Source : The New Indian Express
ಅದಿತಿ ಪ್ರಭುದೇವ ನಟನೆಯ ಆನ ಸಿನಿಮಾ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಚಿತ್ರ ತಂಡ ಸದ್ಯ ಚಿತ್ರ ರಿಲೀಸ್ ಮಾಡಲು ಸಿದ್ಧವಾಗಿದೆ.
ಮನೋಜ್ ಪಿ ನಡಲುಮನೆ ಚೊಚ್ಚಲ ನಿರ್ದೇಶನದ ಸಿನಿಮಾವನ್ನು ಕನ್ನಡದ ಮೊದಲ ಮಹಿಳಾ ಸೂಪರ್ ಹೀರೋ ಚಿತ್ರ ಎಂದು ಬಿಂಬಿಸಲಾಗಿದೆ.
ಇದನ್ನೂ ಓದಿ: ‘ಜಮಾಲಿಗುಡ್ಡ’ ಕ್ಕೆ ಬರ್ತಿದ್ದಾರೆ ಡಾಲಿ ಧನಂಜಯ್ ಮತ್ತು ಅದಿತಿ ಪ್ರಭುದೇವ!
ಆನ ಸಿನಿಮಾ ಡಿಸೆಂಬರ್ 17 ರಂದು ರಿಲೀಸ್ ಆಗಲಿದೆ, ಸಿನಿಮಾಗೆ ಸೆನ್ಸಾರ್ ಬೋರ್ಡ್ ಯು/ಎ ಪ್ರಮಾಣ ಪತ್ರ ನೀಡಲಾಗಿದೆ. ತಮ್ಮ ಸಿನಿಮಾದಲ್ಲಿ ಕೇವಲನಾಯಕ-ನಾಯಕಿಯನ್ನು ಹೈಲೈಟ್ ಮಾಡುವುದಲ್ಲ, ತಂತ್ರಜ್ಞರಿಗೆ ಪ್ರಾಮುಖ್ಯತೆ ಇರುವ ಸಿನಿಮಾವಾಗಿದೆ.

ಯುಕೆ ಪ್ರೊಡಕ್ಷನ್ಸ್ ನಿರ್ಮಿಸಿರುವ ಆನದಲ್ಲಿ ಅದಿತಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ರಿತ್ವಿಕ್ ಮುರಳೀಧರ್ ಸಂಗೀತ ನೀಡಿದ್ದು, ಉದಯ್ ಲೀಲಾ ಅವರ ಛಾಯಾಗ್ರಹಣವಿದೆ.