Karnataka news paper

ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಕೊಡದ ಆರೋಪ; ಕಿಮ್ಸ್‌ ವೈದ್ಯರ ಜತೆ ರೋಗಿ ಸಂಬಂಧಿಕರ ಜಟಾಪಟಿ


ಹುಬ್ಬಳ್ಳಿ: ಚಿಕಿತ್ಸೆಗೆ ಬಂದಿದ್ದ ರೋಗಿಗೆ ಸರಿಯಾಗಿ ಚಿಕಿತ್ಸೆ ಕೊಡದೆ ವೈದ್ಯರು ಬೇರೆ ಕೆಲಸದಲ್ಲಿ ನಿರತರಾಗಿದ್ದರು ಎಂದು ಆರೋಪಿಸಿ ರೋಗಿ ಕುಟುಂಬಸ್ಥರು ವೈದ್ಯರ ಕೈ ಹಿಡಿದು ಕರೆದುಕೊಂಡು ಬಂದ ವಿಚಾರಕ್ಕೆ ಸಂಬಂಧಿಸಿದಂತೆ ಶುಕ್ರವಾರ ಕಿಮ್ಸ್‌ ಆವರಣದಲ್ಲಿ ಕೆಲ ಹೊತ್ತು ಗೊಂದಲ ವಾತಾವರಣ ನಿರ್ಮಾಣಗೊಂಡಿತ್ತು.

ಮಹಿಳೆಯೊಬ್ಬರು ಕಿಮ್ಸ್‌ನ ಚರ್ಮರೋಗ ವಿಭಾಗಕ್ಕೆ ಚಿಕಿತ್ಸೆಗೆ ಬಂದಿದ್ದರು. ಈ ವೇಳೆ ವೈದ್ಯರು ಹಿರಿಯ ಅಧಿಕಾರಿಗಳ ಜತೆ ಬೇರೊಂದು ಕೆಲಸದಲ್ಲಿ ನಿರತರಾಗಿದ್ದಾಗಲೇ ರೋಗಿ ಸಂಬಂಧಿಕರು ಹೋಗಿ ಮೊದಲು ರೋಗಿಗೆ ಚಿಕಿತ್ಸೆ ನೀಡಿ ಎಂದು ವೈದ್ಯರನ್ನು ಕೈ ಹಿಡಿದು ರೋಗಿ ಬಳಿ ಕರೆದುಕೊಂಡು ಬಂದಿದ್ದರು. ಈ ವೇಳೆ ರೋಗಿಗಳ ಸಂಬಂಧಿಕರ ವಿರುದ್ಧ ವೈದ್ಯ ವೃಂದ ಆಕ್ರೋಶ ವ್ಯಕ್ತಪಡಿಸಿತಲ್ಲದೇ, ತಕ್ಷಣವೇ ಪೊಲೀಸರನ್ನು ಕರೆಯಿಸಿ ರೋಗಿ ಸಂಬಂಧಿಕರ ಮೇಲೆ ಕ್ರಮಕ್ಕೆ ಒತ್ತಾಯಿಸಿದರು.

ಬಳಿಕ ಕಿಮ್ಸ್‌ನ ಆವರಣದಲ್ಲಿ ಗೊಂದಲ ಶುರುವಾದ ಹಿನ್ನೆಲೆಯಲ್ಲಿ ವೈದ್ಯರು ಹಾಗೂ ರೋಗಿ ಸಂಬಂಧಿಕರು ವಿದ್ಯಾನಗರ ಪೊಲೀಸ್‌ ಠಾಣೆಗೆ ತೆರಳಿದ್ದರು. ಠಾಣೆಯಲ್ಲಿ ವೈದ್ಯರ ಮೇಲೆ ರೋಗಿ ಸಂಬಂಧಿಕರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು. ಆದರೆ, ಇದಕ್ಕೆ ಪ್ರತಿರೋಧವೊಡ್ಡಿದ ರೋಗಿ ಸಂಬಂಧಿಕರು, ತಾವು ಹಲ್ಲೆ ನಡೆಸಿಲ್ಲ. ಬದಲಾಗಿ ರೋಗಿಗೆ ಚಿಕಿತ್ಸೆ ನೀಡುವಂತೆ ವೈದ್ಯರನ್ನು ಕರೆದುಕೊಂಡು ಬಂದಿದ್ದೇವೆ ಎಂದು ಸ್ಪಷ್ಟಪಡಿಸಿದರು. ತಾವು ಹಲ್ಲೆ ನಡೆಸಿಲ್ಲ ಎಂಬ ಸಂಗತಿಯನ್ನು ವೈದ್ಯರು ಪೊಲೀಸರೆದರು ಒಪ್ಪಿಕೊಂಡರು. ಬಳಿಕ ವೈದ್ಯರು ಹಾಗೂ ರೋಗಿ ಸಂಬಂಧಿಕರು ಹೊರಗಡೆಯೇ ರಾಜಿಯಾದರು ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಪ್ರಕರಣ ದಾಖಲಾಗಿಲ್ಲ.
ವಿಜಯಪುರ: ಐದು ವರ್ಷದ ಹಿಂದೆ ಅತ್ಯಾಚಾರ ಎಸಗಿದ ಆರೋಪಿಗೆ 2 ವರ್ಷ ಶಿಕ್ಷೆ, 20 ಸಾವಿರ ರೂ. ದಂಡ
ನಕಲಿ ವೈದ್ಯನಿಗೆ 3 ವರ್ಷ ಜೈಲು
ಶಿವಮೊಗ್ಗ: ನಕಲಿ ಪರವಾನಗಿಯನ್ನು ಸೃಷ್ಟಿಸಿಕೊಂಡು ವೈದ್ಯ ವೃತ್ತಿ ಮಾಡುತ್ತಿದ್ದ ಆರೋಪಿಗೆ 2ನೇ ಜೆಎಂಎಫ್‌ಸಿ ನ್ಯಾಯಾಲಯ 3 ವರ್ಷ ಕಾರಾಗೃಹ ವಾಸ ಸಜೆ ಮತ್ತು 15 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಹಕೀಂ ಅಲಿಯಾಸ್‌ ಡಾ.ಅಮೀರ್‌ ಜಾನ್‌ ಎಂಬುವವರಿಗೆ ಶಿಕ್ಷೆ ವಿಧಿಸಲಾಗಿದೆ. ಈತ ನಗರದಲ್ಲಿ ನಕಲಿ ಪರವಾನಗಿ ಸೃಷ್ಟಿಸಿಕೊಂಡು ವೈದ್ಯ ವೃತ್ತಿ ನಡೆಸುತ್ತಿದ್ದ. ಸಾಕ್ಷಿಗಳೊಂದಿಗೆ ದಾಳಿ ನಡೆಸಿ ನಕಲಿ ವೈದ್ಯ ವೃತ್ತಿಗೆ ಬಳಸಿದ ಔಷಧಗಳು, ಬೋರ್ಡ್‌, ಇತರೆ ವಸ್ತುಗಳನ್ನು ವಶಪಡಿಸಿಕೊಂಡು ಐಪಿಸಿ ಕಲಂ 465, 420 ಅನ್ವಯ ದೊಡ್ಡಪೇಟೆ ಪೊಲೀಸರು ಪ್ರಕರಣ ದಾಖಲಿಸಿ, ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎಸ್‌.ಆರ್‌.ಸನ್ಮತಿ ಅವರು ಐಪಿಸಿ ಕಲಂ 465 ಅಪರಾಧಕ್ಕೆ 1 ವರ್ಷ ಜೈಲು ಮತ್ತು 5 ಸಾವಿರ ರೂ. ದಂಡ ಹಾಗೂ ಕಲಂ 420 ಅಪರಾಧಕ್ಕೆ 2 ವರ್ಷಗಳ ಜೈಲು, 10 ಸಾವಿರ ರೂ. ದಂಡ ವಿಧಿಸಿ ಇತ್ತೀಚೆಗೆ ತೀರ್ಪು ನೀಡಿದ್ದಾರೆ. ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕ ಜಿ.ಕೆ.ಕಿರಣ್‌ಕುಮಾರ್‌ ವಾದ ಮಂಡಿಸಿದ್ದರು.



Read more

[wpas_products keywords=”deal of the day sale today offer all”]