಬಡ್ಡಿದರಗಳನ್ನು ನಿಗದಿಪಡಿಸುವುದಲ್ಲದೆ, ಸರ್ಕಾರಿ ಬಾಂಡ್‌ಗಳ ಖರೀದಿ ಮತ್ತು ಮಾರಾಟವನ್ನೂ ನಡೆಸಿದಾಗ ಹಿತಾಸಕ್ತಿ ಸಂಘರ್ಷದ ಸಮಸ್ಯೆ ಹುಟ್ಟಿಕೊಂಡಿತು. ಪಿಡಿಎಂಎ ಜಾರಿಗೆ ಬರುವವರೆಗೆ, ಸಾರ್ವಜನಿಕ ಸಾಲದ ನಿರ್ವಹಣೆಗೆ ಸಂಬಂಧಿಸಿದಂತೆ ಸರ್ಕಾರವು ಮಧ್ಯಂತರ ವ್ಯವಸ್ಥೆಯನ್ನು ರಚಿಸಿತು. ಸಾರ್ವಜನಿಕ ಸಾಲ ನಿರ್ವಹಣಾ ಕೋಶವು ಕ್ರಮೇಣ ಸಾರ್ವಜನಿಕ ಸಾಲ ನಿರ್ವಹಣಾ ಸಂಸ್ಥೆಗೆ (ಪಿಡಿಎಂಎ) ದಾರಿ ಮಾಡಿಕೊಡಲಿದೆ.



Read more…

[wpas_products keywords=”deal of the day”]