The New Indian Express
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪರಿಣಾಮಕಾರಿ ರೀತಿಯ ಕ್ರಮಗಳ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಗುರುವಾರ ಸೂಚನೆ ನೀಡಿದ್ದಾರೆ.
ಎಲ್ಲಾ ಎಂಟು ವಲಯಗಳಲ್ಲಿ ಕಳೆದ ಒಂದು ವಾರದಿಂದ ಸೋಂಕು ಪ್ರಗತಿಯನ್ನು ಪರಿಶೀಲಿಸಿದ ಬಳಿಕ ಅಧಿಕಾರಿಗಳೊಂದಿಗೆ ನಿನ್ನೆ ಗೌರವ್ ಗುಪ್ತಾ ಅವರು ವರ್ಚುವಲ್ ಸಭೆ ನಡೆಸಿದರು.
“ಎಲ್ಲಾ ವಲಯಗಳಲ್ಲಿ ದಿನ-ದಿನದ ಪ್ರಕರಣಗಳ ಸಂಖ್ಯೆಯಲ್ಲಿ ಶೇ.30 ರಷ್ಟು ಇಳಿಕೆಯಾಗಿರುವುದು ಕಂಡುಬಂದಿದೆ, ಕಳೆದ ವಾರದಲ್ಲಿ ಪಾಸಿಟಿವಿಟಿ ದರ ಶೇ.25 ರಿಂದ ಶೇ.17-20 ರ ನಡುವೆ ಕಂಡು ಬಂದಿದೆ. ಆದರೆ ಬಿಟಿಎಂ ಲೇಔಟ್, ಮಲ್ಲೇಶ್ವರಂ, ಎಚ್‌ಎಸ್‌ಆರ್ ಲೇಔಟ್ ಮತ್ತು ಕೋಣನಕುಂಟೆ ವಾರ್ಡ್‌ಗಳಲ್ಲಿ ಹೆಚ್ಚಿನ ಸೋಂಕುಗಳು ಪತ್ತೆಯಾಗಿವೆ. ಆದ್ದರಿಂದ, ಈ ಪ್ರದೇಶಗಳಲ್ಲಿ ಸೋಂಕು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಸೂಚಿಸಿದರು.
ಇದನ್ನೂ ಓದಿ: ಕೋವಿಡ್-19: ರಾಜ್ಯದಲ್ಲಿ ನಿನ್ನೆ ದಾಖಲೆಯ 67,000 ಮಂದಿ ಗುಣಮುಖ!
ಎಲ್ಲಾ ವಲಯಗಳಲ್ಲಿ RAT ಮತ್ತು RT-PCR ನ ಪಾಸಿಟಿವಿಟಿ ದರಗಳನ್ನು ನಕ್ಷೆ ಮಾಡುವಂತೆ ಹಾಗೂ ನಕ್ಷೆಯಲ್ಲಿ ಪಾಸಿಟಿವಿಟಿ ದರ ಏರಿಕೆಯಾಗಿದ್ದೇ ಆದರೆ, ಕೂಡಲೇ ಈ ಕುರಿತು ವರದಿ ಮಾಡುವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದವರು, ಹೋಂ ಐಸೋಲೇಷನ್ ನಲ್ಲಿದ್ದವರ ಕ್ವಾರಂಟೈನ್ ಅವಧಿಯನ್ನು 7ನೇ ದಿನಕ್ಕೆ ಅಂತ್ಯಗೊಳಿಸಬೇಕು. ಮೊಬೈಲ್ ಟ್ರಯಜಿಂಗ್ ಯುನಿಟ್ ಗಳು ಒಟ್ಟಾರೆ ಸೋಂಕಿನ ಶೇಕಡಾ 10 ರಿಂದ 15 ರಷ್ಟು ಟ್ರಯಜ್ ಮಾಡುವುದರ ಮೇಲೆ ಕೇಂದ್ರೀಕರಿಸುತ್ತವೆ ಮತ್ತು ಆಸ್ಪತ್ರೆಗಳು ಅಥವಾ ಕೋವಿಡ್ ಕೇರ್ ಸೆಂಟರ್‌ಗಳಿಗೆ ದಾಖಲಿಸಲು ಶಿಫಾರಸು ಮಾಡಲಾದ ಎಲ್ಲಾ ಪ್ರಕರಣಗಳ ದೈಹಿಕ ಪರೀಕ್ಷೆಯನ್ನು ಶಿಫಾರಸು ಮಾಡಿದ ದಿನದಂದೆ ಮಾಡಬೇಕು ಎಂದು ಸೂಚಿಸಿದರು.
ಇದನ್ನೂ ಓದಿ: ಕೋವಿಡ್ ನಿರ್ಬಂಧ: ಮುಂದಿನ ವಾರ ಸಿಎಂ ಬೊಮ್ಮಾಯಿ ಪರಿಶೀಲನೆ
ಸಾಕಷ್ಟು ಜನರು ಹೋಂ ಐಸೋಲೇಷನ್ ಗೊಳಗಾಗಿದ್ದು, ಅಗತ್ಯವಿರುವ ಕೋವಿಡ್ ಕೇರ್ ಕೇಂದ್ರಗಳ ಸಂಖ್ಯೆಯನ್ನು ಗುರ್ತಿಸುವಂತೆ ಹಾಗೂ ಶೂನ್ಯ ಸಿಬ್ಬಂದಿಗಳನ್ನು ಹೊಂದಿರುವ ಕೋವಿಡ್ ಕೇಂದ್ರ ಗಳಿಗೆ ಸಿಬ್ಬಂದಿಗಳ ನಿಯೋಜಿಸಬೇಕು ಎಂದು ತಿಳಿಸಿದರು. ಅಲ್ಲದೆ, ಸಭೆಯಲ್ಲಿ, ಎಲ್ಲಾ ನಾಲ್ಕು ವರ್ಗಗಳ ವ್ಯಾಕ್ಸಿನೇಷನ್ ಕವರೇಜ್ (ಮೊದಲ, ಎರಡನೇ ಡೋಸ್, 15-17 ವರ್ಷಗಳವರೆಗೆ ಲಸಿಕೆ ಮತ್ತು ಮುನ್ನೆಚ್ಚರಿಕೆಯ ಡೋಸ್) ಕುರಿತಂತೆಯೂ ಚರ್ಚೆ ನಡೆಸಲಾಯಿತು.
“ಸಂಪರ್ಕಿಸಿದ ಮತ್ತು ಹೋಮ್ ಐಸೋಲೇಶನ್ ಎಂದು ಗುರುತಿಸಲಾದ ಎಲ್ಲಾ ಪ್ರಕರಣಗಳನ್ನು ಏಳನೇ ದಿನದಂದು ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆ ಮಾಡಲಾಗುತ್ತದೆ” ಎಂದು ಅವರು ಹೇಳಿದರು.
Read more
[wpas_products keywords=”deal of the day”]