ಶುಕ್ರವಾರ ಖಾನಾಪುರ ತಾಲೂಕಿನ ಗ್ರಾಮ ಒನ್ ಕೇಂದ್ರದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕಿ ಡಾ.ಅಂಜಲಿ, ”ಕ್ಷೇತ್ರದ ಮರಾಠಿ ಭಾಷಿಕ ಜನರು ಕನ್ನಡ ಕಲಿಯುವವರೆಗೂ ಕನ್ನಡದ ಜತೆಗೆ ಪ್ರತ್ಯೇಕವಾಗಿ ಮರಾಠಿ ಭಾಷೆಯಲ್ಲಿಯೂ ಮಾಹಿತಿ ಪ್ರದರ್ಶಿಸಬೇಕು”, ಎಂದು ಅಧಿಕಾರಿಯನ್ನು ಉದ್ದೇಶಿಸಿ ಸೂಚಿಸಿದ್ದಾರೆ.
ಶಾಸಕಿ ಟ್ವೀಟ್ ಮಾಡಿರುವ ವಿಡಿಯೊ ಈಗ ವೈರಲ್ ಆಗುತ್ತಿದ್ದು, ಕನ್ನಡಿಗರ ಕಟು ಟೀಕೆಗೆ ಗುರಿಯಾಗಿದೆ. ”ಮರಾಠಿಯಲ್ಲಿ ಮಾಹಿತಿ ಒದಗಿಸಿದರೆ ಅವರು ಕನ್ನಡ ಕಲಿಯುವುದಾದರೂ ಹೇಗೆ?”, ಎಂದು ಒಬ್ಬರು ಪ್ರಶ್ನಿಸಿದ್ದರೆ, ”ಮಹಾರಾಷ್ಟ್ರದಲ್ಲಿ ಕನ್ನಡದಲ್ಲಿ ಮಾಹಿತಿ ಪ್ರದರ್ಶಿಸುತ್ತಾರಾ?”, ಎಂದು ಇನ್ನೊಬ್ಬರು ಪ್ರಶ್ನೆ ಮಾಡಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕೂಡಲೇ ಶಾಸಕ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹ ವ್ಯಕ್ತವಾಗಿದೆ.
ಗ್ರಾಮೀಣ ಜನರ ಸೇವೆಗೆ ‘ಗ್ರಾಮ ಒನ್’ ಆರಂಭ : ಸರಕಾರಿ ಸೇವೆಗಳನ್ನು ನೀಡುವುದೇ ಇದರ ವಿಶೇಷತೆ!
ಏನಿದು ಗ್ರಾಮ ಒನ್
‘ಗ್ರಾಮ ಒನ್’ ತಂತ್ರಜ್ಞಾನ ಆಧಾರಿತ ಕಾರ್ಯಕ್ರಮ. ಜನ ಪ್ರಮಾಣಪತ್ರ ಇತ್ಯಾದಿಗಳಿಗಾಗಿ ತಹಸೀಲ್ದಾರ್ ಕಚೇರಿಗೆ ಮುತ್ತಿಗೆ ಹಾಕುತ್ತಾರೆ. ಜನಸಂದಣಿಯಿಂದಾಗಿ ಸಕಾಲಕ್ಕೆ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ ಸಿಗುವುದಿಲ್ಲ. ಹಾಗಾಗಿ ಜನ ಮಧ್ಯವರ್ತಿಗಳ ಮೊರೆ ಹೋಗುತ್ತಾರೆ. ಇದನ್ನು ತಪ್ಪಿಸಲು ಗ್ರಾಮ ಮಟ್ಟದಲ್ಲೇ ಸೇವೆ ನೀಡುವ ವ್ಯವಸ್ಥೆ ಇದಾಗಿದೆ. ಸದ್ಯ್ ಹನ್ನೆರಡು ಜಿಲ್ಲೆಗಳಲ್ಲಿ ಈ ಸೇವೆ ಆರಂಭವಾಗಿದೆ.
Read more
[wpas_products keywords=”deal of the day sale today offer all”]