Karnataka news paper

ಬಾಲ್ಯದಲ್ಲೇ ಗ್ಯಾಜೆಟ್ ಗೀಳು: ಮಗುವಿನ ತೊದಲು ನುಡಿ, ಮಕ್ಕಳಿಗೆ ಮಾತು ಬರಲು ವಿಳಂಬಕ್ಕೆ ಕಾರಣವಾಗಬಹುದು!


The New Indian Express

ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳು ಮತ್ತು ಮೊಬೈಲ್ ಫೋನ್‌ಗಳು ಇತ್ತೀಚಿನ ದಿನಗಳಲ್ಲಿ ಅಂಬೆಗಾಲಿಡುವ ಮಗು ಮತ್ತು ಶಾಲಾ ಮಕ್ಕಳಿಗೆ ಆಟಿಕೆಗಳು ವಸ್ತುಗಳಾಗಿ ಹೋಗಿವೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ, ಕೈಯಲ್ಲಿ ಗ್ಯಾಜೆಟ್ ಗಳಿಲ್ಲ ಮಕ್ಕಳನ್ನು ನೋಡುವುದು ವಿರಳವಾಗಿ ಹೋಗುವ ದಿನಗಳನ್ನು ಶೀಘ್ರದಲ್ಲೇ ನಾವು ನೋಡಲಿದ್ದೇವೆ. 

ಕೋವಿಡ್’ಗೂ ಮುನ್ನ ಶಾಲೆ, ಆಟ-ಪಾಠಗಳತ್ತ ಮುಳುಗಿ ಗ್ಯಾಜೆಟ್ ಹಾಗೂ ಮೊಬೈಲ್ ಗಳನ್ನು ಅಲ್ಪಸ್ವಲ್ಪ ಬಳಕೆ ಮಾಡುತ್ತಿದ್ದ ಮಕ್ಕಳು, ಸಾಂಕ್ರಾಮಿಕ ರೋಗ ಎದುರಾದ ಬಳಿಕವಂತೂ ಗ್ಯಾಜೆಟ್’ಗಳು, ಮೊಬೈಗಳ ವಿಡಿಯೋ ಹಾಗೂ ಆಟಗಳಲ್ಲಿ ಮುಳುಗಿ ಹೋಗುತ್ತಿದ್ದಾರೆ. 

ಕೋವಿಡ್ ಸಾಂಕ್ರಾಮಿಕ ರೋಗದ ಬಳಿಕ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ಮೇಲೆ ಮಕ್ಕಳು ಹೆಚ್ಚು ಅವಲಂಬನೆಯಾಗುತ್ತಿರುವುದರಿಂದ ಈ ಸಾಧನಗಳು ಮಕ್ಕಳ ಮನಸ್ಸು ಹಾಗೂ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿವೆ. ಪ್ರಮುಖವಾಗಿ ಮೂರು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿವೆ. 

ಇತ್ತೀಚಿನ ದಿನಗಳಲ್ಲಿ 3 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಮಾತು ವಿಳಂಬವಾಗುತ್ತಿರುವ ದೂರುಗಳು ಹೇಳಿಕೊಂಡು ಬರುತ್ತಿರುವ ಪೋಷಕರ ಸಂಖ್ಯೆ ಹೆಚ್ಚಾಗಿದೆ. ಶಾಪಿಂಗ್ ಮಾಲ್‌ಗಳು, ರೆಸ್ಟೊರೆಂಟ್‌ಗಳು, ಕುಟುಂಬದ ಕಾರ್ಯಕ್ರಮಗಳಲ್ಲಿ ಅಥವಾ ಮನೆಗಳಲ್ಲಿ ಮಕ್ಕಳ ಗಮನ ಬೇರೆಡೆಗೆ ಹರಿಯದಂತೆ ಮಾಡಲು ಪೋಷಕರು ನಿರ್ಲಕ್ಷ್ಯದಿಂದ ವರ್ತಿಸಿ ಮಕ್ಕಳಿಗೆ ಮೊಬೈಲ್ ಗಳ ಕೊಟ್ಟು ಕೂರಿಸುತ್ತಿದ್ದಾರೆ. 1-3 ವರ್ಷ ಮಕ್ಕಳು ಮಾತು ಕಲಿಯಲು ನಿರ್ಣಾಯಕ ಸಮಯವಾಗಿರುತ್ತದೆ. ಇಂತಹ ಸಮಯದಲ್ಲಿ ಪೋಷಕರ ಪಾತ್ರ, ಮನೆಯ ವಾತಾವರಣ ಮುಖ್ಯ ಪಾತ್ರವಹಿಸುತ್ತದೆ. 

ಕಳೆದ ಒಂದು ವರ್ಷದಲ್ಲಿ ಮಕ್ಕಳಲ್ಲಿ (4 ವರ್ಷಕ್ಕಿಂತ ಕಡಿಮೆ ವಯಸ್ಸಿನ) ಮಾತು ವಿಳಂಬವಾಗುತ್ತಿರುವ ಕುರಿತು 300 ಪ್ರಕರಣಗಳು ವರದಿಯಾಗಿವೆ. ಮಾತನಾಡಲು ಪ್ರಾರಂಭಿಸಿದ ಮಕ್ಕಳು ಇದ್ದಕ್ಕಿದ್ದಂತೆ ಆ ಬೆಳವಣಿಗೆಯಿಂದ ಹಿಂದೆ ಸರಿಯುತ್ತಾರೆ. ಬಳಿಕ ಪದಗಳನ್ನು ಉಚ್ಚರಿಸಲು ಕಷ್ಟಪಡುತ್ತಾರೆ ಎಂದು ಪೋಷಕರು ಹೇಳುತ್ತಿದ್ದಾರೆ. 

ಸಾಮಾನ್ಯವಾಗಿ, ಮಗುವಿಗೆ ಒಂದು ವರ್ಷ ತುಂಬುತ್ತಿದ್ದಂತೆಯೇ ಮಾತನಾಡಲು ಪ್ರಾರಂಭಿಸುತ್ತದೆ. ಎರಡು ವರ್ಷಗಳಲ್ಲಿ, ಮಗು ಸುಮಾರು 20 ಪದಗಳು ಮತ್ತು ಎರಡು ಪದಗಳ ವಾಕ್ಯಗಳನ್ನು ಹೇಳಬೇಕು. ಮೂರು ವರ್ಷಕ್ಕೆ ಕಾಲಿಟ್ಟಾಗ, 600-800 ಪದಗಳು ಮತ್ತು ಮೂರು-ಪದ ವಾಕ್ಯಗಳನ್ನು ಹೇಳಬೇಕು. ಈ ಅವಧಿಯಲ್ಲಿ ಭಾಷಾ ಬೆಳವಣಿಗೆಯಲ್ಲಿ ಘಾತೀಯ ಹೆಚ್ಚಳವನ್ನು ನಿರೀಕ್ಷಿಸಲಾಗುತ್ತದೆ ಎಂದು ಮಕ್ಕಳ ವೈದ್ಯ ಮತ್ತು ಮಕ್ಕಳ ಆರೈಕೆ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಅಬ್ರಹಾಂ ಪಾಲ್ ಹೇಳಿದ್ದಾರೆ.

ಗ್ಯಾಜೆಟ್, ಮೊಬೈಲ್ ಬಳಕೆ ಮತ್ತು ಮಕ್ಕಳ ಮಾತು, ತೊದಲು ನುಡಿ ನಡುವೆ ಮಹತ್ವದ ಸಂಬಂಧವಿದೆ ಎಂದು ಈಗಾಗಲೇ ಸಾಕಷ್ಟು ಅಧ್ಯಯನಗಳು ಸಾಬೀತುಪಡಿಸಿವೆ. ಈ ಅಧ್ಯಯನಗಳಲ್ಲಿ, ಮಕ್ಕಳು ಮಾತುಗಳನ್ನು ಅರ್ಥಮಾಡಿಕೊಳ್ಳುವುದು ಹಾಗೂ ಗ್ರಹಿಸಲು ಸಾಧ್ಯವಾಗುತ್ತಿದ್ದು, ಸಂವಹನ ಮಾಡಲು ವಿಫಲವಾಗುತ್ತಿರುವುದು ಕಂಡು ಬಂದಿದೆ. ಮಕ್ಕಳು 30 ನಿಮಿಷ ಮೊಬೈಲ್ ಹಾಗೂ ಗ್ಯಾಜೆಟ್ ಗಳ ಬಳಕೆ ಮಾಡಿದರೂ, ಅದು ಅವರ ಮಾತಿನ ಮೇಲೆ ಸೇ.49ರಷ್ಟು ಪರಿಣಾಮ ಬೀರಲಿದೆ ಎಂದು ಅಧ್ಯಯನಗಳು ಹೇಳಿವೆ. 

ಜೀವನದ ಆರಂಭಿಕ ಹಂತಗಳು ಮಗುವಿನ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಮೆದುಳಿನಲ್ಲಿ ಹೆಚ್ಚಿನ ಅಗತ್ಯ ಬೆಳವಣಿಗೆಗಳು ನಡೆಯುವ ಸಮಯ ಇದಾಗಿದ್ದು, ಅವುಗಳಲ್ಲಿ ಅತ್ಯಂತ ಪ್ರಮುಖವಾದದ್ದು ಭಾಷೆ ಮತ್ತು ಮಾತಿನ ಬೆಳವಣಿಗೆ. ಮೆದುಳನ್ನು ಉತ್ತೇಜಿಸಿದರೆ ಮಾತ್ರ, ಸಂಪರ್ಕಗಳು ಬಲಗೊಳ್ಳುತ್ತವೆ. ಅದು ಸಾಧ್ಯವಾಗದಿದ್ದರೆ, ಅದು ಜೀವಕೋಶಗಳ ಸಮರುವಿಕೆಯನ್ನು ಉಂಟು ಮಾಡುತ್ತದೆ ಎಂದು ಡಾ.ಅಬ್ರಹಾಂ ಅವರು ಹೇಳಿದ್ದಾರೆ. 

ಅಭಿವ್ಯಕ್ತಿಗಳು, ಪದಗಳ ಬಳಕೆ, ಧ್ವನಿ ಮತ್ತು ಸನ್ನೆಗಳು ಭಾಷಾ ಕಲಿಕೆಗೆ ಅಗತ್ಯವಾದವುಗಳಾಗಿವೆ. “ಮಗುವು ಮೊಬೈಲ್ ಫೋನ್‌ಗಳಲ್ಲಿ ಮುಳುಗಿದಾಗ, ಅವನು/ಅವಳು ಸುತ್ತಮುತ್ತಲಿನ ಯಾವುದೇ ಆಸಕ್ತಿದಾಯಕ ಅನುಭವಗಳನ್ನು ಅನುಭವಿಸುವುದಿಲ್ಲ. ಅವರ ಗಮನ ಎಲ್ಲಿರಬೇಕು ಎಂಬುದನ್ನು ತೆರೆಯ ಮೇಲಿನ ದೃಶ್ಯಗಳು ಅವರಿಗೆ ತಿಳಿಸುತ್ತವೆ. ಕಾಲ ಕಳೆಯುತ್ತಿದ್ದಂತೆಯೇ ಅದು ಮಗುವಿನ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ. ಇಹದರಿಂದ ಮಗುವು ಪದಗಳ ಮೇಲೆ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ. ಇದು ಮಕ್ಕಳ ಭಾಷೆ ಮತ್ತು ಸಾಮಾಜಿಕ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದ ಎಂದು ತಿಳಿಸಿದ್ದಾರೆ. 

ಸಾಂಕ್ರಾಮಿಕ ರೋಗದಿಂದಾಗಿ, ಪೋಷಕರು ಮನೆಯಿಂದಲೇ ಕೆಲಸ ಮಾಡುತ್ತಿರುವುದರಿಂದ ಅವರಿಗೆ ತಮ್ಮ ಮಕ್ಕಳೊಂದಿಗೆ ಕಾಲ ಕಳೆಯಲು ಸಾಧ್ಯವಾಗುತ್ತಿಲ್ಲ. ಮಕ್ಕಳು ಹೈಪರ್ ಆ್ಯಕ್ಟಿವ್ ಆಗಿರುವುದರಿಂದ ಅವರನ್ನು ನಿಯಂತ್ರಿಸಲು ಪೋಷಕರು ಮೊಬೈಲ್, ಗ್ಯಾಜೆಟ್ ಗಳು ಹಾಗೂ ಟಿವಿ ಗಳ ಬಳಕ ಮಾಡುತ್ತಿದ್ದಾರೆ. ಇದು ಮಕ್ಕಳಿಗೆ ಚಟವಾಗಿ ಪರಿಣಮಿಸುತ್ತಿದೆ. ಪ್ರತೀ ದಿನ ಮಕ್ಕಳು ಈ ಗ್ಯಾಜೆಟ್ ಗಳೊಂದಿಗೆ 6 ಗಂಟೆಗಳ ಕಾಲ ಕಳೆಯುತ್ತಿದ್ದಾರೆ. ಇದು ಅವರ ಆರೋಗ್ಯ ಹಾಗೂ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತಿದೆ. ಕುಟುಂಬದೊಂದಿಗೆ ಸಂವಹ ಕಡಿಮೆ ಮಾಡುತ್ತಿದ್ದಾರೆ. ಮಕ್ಕಳ ಮೇಲಾಗುವ ಪರಿಣಾಮಗಳನ್ನು ದೂರ ಮಾಡಲು ಪೋಷಕರು ಮಕ್ಕಳೊಂದಿಗೆ ಕಾಲ ಕಳೆಯಬೇಕು. ಈ ಸಮಯದಲ್ಲಿ ಮೊಬೈಲ್, ಗ್ಯಾಜೆಟ್ ಗಳಿಗೆ ಸ್ಥಾನ ಇರಬಾರದು ಎಂದು ಕೊಚ್ಚಿ ಮೂಲದ ಮಕ್ಕಳ ತಜ್ಞರು ಹೇಳಿದ್ದಾರೆ. 

ಗ್ಯಾಜೆಟ್, ಮೊಬೈಲ್ ಗಳಿಂದ ಮಕ್ಕಳ ಮೇಲಾಗುವ ದುಷ್ಪರಿಣಾಮಗಳು ಇಂತಿವೆ…

  • ಇತರೆ ವಿಚಾರಗಳ ಮೇಲೆ ಗಮನ ಕಡಿಮೆ.
  • ಆಟಿಸಂ ಸಮಸ್ಯೆ 
  • ಸಾಮಾನ್ಯ ಬೆಳವಣಿಗೆಯಲ್ಲಿ ವಿಳಂಬ
  • ಆಲಿಸುವಿಕೆಯ ಕೊರತೆ
  • ಕಡಿಮೆ ಬುದ್ಧಿಮತ್ತೆಯ ಸಾಮರ್ಥ್ಯಗಳು
  • ವ್ಯಕ್ತಪಡಿಸುವ ಭಾಷಾ ತೊಂದರೆಗಳು
  • ಉತ್ತೇಜನದ ಕೊರತೆ
  • ಉತ್ತಮ ಮಾರ್ಗಗಳು ಉತ್ತೇಜಿಸಲ್ಪಟ್ಟಿಲ್ಲ
  • ದೈಹಿಕ ಚಟುವಟಿಕೆಗಳಿಲ್ಲದೆ ಬೊಜ್ಜ ಸಮಸ್ಯೆ ಕಾಡಬಹುದು. 
  • ಅರಿವಿನ ಕೊರತೆ 

ಸಮಸ್ಯೆಯಿಂದ ದೂರ ಉಳಿಯಲು ಏನು ಮಾಡಬೇಕು? 

  • ಪಾಲಕರು ಮಕ್ಕಳೊಂದಿಗೆ ಸಾಕಷ್ಟು ಸಮಯ ಕಳೆಯಬೇಕು
  • ಮಕ್ಕಳೊಂದಿಗೆ ಸಂವಹನ ನಡೆಯುವುದು ಬಹಳ ಮುಖ್ಯ.
  • ಮಕ್ಕಳಿಗೆ ಇಷ್ಟವಾಗುವ ಹಾಡುಗಳು, ರೈಮ್ಸ್ ಗಳನ್ನು ಪ್ಲೈ ಮಾಡಿ. 
  • ಎಲೆಕ್ಟ್ರಾನಿಕ್ ಸಾಧನಗಳ ಬಳಕೆ ತೀವ್ರವಾಗಿದ್ದರೆ, ಅದರಿಂದ ಅವರ ಗಮನ ಬೇರೆಡೆಗೆ ಸೆಳೆಯಲು ಚಿಕಿತ್ಸೆ ಕೊಡಿಸಿ.



Read more

[wpas_products keywords=”deal of the day”]