ಬೀದರ್ ಜಿಲ್ಲೆಯ ಇತಿಹಾಸದಲ್ಲೇ ಇದೇ ಮೊದಲು ಒಂದೇ ಕುಟುಂಬ ಮೂವರು ಶಾಸಕರಾಗಿ (ಒಬ್ಬರು ಶಾಸಕ,ಇಬ್ಬರು ಎಂಲ್‌ಸಿ) ಆಯ್ಕೆಯಾಗಿ ದಾಖಲೆ ಬರೆದಿದ್ದಾರೆ.
ಬೀದರ್‌ನಲ್ಲಿ ಬಿಜೆಪಿ ಸೋಲಿಗೆ ಯಾರೂ ಧೃತಿಗೆಡಬೇಡಿ: ಕೇಂದ್ರ ಸಚಿವ ಭಗವಂತ ಖೂಬಾ
ಹಿರಿಯ ಸಹೋದರ ರಾಜಶೇಖರ ಬಿ. ಪಾಟೀಲ್ ಅವರು ಹುಮನಾಬಾದ್ ಕ್ಷೇತ್ರದ ಶಾಸಕರಾಗಿದ್ದಾರೆ. ನಂತರದ ಸಹೋದರ ಡಾ.ಚಂದ್ರಶೇಖರ ಬಿ. ಪಾಟೀಲ್ ಅವರು ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿದ್ದಾರೆ. ಇದೀಗ ಮೂರನೇ ಸಹೋದರ ಭೀಮರಾವ್ ಬಿ. ಪಾಟೀಲ್ ಅವರೂ ಸಹ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಪ್ರವೇಶ ಪಡೆದು, ನೂತನ ದಾಖಲೆ ನಿರ್ಮಿಸಿದ್ದಾರೆ.
ಇವರಿಗೂ ಮೊದಲು ಇವರ ತಂದೆ ದಿ. ಬಸವರಾಜ್ ಪಾಟೀಲ್ ಹುಮನಾಬಾದ್ ಅವರು ಹಲವು ಬಾರಿ ಶಾಸಕರಾಗಿ,ವಿಧಾನ ಪರಿಷತ್ ಸದಸ್ಯರಾಗಿ, ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಬಳಿಕ ಅವರ ಮಕ್ಕಳು ಇದೀಗ ರಾಜಕೀಯದ ಅತ್ಯುನ್ನತ ಸ್ಥಾನಕ್ಕೆ ತಲುಪಿದ್ದಾರೆ.
ಬೀದರ್‌ನಲ್ಲಿ ಬಿಜೆಪಿಗೆ ತೀವ್ರ ಮುಖಭಂಗ..! ಕೇಂದ್ರ ಸಚಿವ ಖೂಬಾ, ಸಿಎಂ ಬೊಮ್ಮಾಯಿ ಪ್ರಯತ್ನ ವ್ಯರ್ಥ
ಒಂದೇ ಕುಟುಂಬದ ಮೂವರು ಸಹೋದರರು ಏಕ ಕಾಲಕ್ಕೆ ಸದನ ಪ್ರವೇಶಿಸುವ ಮೂಲಕ ಹುಮನಾಬಾದ್‌ನ ಪಾಟೀಲ್ ಪರಿವಾರ ರಾಜ್ಯದಲ್ಲೇ ವಿಶೇಷ ರಾಜಕೀಯ ಕುಟುಂಬವಾಗಿ ಹೊರ ಹೊಮ್ಮಿದೆ.
ಬಿಎಸ್‌ವೈ ಸಕ್ರಿಯ ಪ್ರಚಾರದಿಂದ ಬಿಜೆಪಿಗೆ ಲಾಭ
ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮುನ್ನಡೆ ಸಾಧಿಸುವುದರಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪಾತ್ರ ಮಹತ್ವದ್ದಾಗಿದೆ. ಪರಿಷತ್ ಚುನಾವಣೆ ಪ್ರಚಾರದಲ್ಲಿ ಬಿಎಸ್‌ವೈ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಪಕ್ಷದ ಹೈಕಮಾಂಡ್‌ನಿಂದಲೂ ಈ ಸಂಬಂಧ ಅವರಿಗೆ ಸೂಚನೆಯಿತ್ತು ಎಂದು ಹೇಳಲಾಗಿತ್ತು.
ಸ್ಥಾನಮಾನದ ಸಾಧ್ಯತೆ
ಬಿಎಸ್ ಯಡಿಯೂರಪ್ಪ ಜತೆಗೆ ವಿಶ್ವಾಸದ ಹೆಜ್ಜೆ ಇರಿಸುತ್ತಿರುವ ಬಿಜೆಪಿ ಹೈಕಮಾಂಡ್‌ನ ಮುಂದಿನ ನಡೆಯ ಬಗ್ಗೆಯೂ ಕುತೂಹಲವಿದೆ. ರಾಜ್ಯ ಬಿಜೆಪಿ ಉಪಾಧ್ಯಕ್ಷರೂ ಆಗಿರುವ ಬಿ.ವೈ. ವಿಜಯೇಂದ್ರ ಅವರಿಗೆ ಮುಂಬರುವ ದಿನಗಳಲ್ಲಿ ಮಹತ್ವದ ಸ್ಥಾನಮಾನ ನೀಡಬಹುದು ಎಂದು ಹೇಳಲಾಗುತ್ತಿದೆ.