Karnataka news paper

ಭ್ರಷ್ಟಾಚಾರ, ಸ್ಪಾಟ್ ಫಿಕ್ಸಿಂಗ್ ಆರೋಪ: ಜಿಂಬಾಬ್ವೆ ಮಾಜಿ ನಾಯಕ ಬ್ರೆಂಡನ್ ಟೇಲರ್ ಗೆ ಮೂರೂವರೆ ವರ್ಷ‌ ನಿಷೇಧ ಹೇರಿದ ಐಸಿಸಿ


Online Desk

ದುಬೈ: ಭ್ರಷ್ಟಾಚಾರ, ಸ್ಪಾಟ್ ಫಿಕ್ಸಿಂಗ್ ಆರೋಪಕ್ಕೆ ಸಂಬಂಧಿಸಿದಂತೆ ಜಿಂಬಾಬ್ವೆ ಮಾಜಿ ನಾಯಕ ಬ್ರೆಂಡನ್ ಟೇಲರ್ ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಮೂರೂವರೆ ವರ್ಷ‌ಗಳ ನಿಷೇಧ ಹೇರಿದೆ.

ಜಿಂಬಾಬ್ವೆಯ ಮಾಜಿ ನಾಯಕ ಬ್ರೆಂಡನ್ ಟೇಲರ್ (Brendan Taylor) ತಮ್ಮ ವಿರುದ್ಧದ ಆರೋಪಗಳ ಸಂಬಂಧ ಹೇಳಿಕೆ ಬಿಡುಗಡೆ ಮಾಡಿದ ಕೆಲವೇ ದಿನಗಳ ಅಂತರದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಈ ನಿಷೇಧ ಶಿಕ್ಷೆ ಹೇರಿದೆ.

ಈ ಕುರಿತು ಶುಕ್ರವಾರ ಹೇಳಿಕೆ ಬಿಡುಗಡೆ ಮಾಡಿರುವ ಐಸಿಸಿ, ‘ಐಸಿಸಿ ಭ್ರಷ್ಟಾಚಾರ ವಿರೋಧಿ ಸಂಹಿತೆಯನ್ನ ಉಲ್ಲಂಘಿಸಿರುವ ನಾಲ್ಕು ಆರೋಪಗಳನ್ನ ಮತ್ತು ಡೋಪಿಂಗ್ ವಿರೋಧಿ ಸಂಹಿತೆಯನ್ನ ಉಲ್ಲಂಘಿಸಿರುವ ಒಂದು ಪ್ರತ್ಯೇಕ ಆರೋಪವನ್ನ ಒಪ್ಪಿಕೊಂಡ ನಂತರ ಬ್ರೆಂಡನ್ ಟೇಲರ್ ಅವರಿಗೆ ಎಲ್ಲಾ ರೀತಿಯ  ಕ್ರಿಕೆಟ್ʼನಿಂದ ಮೂರೂವರೆ ವರ್ಷಗಳ ನಿಷೇಧವನ್ನ ಹೇರಲಾಗಿದೆ’ ಎಂದು ಐಸಿಸಿ ಪ್ರಕಟಿಸಿದೆ.

ಸ್ಪಾಟ್ ಫಿಕ್ಸಿಂಗ್ (Spot Fixing) ಮಾಡುವಂತೆ ಆಹ್ವಾನ ಬಂದ ವಿಚಾರವನ್ನು ತಕ್ಷಣವೇ ತಿಳಿಸಲು ವಿಫಲವಾಗಿರುವ ಜಿಂಬಾಬ್ವೆ (Zimbabwe) ತಂಡದ ಮಾಜಿ ನಾಯಕ ಬ್ರೆಂಡನ್ ಟೇಲರ್  (Brendan Taylor)ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ (ICC) ಭ್ರಷ್ಟಾಚಾರ ನಿಗ್ರಹ ಘಟಕ  (anti-corruption unit), ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ಮೂರೂವರೆ ವರ್ಷ ನಿಷೇಧ ಶಿಕ್ಷೆ ವಿಧಿಸಿದೆ. ಈ ಕುರಿತಾಗಿ ಶುಕ್ರವಾರ ಮಾಧ್ಯಮ ಪ್ರಕಟಣೆ ನೀಡಿರುವ ಐಸಿಸಿ, ಟೇಲರ್ ಕೂಡ ನಿಷೇಧ ಶಿಕ್ಷೆಯನ್ನು ಒಪ್ಪಿಕೊಂಡಿದ್ದು, ಜನವರಿ 28 ರಿಂದಲೇ ಶಿಕ್ಷೆ ಆರಂಭವಾಗಲಿದೆ. ಇದರಲ್ಲಿ ಡೋಪಿಂಗ್  ನಿಯಮ (Doping Code) ಉಲ್ಲಂಘನೆ ಮಾಡಿದ ಆರೋಪವೂ ಇವರ ಮೇಲಿದೆ.

ಕೆಲ ದಿನಗಳ ಹಿಂದೆ ಟ್ವಿಟರ್ ನಲ್ಲಿ(Twitter) ಈ ಕುರಿತಾಗಿ ಹೇಳಿಕೆ ಬಿಡುಗಡೆ ಮಾಡಿದ್ದ ಬ್ರೆಂಡನ್ ಟೇಲರ್, ಭಾರತ ಪ್ರವಾಸದಲ್ಲಿದ್ದ ವೇಳೆ ನಾನು ಕೊಕೇನ್ ಸೇವನೆ ಮಾಡುತ್ತಿದ್ದ ವಿಡಿಯೋವನ್ನು ಉದ್ಯಮಿಯೊಬ್ಬರು ಚಿತ್ರೀಕರಣ ಮಾಡಿದ್ದರು. ಬಳಿಕ ಈ ವಿಡಿಯೋವನ್ನು ಇಟ್ಟುಕೊಂಡು ಪಂದ್ಯದಲ್ಲಿ ಸ್ಪಾಟ್  ಫಿಕ್ಸಿಂಗ್ ಮಾಡುವಂತೆ ಒಪ್ಪಂದ ಮಾಡಿಕೊಳ್ಳಲು ಬ್ಲ್ಯಾಕ್ ಮೇಲ್ (Black Mail) ಮಾಡುತ್ತಿದ್ದರು ಎಂದು ಹೇಳಿದ್ದರು. ಮುಂದಿನ ತಿಂಗಳು 36ನೇ ವರ್ಷಕ್ಕೆ ಕಾಲಿಡಲಿರುವ ಬ್ರೆಂಡನ್ ಟೇಲರ್, ಈಗಾಗಲೇ ತಾವು ಪುನಃಶ್ಚೇತನ ಕ್ಲಿನಿಕ್ ಗೆ ಸೇರಿರುವುದಾಗಿ ಹೇಳಿದ್ದರು.

ಕಳೆದ ಕೆಲವು ವರ್ಷಗಳಲ್ಲಿ ನಾನು ಕೆಲವು ಡ್ರಗ್ ಟೆಸ್ಟ್ ಗಳನ್ನು ಉಲ್ಲಂಘನೆ ಮಾಡುತ್ತಾ ಬಂದಿದ್ದೆ. ಆದರೆ, ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗುವ ಕೊನೆಯ ಪಂದ್ಯದ ವೇಳೆ, 2021ರ ಸೆಪ್ಟೆಂಬರ್ ನಲ್ಲಿ ಉದ್ದೀಪನ ಪರೀಕ್ಷೆಯಲ್ಲಿ ಸಿಕ್ಕಿಬಿದ್ದಿದ್ದೆ ಎಂದು ಬ್ರೆಂಡನ್ ಟೇಲರ್ ಹೇಳಿಕೊಂಡಿದ್ದರು. 



Read more…

[wpas_products keywords=”deal of the day sports items”]