Karnataka news paper

Union Budget 2022: ಬಜೆಟ್ ಅಧಿವೇಶನ 2022: ಸರ್ಕಾರ-ಪ್ರತಿಪಕ್ಷಗಳ ಸಿದ್ಧತೆ, ಮೊದಲೆರಡು ದಿನ ಇಲ್ಲ ‘ಶೂನ್ಯ ಅವಧಿ’


ANI

ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನ(Budget session) ಜನವರಿ 31ರಂದು ಬರುವ ಸೋಮವಾರ ಆರಂಭವಾಗುತ್ತಿದೆ. ಫೆಬ್ರವರಿ 1ರಂದು ಕೇಂದ್ರ ಬಜೆಟ್(Union Budget 2022) ಮಂಡನೆಯಾಗುತ್ತಿದೆ. 17ನೇ ಲೋಕಸಭೆಯ 8ನೇ ಅವಧಿಯ ಅಧಿವೇಶನ ಕಲಾಪ ಇದಾಗಿದ್ದು, ಮೊದಲ ದಿನ ರಾಷ್ಟ್ರಪತಿಗಳು ಉಭಯ ಸದನಗಳನ್ನುದ್ದೇಶಿಸಿ ಭಾಷಣ ಮಾಡಲಿರುವುದರಿಂದ ಮತ್ತು ಎರಡನೇ ದಿನ ಕೇಂದ್ರ ಹಣಕಾಸು ಸಚಿವರು ಬಜೆಟ್ ಮಂಡನೆ ಮಾಡಲಿರುವುದರಿಂದ ಆರಂಭದ ಎರಡು ದಿನ ಶೂನ್ಯ ಅವಧಿ ಇರುವುದಿಲ್ಲ.

ತುರ್ತು ಸಾರ್ವಜನಿಕ ಪ್ರಾಮುಖ್ಯತೆಯ ವಿಷಯಗಳನ್ನು ಫೆಬ್ರವರಿ 2ರಿಂದ ಶೂನ್ಯ ಅವಧಿಯಲ್ಲಿ(Zero hour) ಕೈಗೆತ್ತಿಕೊಳ್ಳಲಾಗುತ್ತದೆ. ಬಜೆಟ್ ಅಧಿವೇಶನ ಆರಂಭಕ್ಕೆ ಮುನ್ನ ನಿನ್ನೆ ಲೋಕಸಭಾಧ್ಯಕ್ಷ ಓಂ ಬಿರ್ಲಾ ಸಿದ್ಧತೆಗಳನ್ನು ಪರಿಶೀಲಿಸಿದರು.

ಅಧಿವೇಶನಕ್ಕೆ ಸರ್ಕಾರ, ಪ್ರತಿಪಕ್ಷ ಸಜ್ಜು: 12 ಸಂಸದರ ಅಮಾನತು ಮತ್ತು ಕೆಲವು ವಿಧೇಯಕಗಳನ್ನು ಚರ್ಚೆಯಿಲ್ಲದೆ ಅಂಗೀಕಾರದ ಬಗ್ಗೆ ವಾಗ್ವಾದದ ನಡುವೆ ಹಿಂದಿನ ಚಳಿಗಾಲ ಅಧಿವೇಶನ ಮುಗಿದ ನಂತರ ಸರ್ಕಾರ ಮತ್ತು ಪ್ರತಿಪಕ್ಷಗಳು ಸಂಸತ್ತಿನ ಮುಂಬರುವ ಬಜೆಟ್ ಅಧಿವೇಶನಕ್ಕೆ ಆಂತರಿಕ ಸಭೆಗಳು ಮತ್ತು ಸರಣಿ ಸಮಾಲೋಚನೆಗಳೊಂದಿಗೆ ತಮ್ಮ ಸಿದ್ಧತೆಗಳನ್ನು ಪ್ರಾರಂಭಿಸಿವೆ.

ಇದನ್ನೂ ಓದಿ: Union Budget 2022: ‘ಹಲ್ವಾ ಬದಲಿಗೆ ಸಿಹಿತಿಂಡಿ’; ಕೇಂದ್ರ ಬಜೆಟ್ 2022ರಲ್ಲಿ ಏನು ಬದಲಾವಣೆ?

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ನಿನ್ನೆ ಪಕ್ಷದ ಸಂಸದೀಯ ಕಾರ್ಯತಂತ್ರದ ಗುಂಪಿನ ಸಭೆ ನಡೆಸಿ ಅಧಿವೇಶನಕ್ಕೆ ಯಾವ ರೀತಿ ಸಜ್ಜಾಗಬೇಕು, ಆಡಳಿತ ಪಕ್ಷವನ್ನು ಯಾವ ರೀತಿ ಎದುರಿಸಬೇಕೆಂಬ ಬಗ್ಗೆ ಚರ್ಚೆ ನಡೆಸಿದ್ದಾರೆ.

ನಾಳೆ ಅಪರಾಹ್ನ ಅಧಿವೇಶನ ಪ್ರಾರಂಭವಾಗುವ ಮುನ್ನ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಸರ್ವಪಕ್ಷ ಸಭೆಯನ್ನು ಕರೆದಿದ್ದಾರೆ, ಅಲ್ಲಿ ಸರ್ಕಾರವು ತನ್ನ ಶಾಸಕಾಂಗ ಯೋಜನೆಯನ್ನು ರೂಪಿಸುತ್ತದೆ.

ಪಂಚರಾಜ್ಯಗಳ ಚುನಾವಣೆ: ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರ ಐದು ರಾಜ್ಯಗಳ ಚುನಾವಣೆಯ ಹಿನ್ನೆಲೆಯಲ್ಲಿ ಜನವರಿ 31 ಮತ್ತು ಏಪ್ರಿಲ್ 8 ರ ನಡುವೆ ಎರಡು ಭಾಗಗಳಲ್ಲಿ ನಡೆಯಲಿರುವ ಬಜೆಟ್ ಅಧಿವೇಶನವು ಮಹತ್ವದ್ದಾಗಿದೆ. ಬಿಜೆಪಿ, ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ಅಕಾಲಿದಳ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷಗಳು ಅಧಿವೇಶನ ಸಮಯದಲ್ಲಿ ತಂತ್ರಗಾರಿಕೆ ರೂಪಿಸುವ ಸಾಧ್ಯತೆಯಿದೆ.



Read more

[wpas_products keywords=”deal of the day”]