
ಹೌದು, ಅಮೆಜಾನ್ ಗ್ರ್ಯಾಂಡ್ ಗೇಮಿಂಗ್ ಡೇಸ್ ಸೇಲ್ ಇದೀಗ ಲೈವ್ ಆಗಿದೆ. ಈ ಸೇಲ್‌ನಲ್ಲಿ ಗೇಮಿಂಗ್ ಗ್ಯಾಜೆಟ್ಸ್‌ಗಳ ಮೇಲೆ ಅಮೆಜಾನ್ ಬಿಗ್ ಆಫರ್ ನೀಡುತ್ತಿದೆ. ಇದರಲ್ಲಿ ಏಸರ್, ಸೋನಿ, ಹೆಚ್‌ಪಿ, ಡೆಲ್, JBL, Corsair ಮತ್ತು ಕಾಸ್ಮಿಕ್ ಬೈಟ್ ನಂತಹ ಜನಪ್ರಿಯ ಬ್ರಾಂಡ್‌ಗಳ ಗೇಮಿಂಗ್ ಪ್ರಾಡಕ್ಟ್‌ಗಳ ಮೇಲೆ ಸಾಕಷ್ಟು ಆಫರ್‌ಗಳು ಲಭ್ಯವಿದೆ. ಗ್ರಾಹಕರು ಗೇಮಿಂಗ್ ಪ್ರಾಡಕ್ಟ್‌ಗಳ ಮೇಲೆ 50%ರಿಯಾಯಿತಿಯನ್ನು ಪಡೆಯಬಹುದು ಎಂದು ಹೇಳಲಾಗಿದೆ. ಹಾಗಾದ್ರೆ ಅಮೆಜಾನ್ ಗ್ರ್ಯಾಂಡ್ ಗೇಮಿಂಗ್ ಸೇಲ್‌ನಲ್ಲಿ ಏನೆಲ್ಲಾ ಆಫರ್ ದೊರೆಯಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಮೆಜಾನ್ ಗ್ರ್ಯಾಂಡ್ ಗೇಮಿಂಗ್ ಡೇಸ್ ಸೇಲ್ ಈಗ ಲೈವ್ ಆಗಿದ್ದು ಜನವರಿ 30 ರವರೆಗೆ ನಡೆಯಲಿದೆ. ಈ ಸೇಲ್‌ನಲ್ಲಿ ಗ್ರಾಹಕರು ಗೇಮಿಂಗ್ ಪ್ರಾಡಕ್ಟ್‌ಗಳ ಮೇಲೆ 50% ರಿಯಾಯಿತಿಯನ್ನು ನೀರೀಕ್ಷಿಸಬಹುದಾಗಿದೆ. ಏಸರ್, ಸೋನಿ, ಹೆಚ್‌ಪಿ, ಡೆಲ್, JBL, Corsair ಮತ್ತು ಕಾಸ್ಮಿಕ್ ಬೈಟ್ ನಂತಹ ಜನಪ್ರಿಯ ಬ್ರಾಂಡ್‌ಗಳ ಗೇಮಿಂಗ್ ಪ್ರಾಡಕ್ಟ್‌ಗಳ ಮೇಲೆ ಆಫರ್ ದೊರೆಯಲಿದೆ. ಇದರಿಂದ ಗೇಮಿಂಗ್ ಲ್ಯಾಪ್‌ಟಾಪ್‌ಗಳು, ಡೆಸ್ಕ್‌ಟಾಪ್‌ಗಳು, ಮಾನಿಟರ್‌ಗಳು, ಗೇಮಿಂಗ್ ಕನ್ಸೋಲ್‌ಗಳು, ಗ್ರಾಫಿಕ್ಸ್ ಕಾರ್ಡ್‌ಗಳು, ಟಿವಿಗಳನ್ನು ಖರೀದಿಸುವವರಿಗೆ ಇದು ಉತ್ತಮ ಅವಕಾಶವಾಗಿದೆ.

ಗೇಮಿಂಗ್ ಟಿವಿಗಳ ಮೇಲೆ ಬಿಗ್ ಆಫರ್
ಅಮೆಜಾನ್ ಗ್ರ್ಯಾಂಡ್ ಗೇಮಿಂಗ್ ಡೇಸ್ ಸೇಲ್‌ನಲ್ಲಿ ಸೋನಿ ಬ್ರಾವಿಯಾ 55X80AJ ಟಿವಿ ಬಿಗ್ ಆಫರ್ ಪಡೆದುಕೊಂಡಿದೆ. ಈ ಸ್ಮಾರ್ಟ್‌ಟಿವಿ 55 ಇಂಚಿನ ಸ್ಮಾರ್ಟ್ ಟಿವಿಯಾಗಿದ್ದು, ಗೂಗಲ್ ಟಿವಿ ಆಪರೇಟಿಂಗ್ ಸಿಸ್ಟಮ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ. ಸುಗಮ ಗೇಮಿಂಗ್ ಅನುಭವಕ್ಕಾಗಿ 4K HDR ತಂತ್ರಜ್ಞಾನವನ್ನು ಹೊಂದಿದೆ. ಈ ಟಿವಿ 1,09,900. ಮೂಲ ಬೆಲೆ ಹೊಂದಿದ್ದು, 74,990 ರಿಂದ ರೂ.ಗಳಿಗೆ ಖರೀದಿಸಬಹುದಾಗಿದೆ. ಇದಲ್ಲದೆ ರೆಡ್ಮಿ X55 ಗೇಮಿಂಗ್ ಟಿವಿ ನಿಮಗೆ 44,999.ರೂ. ಬೆಲೆಗೆ ಲಭ್ಯವಿದೆ.

ಗೇಮಿಂಗ್ ಲ್ಯಾಪ್‌ಟಾಪ್‌ಗಳಿಗೆ ಬಿಗ್ ಡಿಸ್ಕೌಂಟ್
ಇನ್ನು ನೀವು ಗೇಮಿಂಗ್ ಲ್ಯಾಪ್‌ಟಾಪ್‌ಗಳನ್ನು ಸರ್ಚ್ ಮಾಡುತ್ತಿದ್ದರೆ ಅಮೆಜಾನ್ ಗ್ರ್ಯಾಂಡ್ ಗೇಮಿಂಗ್ ಸೇಲ್‌ನಲ್ಲಿ ಸಾಕಷ್ಟು ಆಯ್ಕೆಗಳಿವೆ. ಇದರಲ್ಲಿ HP ಪೆವಿಲಿಯನ್ ಗೇಮಿಂಗ್, ಏಸರ್ ನಿಟ್ರೋ 5, ಲೆನೊವೊ ಐಡಿಯಾಪ್ಯಾಡ್ ಗೇಮಿಂಗ್ 3 ಮತ್ತು ಹೆಚ್‌ಪಿ ವಿಕ್ಟಸ್ ಗೇಮಿಂಗ್ ಲ್ಯಾಪ್‌ಟಾಪ್‌ಗಳ ಮೇಲೆ ಅತ್ಯುತ್ತಮ ಆಫರ್ ಲಭ್ಯವಿದೆ. ಇದರಲ್ಲಿ ಆಸುಸ್ ROG Zephyrus G14 ಲ್ಯಾಪ್‌ಟಾಪ್ ನಿಮಗೆ ಕೇವಲ 1,39,990ರೂ. ಬೆಲೆಯಲ್ಲಿ ಲಭ್ಯವಾಗಲಿದೆ.

ಗೇಮಿಂಗ್ ಆಕ್ಸೆಸರಿಸ್ ಮೇಲೆ ಆಫರ್
ಇದಲ್ಲದೆ ಗೇಮಿಂಗ್ ಆಕ್ಸಿಸರಿಸ್‌ಗಳನ್ನು ಕೂಡ ನೀವು ಡಿಸ್ಕೌಂಟ್‌ನಲ್ಲಿ ಖರೀದಿಸಬಹುದಾಗಿದೆ. ಇದರಲ್ಲಿ ಆಸುಸ್ GT-AX11000 ROG ರ್ಯಾಪ್ಚರ್ ರೂಟರ್ ಇದೀಗ ಕೇವಲ 32,299ರೂ.ಗೆ ಲಭ್ಯವಿದೆ. ಇದಲ್ಲದೆ ಲಾಗಿಟೆಕ್ G502 ಗೇಮಿಂಗ್ ಮೌಸ್ 41% ರಿಯಾಯಿತಿ ದರದಲ್ಲಿ ದೊರೆಯಲಿದೆ. ಹೆಚ್ಚುವರಿಯಾಗಿ, EvoFox X-ಟೀಮ್ ಫೈರ್‌ಬ್ಲೇಡ್ ಗೇಮಿಂಗ್ ಮೌಸ್ ಮತ್ತು ಕೀಬೋರ್ಡ್ ಕಾಂಬೊ, JBL ಕ್ವಾಂಟಮ್ 100 ಗೇಮಿಂಗ್ ಹೆಡ್‌ಸೆಟ್, ಲಾಜಿಟೆಕ್ G435 ಗೇಮಿಂಗ್ ಹೆಡ್‌ಸೆಟ್ ಮತ್ತು ನಿರ್ಣಾಯಕ P2 NVMe PCIe SSD ನಲ್ಲಿ ಉತ್ತಮ ಆಫರ್ ಪಡೆದುಕೊಂಡಿದೆ.
Read more…
[wpas_products keywords=”smartphones under 15000 6gb ram”]