2022ರಲ್ಲಿ ಹೊಸ 25,000 ಡಾಲರ್ ದರದ(ಅಂದಾಜು 18.75 ಲಕ್ಷ ರೂ.) ಹೊಸ ಎಲೆಕ್ಟ್ರಿಕ್ ಕಾರನ್ನು ಉತ್ಪಾದಿಸುವ ಯೋಜನೆ ಸದ್ಯಕ್ಕಿಲ್ಲ ಎಂದು ಕಂಪನಿ ಹೇಳಿಕೆ ನೀಡಿದ ಬೆನ್ನಲ್ಲೇ ಷೇರು ದರಗಳು ಕುಸಿಯಿತು. ಹೊಸ ಕಾರುಗಳನ್ನು ಬಿಡುಗಡೆಗೊಳಿಸಿದರೆ ನಮ್ಮ ಒಟ್ಟಾರೆ ಕಾರುಗಳ ಉತ್ಪಾದನೆ ಕುಸಿಯುತ್ತದೆ. ಹೀಗಾಗಿ ಹೊಸ ಮಾದರಿಯ ಕಾರನ್ನು ಈ ವರ್ಷ ಬಿಡುಗಡೆಗೊಳಿಸುತ್ತಿಲ್ಲ ಎಂದು ಕಂಪನಿಯ ಸ್ಥಾಪಕ ಮತ್ತು ಸಿಇಒ ಎಲನ್ ಮಸ್ಕ್ ತಿಳಿಸಿದ್ದಾರೆ.
ಹೀಗಿದ್ದರೂ, ಈ ವರ್ಷ ಕಂಪನಿಯ ವಹಿವಾಟು ಹೆಚ್ಚಳವಾಗಲಿದೆ. ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಯಲ್ಲಿ ಸ್ಪರ್ಧೆ ನೀಡಲಿದೆ ಎಂದು ತಜ್ಞರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾರಿನ ಬದಲು ರೊಬಾಟ್ ಸೃಷ್ಟಿ:
ಟೆಸ್ಲಾ 2022ರಲ್ಲಿ ಅಭಿವೃದ್ಧಿಪಡಿಸುವ ಮಹತ್ವದ ಉತ್ಪನ್ನ ಎಲೆಕ್ಟ್ರಿಕ್ ವಾಹನಗಳಲ್ಲ. ಬದಲಿಗೆ ಮಾನವರ ಹೋಲಿಕೆ ಇರುವ, ಆದರೆ ಕಾರ್ಖಾನೆಗಳಲ್ಲಿ ಕಠಿಣ ಟಾಸ್ಕ್‌ಗಳನ್ನು ನಿರ್ವಹಿಸಬಲ್ಲ ರೊಬಾಟ್‌ಗಳನ್ನು ಸೃಷ್ಟಿಸಲಾಗುವುದು ಎಂದು ಕಂಪನಿಯ ಸಿಇಒ ಎಲನ್ ಮಸ್ಕ್ ತಿಳಿಸಿದ್ದಾರೆ.
ಕಂಪನಿಯ ರೊಬಾಟ್ 5 ಅಡಿ 8 ಇಂಚು (1.73 ಮೀಟರ್) ಎತ್ತರ ಇರಲಿದೆ. ತೂಕ 56 ಕೆ.ಜಿ ಇರಲಿದೆ. ಮನುಷ್ಯರಿಗೆ ಮಾಡಲು ಅಸಾಧ್ಯವಾಗುವ ಅಪಾಯಕಾರಿ ಕೆಲಸಗಳನ್ನು ಈ ರೊಬಾಟ್‌ಗಳು ಮಾಡಲಿವೆ. ರಾಡಾರ್ ಮತ್ತು ಸೆನ್ಸರ್ ತಂತ್ರಜ್ಞಾನಕ್ಕಿಂತ ಕ್ಯಾಮೆರಾ ಮತ್ತು ಎಐ ತಂತ್ರಜ್ಞಾನವನ್ನು ಹೆಚ್ಚು ಬಳಸಲಾಗುವುದು ಎಂದಿದ್ದಾರೆ.
”ಆರ್ಥಿಕತೆಯ ಬುನಾದಿ ಕಾರ್ಮಿಕರು. ಕಾರ್ಮಿಕರ ಕೊರತೆ ಎಂಬುದು ಇರಬಾರದು. ಈ ನಿಟ್ಟಿನಲ್ಲಿ ರೊಬಾಟ್ ಮಹತ್ವ ಪಡೆಯಲಿದೆ. ಆದ್ದರಿಂದ ಟೆಸ್ಲಾ ಬೋಟ್ ಎಂಬ ರೊಬಾಟ್ ಅಭಿವೃದ್ಧಿಪಡಿಸಲಾಗುವುದು. ಇದರ ಜತೆಗೆ ಸ್ವಯಂ ಚಾಲಿತ ಕಾರುಗಳ ಅಭಿವೃದ್ಧಿಗೂ ಆದ್ಯತೆ ನೀಡಲಾಗುವುದು” ಎಂದಿದ್ದಾರೆ.
Read more
[wpas_products keywords=”deal of the day sale today offer all”]