ಆದಾಯ ತೆರಿಗೆ ರಿಲೀಫ್‌ಗೃಹ ಸಾಲದ ಬಡ್ಡಿದರದ ಮೇಲಿನ ತೆರಿಗೆ ವಿನಾಯಿತಿಯನ್ನು ಹೆಚ್ಚಿಸುವ ಮೂಲಕ ಮನೆ ಖರೀದಿದಾರರಿಗೆ ಪ್ರೋತ್ಸಾಹ ನೀಡಬೇಕಿದೆ. ಗೃಹ ಸಾಲದ ಬಡ್ಡಿದರದ ಮೇಲೆ ತೆರಿಗೆ ವಿನಾಯಿತಿ ಈಗ 2 ಲಕ್ಷ ರೂ. ಇದೆ. ಇದನ್ನು 5 ಲಕ್ಷ ರೂ.ಗೆ ಹೆಚ್ಚಿಸಬೇಕಿದೆ ಎಂದು ಆನ್‌ಲೈನ್ ಪ್ರಾಪರ್ಟಿ ಮಾರಾಟ ತಾಣವೊಂದರ ಸಿಇಒ ಅಮಿತ್ ಅಗರ್‌ವಾಲ್ ಹೇಳಿದ್ದಾರೆ.
ಅಫರ್ಡೆಬಲ್ ಮರು ವ್ಯಾಖ್ಯಾನ
“45 ಲಕ್ಷ ರೂ. ನೊಳಗಿನ ಮನೆಗಳನ್ನು ಈಗ ಅಫರ್ಡೆಬಲ್ ವಸತಿಯೆಂದು ಪರಿಗಣಿಸಲಾಗುತ್ತದೆ. ಆದರೆ, ಇದನ್ನು ಕನಿಷ್ಠ 65 ಲಕ್ಷ ರೂ.ಗೆ ಹೆಚ್ಚಿಸಬೇಕಿದೆ. ಈಗಾಗಲೇ ಅಫರ್ಡೆಬಲ್ ಹೌಸಿಂಗ್‌ಗೆ ಸರಕಾರ ಸಾಕಷ್ಟು ಕೊಡುಗೆ ನೀಡಿದೆ. ಈ ಬಜೆಟ್‌ನಲ್ಲಿ ಅಫರ್ಡೆಬಲ್ ವಸತಿಯನ್ನು ಮರು ವ್ಯಾಖ್ಯಾನ ಮಾಡಿ ಇನ್ನಷ್ಟು ಕೊಡುಗೆಯನ್ನು ನೀಡಿ ವಸತಿ ಬೇಡಿಕೆ ಹೆಚ್ಚಿಸಬೇಕಿದೆ” ಎಂದು ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿ ಅಭಿಲಾಷ್ ಹೇಳಿದ್ದಾರೆ.
ಸೆಕ್ಷನ್ 80ಸಿ ತಿದ್ದುಪಡಿ
“ಆರೋಗ್ಯಕಾರಿ ಬ್ಯಾಂಕಿಂಗ್ ವ್ಯವಸ್ಥೆಯನ್ನು ರೂಪಿಸಲು ಈ ಬಜೆಟ್ ಆದ್ಯತೆ ನೀಡಬೇಕಿದೆ. ವಿಶೇಷವಾಗಿ ಆದಾಯ ತೆರಿಗೆ ಕಾಯಿದೆ, 1961ರ ಸೆಕ್ಷನ್ 80ಸಿಯನ್ನು ತಿದ್ದುಪಡಿ ಮಾಡಬೇಕಿದೆ. ಗೃಹ ಸಾಲ ಸಮಗ್ರ ಮೊತ್ತವನ್ನು ಮರುಪಾವತಿಸಲು ಅವಧಿ ಹೆಚ್ಚಿಸಲು ಪೂರಕವಾಗುವಂತೆ ಈ ಕಾಯಿದೆಯನ್ನು ತಿದ್ದುಪಡಿ ಮಾಡಬೇಕಿದೆ. ಇದರಿಂದ ಮನೆ ಖರೀದಿದಾರರಿಗೆ ಸಾಲ ತೀರಿಸಲು ಹೆಚ್ಚು ಅವಧಿ ದೊರಕುತ್ತದೆ,” ಎಂದು ರಿಯಲ್ ಎಸ್ಟೇಟ್ ಮಾರುಕಟ್ಟೆ ವಿಶ್ಲೇಷಕರಾದ ಕಿರಣ್ ರಾವ್ ಹೇಳಿದ್ದಾರೆ.
ಜಿಎಸ್‌ಟಿ ಕಡಿತ
ತುರ್ತಾಗಿ ಸರಕು ಮತ್ತು ಸೇವಾ ತೆರಿಗೆಯನ್ನು ಕಡಿತ ಮಾಡುವ ಅಗತ್ಯವಿದೆ. ಈಗ ಅಫರ್ಡೆಬಲ್ ವಸತಿಗೆ ಶೇ. 1ರಷ್ಟು ಮತ್ತು ಇತರೆ ಸೆಗ್ಮೆಂಟಿಗೆ ಶೇ. 5ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ. ಇದರೊಂದಿಗೆ ಸಿಮೆಂಟ್, ಉಕ್ಕು ಇತ್ಯಾದಿ ನಿರ್ಮಾಣ ಸಾಮಾಗ್ರಿಗಳ ಮೇಲೂ ಅಧಿಕ ಜಿಎಸ್‌ಟಿ ವಿಧಿಸಲಾಗುತ್ತದೆ. ಇದರಿಂದ ನಿರ್ಮಾಣ ವೆಚ್ಚ ಅಧಿಕವಾಗಿ ಅಫರ್ಡೆಬಲ್ ಮನೆ ನಿರ್ಮಾಣಕ್ಕೆ ತೊಂದರೆಯಾಗುತ್ತಿದೆ.
“ಮುದ್ರಾಂಕ ಶುಲ್ಕ ಮಾತ್ರವಲ್ಲದೆ ಜಿಎಸ್‌ಟಿ ದರ ಕಡಿತ ಮಾಡಿದರೆ ಮಾತ್ರ ಕಡಿಮೆ ದರದಲ್ಲಿ ವಿಲ್ಲಾ, ಮನೆಗಳನ್ನು ಗ್ರಾಹಕರಿಗೆ ನೀಡಲು ಸಾಧ್ಯವಾಗುತ್ತದೆ. ಈಗಾಗಲೇ ನಿರ್ಮಾಣ ಸಾಮಗ್ರಿಗಳ ದರ ಹೆಚ್ಚಾಗಿದ್ದು, ಅಧಿಕ ಜಿಎಸ್‌ಟಿಯ ಹೊರೆಯೂ ಇದೆ. ಈ ಬಜೆಟ್‌ನಲ್ಲಿರಿಯಲ್ ಎಸ್ಟೇಟ್‌ಗೆ ಸಂಬಂಧಪಟ್ಟ ಎಲ್ಲಾಉತ್ಪನ್ನಗಳ ಜಿಎಸ್‌ಟಿ ಕಡಿತ ಮಾಡಬೇಕಿದೆ,” ಎಂದು ಹೋಮ್‌ಲ್ಯಾಂಡ್ ಪ್ರಾಪರ್ಟೀಸ್‌ನ ಮ್ಯಾನೇಜಿಂಗ್ ಪಾರ್ಟ್‌ನರ್ ದೇವರಾಜ್ ಗಣಪತಿಯಪ್ಪ ಹೇಳಿದ್ದಾರೆ.
ಕೈಗಾರಿಕಾ ಸ್ಥಾನಮಾನ
ರಿಯಲ್ ಎಸ್ಟೇಟ್ ವಲಯಕ್ಕೆ ಕೈಗಾರಿಕೆಯೆಂಬ ಸ್ಟೇಟಸ್ ನೀಡಬೇಕೆನ್ನುವುದು ಬಹುಕಾಲದ ಬೇಡಿಕೆ. ಈ ಬೇಡಿಕೆಯನ್ನು ಈ ವರ್ಷದ ಬಜೆಟ್ ಈಡೇರಿಸಲಿ. ರಿಯಲ್ ಎಸ್ಟೇಟ್ ವಲಯಕ್ಕೆ ಹಣದ ಹರಿವಿನ ಕೊರತೆಯಿದೆ. ಕೈಗಾರಿಕಾ ಸ್ಥಾನಮಾನ ದೊರಕಿದರೆ ಸಾಲ ಪಡೆಯುವುದು ಸುಲಭವಾಗಲಿದೆ.
ಗ್ರೀನ್ ಬಿಲ್ಡಿಂಗ್‌ಗೆ ಉತ್ತೇಜನ
2070ರ ವೇಳೆಗೆ ಕಾರ್ಬನ್ ನ್ಯೂಟ್ರಲ್ ಅರ್ಥವ್ಯವಸ್ಥೆಯಾಗಿ ಹೊರಹೊಮ್ಮಲು ಭಾರತ ಬಯಸಿದೆ. ಇದನ್ನು ಸಾಧಿಸಲು ರಿಯಲ್ ಎಸ್ಟೇಟ್ ವಲಯದ ಕೊಡುಗೆ ಬೇಕಿದೆ. ಗ್ರೀನ್ ಕಟ್ಟಡಗಳ ನಿರ್ಮಾಣಕ್ಕೆ ಬೇಕಾದ ಸಾಮಾಗ್ರಿಗಳ ಖರೀದಿಗೆ ಸರಕಾರ ವಿಶೇಷ ಪ್ರೋತ್ಸಾಹ ಮತ್ತು ತೆರಿಗೆ ವಿನಾಯಿತಿ ನೀಡಬೇಕಿದೆ ಎಂದು ಡಿಎಸ್ ಮ್ಯಾಕ್ಸ್‌ನ ಎಕ್ಸಿಕ್ಯುಟಿವ್ ಡೈರೆಕ್ಟರ್ ಎಸ್.ಪಿ. ದಯಾನಂದ್ ಹೇಳಿದ್ದಾರೆ.
Read more…
[wpas_products keywords=”deal of the day”]