ಹೈಕೋರ್ಟ್ ಕಾನೂನು ಸೇವಾ ಪ್ರಾಧಿಕಾರ ಪ್ರತಿ ತಾಲೂಕಿನಲ್ಲಿ ಗೋಶಾಲೆ ಆರಂಭಿಸಬೇಕು ಹಾಗೂ ಗೋಶಾಲೆಗಳಿಗೆ ಸೂಕ್ತ ಪ್ರಮಾಣದಲ್ಲಿ ಮೇವು, ನೀರು ಮತ್ತು ಜಾಗ ಒದಗಿಸಲು ನಿರ್ದೇಶಿಸಬೇಕೆಂದು ಸಲ್ಲಿಸಿರುವ ಪಿಐಎಲ್ ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ನಡುವೆ, ರಾಜ್ಯದ ಆಯ್ದ ತಾಲೂಕುಗಳಲ್ಲಿ 97 ಗೋಶಾಲೆ ತೆರೆಯಲಾಗಿದೆ. ಅವುಗಳಿಗೆ ಅನುದಾನ ಸಹ ನೀಡಲಾಗಿದೆ. ಹಾಗಾಗಿ, ಮತ್ತೆ ತಾಲೂಕು ಮಟ್ಟದ ಬದಲಾಧಿಗಿ ತಾತ್ಕಾಲಿಕವಾಗಿ ಪ್ರತಿ ಜಿಲ್ಲೆಯಲ್ಲಿ ಗೋಶಾಲೆ ಆರಂಭಿಸಲು ಸರಕಾರ ಆದೇಶಿಸಿದೆ,ಎಂದು ಸರಕಾರಿ ವಕೀಲರು ಮಾಹಿತಿ ನೀಡಿದರು.
”ಪ್ರತಿ ಜಿಲ್ಲೆಯಲ್ಲಿ ಗೋ ಶಾಲೆ ಆರಂಭಿಸಿದರೆ ಸಾಕಾಗುವುದಿಲ್ಲ. ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲದೆ ಪ್ರತಿ ಗ್ರಾಮಮಟ್ಟದಲ್ಲೂ ಗೋ ಶಾಲೆ ತೆರೆಯಬೇಕು. ಬೇರೆ ರಾಜ್ಯಗಳಿಗೆ ಹೋಗಿ ಪರಿಶೀಲನೆ ಮಾಡಿ. ಅಲ್ಲಿನ ಸರಕಾರಗಳು ಪ್ರತಿಯೊಂದು ಗ್ರಾಮದಲ್ಲಿ ಗೋಶಾಲೆ ಆರಂಭಿಸಿವೆ” ಎಂದು ಸಿಜೆ ತಾಕೀತು ಮಾಡಿದರು.
‘ಗೋಶಾಲೆ ಆರ್ಥಿಕತೆ’ಯನ್ನು ಅಭಿವೃದ್ಧಿಪಡಿಸಲು ಮುಂದಾದ ನೀತಿ ಆಯೋಗ!
‘ಗೋ ಶಾಲೆಗಳನ್ನು ಆರಂಭಿಸಲು ಯಾವ ಮಾರ್ಗಸೂಚಿ ಅನುಸರಿಸಲಾಗಿದೆ, ಎಂದು ಮುಖ್ಯ ನ್ಯಾಯಮೂರ್ತಿಗಳು ಸರಕಾರವನ್ನು ಪ್ರಶ್ನಿಸಿದರು. ಮುಂದಿನ ವಿಚಾರಣೆ ವೇಳೆ ರಾಜ್ಯದಲ್ಲಿಗೋಶಾಲೆ ಆರಂಭಿಸಲು ಮತ್ತು ನಿರ್ವಹಣೆ ಮಾಡಲು ಯಾವ ಮಾರ್ಗಸೂಚಿ ರಚನೆ ಮಾಡಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡಬೇಕು.
ಅಲ್ಲದೆ, ಬೀಡಾಡಿ ಪ್ರಾಣಿಗಳ ಕಲ್ಯಾಣಕ್ಕಾಗಿ ಯಾವುದಾದರೂ ಯೋಜನೆ ರೂಪಿಸಲಾಗಿದೆಯೇ? ಎಂಬ ಬಗ್ಗೆಯೂ ವಿವರಣೆ ನೀಡಬೇಕು, ಎಂದು ಸರಕಾರಕ್ಕೆ ಮೌಖಿಕವಾಗಿ ಸೂಚಿಸಿದ ಸಿಧಿಜೆ, ವಿಚಾರಣೆಯನ್ನು ಎರಡು ವಾರ ಮುಂದೂಡಿದರು.
Read more
[wpas_products keywords=”deal of the day sale today offer all”]