ನವದೆಹಲಿ: ಸದ್ಯ ಸುತ್ತಾಟದಲ್ಲಿ ಬ್ಯುಸಿಯಾಗಿರುವ ನಟಿ ಸಮಂತಾ ರುತ್ ಪ್ರಭು ಅವರು, ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಸ್ಕೀಯಿಂಗ್ ತರಬೇತಿ ಪಡೆಯುತ್ತಿರುವ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಪೋಸ್ಟ್ ಮಾಡಿರುವ ಸಮಂತಾ, ‘ಸ್ಕೀಯಿಂಗ್ ಕಲಿಯುವ ವೇಳೆ ನೂರಾರು ಬಾರಿ ವಿಫಲವಾಗಿದ್ದು, ಹಲವು ಬಾರಿ ಬಿದ್ದಿದ್ದೇನೆ. ಎದ್ದಿದ್ದೇನೆ’ ಎಂದು ಬರೆದುಕೊಂಡಿದ್ದಾರೆ. ಸ್ಕೀಯಿಂಗ್ ಮಾಡುತ್ತಾ ಮಾಡುತ್ತಾ ಸಮತೋಲನ ತಪ್ಪಿ ಅವರು ಮುಗ್ಗರಿಸಿರುವ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ.
ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಓದಿ… 36ನೇ ವಸಂತಕ್ಕೆ ಕಾಲಿಟ್ಟ ಶ್ರುತಿ ಹಾಸನ್: ಸಲಾರ್ ಚಿತ್ರದ ಫಸ್ಟ್ ಲುಕ್ ಬಿಡುಗಡೆ
ಸ್ಕೀಯಿಂಗ್ ತರಬೇತಿ ನೀಡುತ್ತಿರುವ ಕೇಟ್ ಮೆಕ್ಬ್ರೈಡ್ ಅವರೊಂದಿಗಿನ ಚಿತ್ರ ಹಂಚಿಕೊಂಡಿರುವ ಸಮಂತಾ,‘ಅಂಬೆಗಾಲಿಡುತ್ತಾ ಸ್ಕೀಯಿಂಗ್ ಆರಂಭಿಸಿದೆ. ನೂರಾರು ಬಾರಿ ಬಿದ್ದಿದ್ದೇನೆ. ಪ್ರತೀ ಬಾರಿಯೂ ಸಾವರಿಸಿಕೊಂಡು ಎದ್ದಿದ್ದೇನೆ. ಹಲವು ಬಾರಿ ಸಾಕು ಬಿಟ್ಟುಬಿಡೋಣ ಎನ್ನಿಸಿತ್ತು. ಆದರೆ, ಎಲ್ಲವನ್ನೂ ಎದುರಿಸುವುದನ್ನು ಹೇಳಿಕೊಟ್ಟ ಕೇಟ್ ಅವರಿಗೆ ಆಭಾರಿಯಾಗಿದ್ದೇನೆ. ಎಲ್ಲಾ ಬದಲಾವಣೆಗೆ ಕಾರಣ ನೀವು’ ಎಂದು ಬರೆದುಕೊಂಡಿದ್ದಾರೆ.
ಓದಿ… ಮಾಲ್ಡೀವ್ಸ್‌ನಲ್ಲಿ ಬಿಸಿಲಿಗೆ ನಶೆ ಏರಿಸಿದ ಮಾಳವಿಕಾ ಮೋಹನನ್: ಹಾಟ್ ವಿಡಿಯೊ ವೈರಲ್
ಇತ್ತೀಚೆಗೆ ತೆರೆಕಂಡ ಸುಕುಮಾರ್ ನಿರ್ದೇಶನದ ‘ಪುಷ್ಪ’ ಸಿನಿಮಾದಲ್ಲಿ ಸಮಂತಾ, ಮೊದಲ ಬಾರಿಗೆ ಐಟಂ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
‘ಹೂ ಅಂತಿಯಾ ಮಾವ.. ಊ ಊ ಅಂತಿಯಾ’ ಹಾಡಿಗೆ ಸಮಂತಾ ಮೈ ಚಳಿ ಬಿಟ್ಟು ಸೊಂಟ ಬಳುಕಿಸಿದ್ದಾರೆ. ಸಿನಿಮಾ ಗೆಲುವಿನಲ್ಲಿ ಈ ವಿಶೇಷ ಹಾಡು ಪ್ರಮುಖ ಪಾತ್ರ ವಹಿಸಿದೆ ಎಂಬುದರಲ್ಲಿ ಎರಡು ಮಾತಿಲ್ಲ.
ಗುಣಶೇಖರ್ ನಿರ್ದೇಶನದ ‘ಶಾಕುಂತಲಂ’ ಚಿತ್ರದಲ್ಲಿ ಸಮಂತಾ ಕಾಣಿಸಿಕೊಳ್ಳುತ್ತಿದ್ದಾರೆ.
ಸಮಂತಾ ಹಾಗೂ ನಾಗ ಚೈತನ್ಯ ಅವರು ಕಳೆದ ವರ್ಷ ಅಕ್ಟೋಬರ್‌ನಲ್ಲಿ ವಿಚ್ಛೇದನ ಪಡೆಯುತ್ತಿರುವುದಾಗಿ ಘೋಷಿಸಿದ್ದರು.
ಓದಿ… ಕೊಹ್ಲಿಗೆ ರವಿ ಬೆಂಬಲ: ಶಾಸ್ತ್ರಿ 2.0 ಬಗ್ಗೆ ನನಗೆ ಅರ್ಥವಾಗುತ್ತಿಲ್ಲ ಎಂದ ಸಂಜಯ್
Read More…Source link
[wpas_products keywords=”deal of the day party wear for men wedding shirt”]