Online Desk
ಮುಂಬೈ: ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ವಿಲಕ್ಷಣ ನಟ ಎಂದೇ ಹೆಸರುವಾಸಿ. ಅವರು ಗ್ಯಾಂಗ್ಸ್ ಆಫ್ ವಾಸೇಪುರ್ ವೆಬ್ ಸೀರಿಸ್ ಮತ್ತು ಸೇಕ್ರೆಡ್ ಗೇಮ್ಸ್ ವೆಬ್ ಸರಣಿಗಳಲ್ಲಿ ನಟಿಸಿ ವಿಮರ್ಶಾತ್ಮಕ ಮೆಚ್ಚುಗೆಯನ್ನು ಪಡೆದಿದ್ದಾರೆ.
ನವಾಜುದ್ದೀನ್ ಸಿದ್ದಿಕಿ ಅವರ ನೂತನ ಬಂಗಲೆ ಈಗಾಗಲೇ ಸಿದ್ಧವಾಗಿದೆ ಎಂದು ಪಿಂಕ್ ವಿಲ್ಲಾ ನ್ಯೂಸ್ ಪೋರ್ಟಲ್ ಬಹಿರಂಗಪಡಿಸಿದೆ. ಈ ಮನೆಗೆ ನವಾಜುದ್ದೀನ್ ಸಿದ್ದಿಕಿ ಅವರ ತಂದೆ ನವಾಬುದ್ದೀನ್ ಸಿದ್ದಿಕಿ ಅವರ ಹೆಸರನ್ನು ಇಟ್ಟಿದ್ದಾರೆ ಮತ್ತು ಇದನ್ನು ನವಾಬ್ ಎಂದು ಕರೆಯಲಾಗುತ್ತದೆ. ನವಾಜುದ್ದೀನ್ ಸಿದ್ದಿಕಿ ಅವರ ತಂದೆ 2015 ರಲ್ಲಿ 72ನೇ ವಯಸ್ಸಿನಲ್ಲಿ ನಿಧನರಾದರು.
ಇದನ್ನು ಓದಿ: ಬಾಲಿವುಡ್ ಪಾರ್ಟಿಗಳಲ್ಲಿ ನಕಲಿತನವೇ ಹೆಚ್ಚು; ನಕಲಿಗಳ ನಡುವೆ ಇರಲು ಇಷ್ಟವಿಲ್ಲ ಎಂದ ನವಾಜುದ್ದೀನ್ ಸಿದ್ಧಿಕಿ
ಈ ಮನೆ ನಿರ್ಮಾಣ ಪೂರ್ಣಗೊಳ್ಳಲು ಮೂರು ವರ್ಷ ತೆಗೆದುಕೊಂಡಿತು. ನವಾಜುದ್ದೀನ್ ಅವರು ತಮ್ಮ ಇಚ್ಛೆಯಂತೆ ಮನೆ ವಿನ್ಯಾಸ ಮಾಡಿದ್ದಾರೆ. ಒಳ್ಳೆಯ ನಟ ಎಂದಿಗೂ ಕೆಟ್ಟ ವ್ಯಕ್ತಿಯಾಗಲು ಸಾಧ್ಯವಿಲ್ಲ. ಏಕೆಂದರೆ ಅವನ ಆಂತರಿಕ ಶುದ್ಧತೆಯು ಕ್ರಿಯೆಯಲ್ಲಿ ಅತ್ಯುತ್ತಮವಾದದ್ದನ್ನು ಹೊರತರುತ್ತದೆ ಎಂದು ನವಾಜ್ ಪೋಸ್ಟ್ ಮಾಡಿದ್ದಾರೆ.
ಯಾವುದೇ ಪಾತ್ರವಾದರು ಪರಕಾಯ ಪ್ರವೇಶ ಮಾಡುವ ನಟ ನವಾಜುದ್ದೀನ್ ಅವರು ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಸಿನಿಮಾಗಳ ವಿಷಯದಲ್ಲಿ, ನಟ ಹೀರೋಪಂತಿ 2, ಬೋಲೆ ಚೂಡಿಯನ್‌ನಲ್ಲಿ ಚಿತ್ರಗಳಲ್ಲಿ ನಟಿಸಲಿದ್ದಾರೆ. ಅವರು ಬದ್ಲಾಪುರ್, ಕಿಕ್, ರಮಣ್ ರಾಘವ್ 2.0, ಬಜರಂಗಿ ಭಾಯಿಜಾನ್, ರಯೀಸ್, ಮಾಂಝಿ: ದಿ ಮೌಂಟೇನ್ ಮ್ಯಾನ್, ಮೋತಿಚುರ್ ಚಕ್ನಾಚೂರ್, ರಾತ್ ಅಕಾಲಿ ಹಾ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
Read more…
[wpas_products keywords=”party wear dress for women stylish indian”]