Karnataka news paper

ನೈಟ್ ಕರ್ಫ್ಯೂ, 50:50 ರೂಲ್ಸ್ ಕ್ಯಾನ್ಸಲ್ ಆದರೂ ಥಿಯೇಟರ್‌ಗಳಿಗೆ ಮುಂದುವರಿದ ನಿರ್ಬಂಧ!


ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಿಢೀರ್ ಏರಿಕೆಯಾದ್ಮೇಲೆ, ಸೋಂಕನ್ನು ನಿಯಂತ್ರಿಸಲು ನೈಟ್ ಕರ್ಫ್ಯೂ, 50:50 ರೂಲ್ಸ್, ವೀಕೆಂಡ್ ಕರ್ಫ್ಯೂ ನಿಯಮಗಳನ್ನು ಕರ್ನಾಟಕ ಸರ್ಕಾರ ಜಾರಿಗೆ ತಂದಿತ್ತು. ಕೋವಿಡ್ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದರೂ, ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಕಡಿಮೆ ಇರುವುದರಿಂದ ವೀಕೆಂಡ್ ಕರ್ಫ್ಯೂ ನಿಯಮವನ್ನು ಸರ್ಕಾರ ತೆರವುಗೊಳಿಸಿತ್ತು. ಇದೀಗ ನಿಯಮಗಳನ್ನು ಸರ್ಕಾರ ಮತ್ತಷ್ಟು ಸಡಿಲಗೊಳಿಸಿದೆ. ಜನವರಿ 31 ರಿಂದ ರಾಜ್ಯದಲ್ಲಿ ನೈಟ್ ಕರ್ಫ್ಯೂವನ್ನು ರದ್ದುಗೊಳಿಸಲಾಗಿದೆ. ಹಾಗೇ 50:50 ರೂಲ್ಸ್‌ಅನ್ನೂ ಕ್ಯಾನ್ಸಲ್ ಮಾಡಲಾಗಿದೆ. ಆದರೆ, ಇದು ಥಿಯೇಟರ್‌ಗಳಿಗೆ ಅನ್ವಯವಾಗುವುದಿಲ್ಲ. ಸಿನಿಮಾ ಮಂದಿರಗಳ ಮೇಲೆ ಹೇರಲಾಗಿದ್ದ ನಿರ್ಬಂಧಗಳು ಮುಂದುವರೆಯಲಿದೆ..!

ಹೌದು.. ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ ನಡೆಯಿತು. ಸಭೆಯಲ್ಲಿ ನೈಟ್ ಕರ್ಫ್ಯೂ ಹಾಗೂ 50:50 ನಿಯಮಗಳನ್ನು ಕ್ಯಾನ್ಸಲ್ ಮಾಡಲು ನಿರ್ಧರಿಸಲಾಗಿದೆ. ಅದರಂತೆ ಜನವರಿ 31ರಿಂದ ನೈಟ್ ಕರ್ಫ್ಯೂ ಕ್ಯಾನ್ಸಲ್ ಆಗಲಿದೆ. ಹಾಗೇ, ಸಾರ್ವಜನಿಕ ಸಾರಿಗೆ, ಪಬ್, ರೆಸ್ಟೋರೆಂಟ್, ಹೋಟೆಲ್, ಸರ್ಕಾರಿ ಕಚೇರಿಗಳಲ್ಲಿ ಹೇರಲಾಗಿದ್ದ 50:50 ರೂಲ್ಸ್‌ಅನ್ನು ರದ್ದು ಮಾಡಲಾಗಿದೆ. ಜೊತೆಗೆ ಜನವರಿ 31ರಿಂದ ಎಲ್ಲಾ ತರಗತಿಗಳನ್ನು ಪ್ರಾರಂಭ ಮಾಡಬಹುದಾಗಿದೆ.

ಕೋವಿಡ್ 19 ನಿರ್ಬಂಧ: ಐಸಿಯುನಲ್ಲಿ ಚಿತ್ರಮಂದಿರಗಳು
ಆದರೆ, ಚಿತ್ರಮಂದಿರ, ಸ್ವಿಮ್ಮಿಂಗ್ ಪೂಲ್, ಜಿಮ್‌ಗಳಲ್ಲಿ ಮಾತ್ರ 50% ರಷ್ಟು ಜನರಿಗೆ ಅವಕಾಶ ನೀಡಲಾಗಿದೆ. ಜನವರಿ ಆರಂಭದಿಂದಲೂ ಥಿಯೇಟರ್‌ಗಳಲ್ಲಿ 50% ಆಸನ ಭರ್ತಿಗೆ ಮಾತ್ರ ಅವಕಾಶ ನೀಡಿರುವುದರಿಂದ ಅನೇಕ ಸಿನಿಮಾಗಳು ರಿಲೀಸ್ ಆಗಿಲ್ಲ. ಈಗಲೂ ಅದೇ ರೂಲ್ಸ್ ಮುಂದುವರೆಸಿರುವುದರಿಂದ ಸಿನಿಮಾ ಮಂದಿಗೆ ನಿರಾಸೆ ಉಂಟಾಗಿದೆ.

ಸಾರ್ವಜನಿಕರಿಗೆ ಗುಡ್ ನ್ಯೂಸ್: ನೈಟ್‌ ಕರ್ಫ್ಯೂ, 50-50 ರೂಲ್ಸ್ ರದ್ದು!
ಮಲತಾಯಿ ಧೋರಣೆ ಯಾಕೆ?
‘’ಬೇರೆ ಉದ್ಯಮಗಳಿಗೆ ಅವಕಾಶ ಕೊಟ್ಟಿರುವ ಸರ್ಕಾರ ಚಿತ್ರೋದ್ಯಮಕ್ಕೆ ಯಾಕೆ ಸಂಪೂರ್ಣ ಅವಕಾಶ ನೀಡಿಲ್ಲ? ಈಗಾಗಲೇ ನಿರ್ಮಾಪಕರು, ಕಲಾವಿದರು ಬೀದಿಗೆ ಬಂದಿದ್ದಾರೆ. ಥಿಯೇಟರ್‌ಗಳಿಗೆ ಆದಷ್ಟು ಬೇಗ 100% ಆಸನ ಭರ್ತಿಗೆ ಅವಕಾಶ ನೀಡಲಿ’’ ಎಂದು ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯದರ್ಶಿ ಎನ್.ಎಂ.ಸುರೇಶ್ ಒತ್ತಾಯಿಸಿದ್ದಾರೆ.

ಚಿತ್ರಮಂದಿರದ ಮಾಲೀಕರು ಹೇಳುವುದೇನು?
50% ಸೀಟಿಂಗ್ ಪದ್ಧತಿಯಲ್ಲಿ ಎಲ್ಲಾ ಚಿತ್ರಮಂದಿರಗಳು ತೆರೆದಿಲ್ಲ. 100% ಸೀಟಿಂಗ್ ಪದ್ಧತಿಯಿಲ್ಲದೆ ಸಿನಿಮಾಗಳು ಬಿಡುಗಡೆಯಾಗುವುದಿಲ್ಲ. ಹೀಗಾಗಿ, ಚಿತ್ರಮಂದಿರದ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ‘’ನಾವು ಕೋವಿಡ್‌ನ ಎಲ್ಲಾ ನಿಯಮಗಳನ್ನು ಪಾಲಿಸುತ್ತಿದ್ದೇವೆ. ಎರಡು ಡೋಸ್‌ ವ್ಯಾಕ್ಸಿನ್‌ ಆದವರನ್ನು ಮಾತ್ರ ಚಿತ್ರಮಂದಿರದೊಳಗೆ ಬಿಡುವುದು, ಸ್ಯಾನಿಟೈಸೇಶನ್‌, ಕಡ್ಡಾಯ ಮಾಸ್ಕ್‌ ಧರಿಸುವಿಕೆ ಹೀಗೆ ಹಲವು ನಿಯಮಗಳನ್ನು ಪಾಲಿಸುತ್ತಿದ್ದೇವೆ. ಬೇಕಾದರೆ ಇಂತಹ ಇನ್ನೂ ನಿಯಮಗಳನ್ನು ಜಾರಿಗೆ ತಂದರೆ ನಾವು ಪಾಲಿಸುತ್ತೇವೆ. ಆದರೆ ನಿರ್ಬಂಧಗಳನ್ನು ವಿಧಿಸದೇ ಸಿನಿಮಾ ಬಿಡುಗಡೆಗೆ ಅವಕಾಶ ನೀಡಬೇಕು’’ ಎಂಬುದು ಚಿತ್ರಮಂದಿರದ ಮಾಲೀಕರ ಆಗ್ರಹ.

ಚಿತ್ರಮಂದಿರಗಳ ಮೇಲಿನ ನಿರ್ಬಂಧಗಳು ಮುಂದುವರೆದರೆ ನಿರ್ಮಾಪಕರು, ವಿತರಕರು, ಪ್ರದರ್ಶಕರು ಸಂಕಷ್ಟದಲ್ಲಿ ಸಿಲುಕಲಿದ್ದಾರೆ. ಹೀಗಾಗಿ, 50:50 ನಿರ್ಬಂಧವನ್ನು ತೆಗೆಯುವಂತೆ ಮನವಿ ಮಾಡಲು ವಾಣಿಜ್ಯ ಮಂಡಳಿಯ ಸದಸ್ಯರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಲು ಮುಂದಾಗಿದ್ದಾರೆ.



Read more

[wpas_products keywords=”deal of the day party wear dress for women stylish indian”]