ಪ್ರಸ್ತುತ ಬೆಂಗಳೂರಿನ ಏರ್ ಕಮಾಂಡರ್ ಆಸ್ಪತ್ರೆಯಲ್ಲಿ ವೈದ್ಯೆಯಾಗಿರುವ ಇವರು ಬುಧವಾರ ಜನವರಿ 26ರಂದು ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ರಾಜಪಥದಲ್ಲಿ 3.3ಕಿ.ಮೀ ಏರಫೋರ್ಸ್ ರೆಜೆಮೆಂಟನ್ನು ಪಥಸಂಚಲನದಲ್ಲಿ ನಡೆಸಿ ರಾಜ್ಯದ ಕೀರ್ತಿ ಪತಾಕೆ ಹಾರಿಸಿದ್ದಾರೆ.
ತುಮಕೂರಿನ ಸರ್ವೋದಯ ಪಿಯು ಕಾಲೇಜಿನಲ್ಲಿ ಪಿಯುಸಿ ಮುಗಿಸಿರುವ ಇವರು, ಅಲ್ಲಿದ್ದಾಗಲೇ ಎನ್‌ಸಿಸಿಗೆ ಸೇರ್ಪಡೆಯಾಗಿದ್ದರು. ಸತತ ಪರಿಶ್ರಮದಿಂದ 2012ರ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸುವ ಅವಕಾಶವನ್ನೂ ಪಡೆದಿದ್ದರು.
ಗಣರಾಜ್ಯೋತ್ಸವ ಟ್ಯಾಬ್ಲೋದಲ್ಲಿ ಭಾರತದ ಮೊದಲ ಮಹಿಳಾ ರಫೇಲ್ ಪೈಲಟ್ ಶಿವಾಂಗಿ ಸಿಂಗ್
ದಿಕ್ಕು ಬದಲಿಸಿದ ಎನ್‌ಸಿಸಿ!
ಪಿಯುಸಿ ನಂತರ ಯುವ ವಿನಿಮಯ ಕಾರ್ಯಕ್ರಮದಡಿ 1 ವರ್ಷ ಚೀನಾ ತರಬೇತಿಗೂ ಆಯ್ಕೆಯಾಗಿದ್ದ ಇಂಪನಾಶ್ರೀಗೆ ಎನ್‌ಸಿಸಿ ಕೋಟಾದಡಿ ಹಾಸನ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸೀಟ್ ಸಿಕ್ಕಿತು. ಇದರಿಂದ ಕಷ್ಟದಲ್ಲಿದ್ದ ಆಕೆಯ ಜೀವನದ ದಿಕ್ಕೇ ಬದಲಾಯಿತು. ಅವರು ತಮ್ಮ ವಿದ್ಯಾಭ್ಯಾಸಕ್ಕಾಗಿ ಶಿಕ್ಷಣ ಸಾಲ ಪಡೆದಿದ್ದರು. ನಂತರ 2021 ಮೇನಲ್ಲಿ ಬೆಂಗಳೂರಿನ ಏರ್ ಕಮಾಂಡರ್ ಆಸ್ಪತ್ರೆಯಲ್ಲಿ ವೈದ್ಯೆಯಾಗಿ ಆಯ್ಕೆಯಾದರು.
2012ರ ಪರೇಡ್‌ನಲ್ಲಿ 4ನೇ ಬೆಟಾಲಿಯನ್ ಎನ್‌ಸಿಸಿ ಕೆಡೆಟ್ ಆಗಿ ಭಾಗವಹಿಸಿದ್ದ ಇಂಪನಾಶ್ರೀಗೆ ಪ್ರಸ್ತುತ ಗಣರಾಜ್ಯೋತ್ಸವದಂದು ವಾಯುಪಡೆ ರೆಜಿಮೆಂಟ್ ಮುನ್ನಡೆಸುವ ಇನ್ನೊಂದು ಅವಕಾಶ ಒದಗಿ ಬಂದದ್ದು ಅಪರೂಪದಲ್ಲಿ ಅಪರೂಪವೆನಿಸಿದೆ. ಒಟ್ಟಾರೆಯಾಗಿ ಎನ್‌ಸಿಸಿಯ ಸತತ ಪರಿಶ್ರಮದಿಂದ ಅವಕಾಶಗಳನ್ನು ಪಡೆದ ಇಂಪನಾಶ್ರೀಗೆ ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸುವ ಸುವರ್ಣಾವಕಾಶ ತಂದುಕೊಟ್ಟಿದ್ದು, ಈ ಮೂಲಕ ಅವರು ಜಿಲ್ಲೆ ಹಾಗೂ ರಾಜ್ಯದ ಕೀರ್ತಿಗೆ ಭಾಜನರಾಗಿದ್ದಾರೆ.
Read more
[wpas_products keywords=”deal of the day sale today offer all”]