Karnataka news paper

ಗೌಡರ ಕುಟುಂಬದ ವಿಶೇಷ ದಾಖಲೆ: ಜಿಪಂನಿಂದ ಸಂಸತ್‌ವರೆಗೆ ಪ್ರತಿ ಹಂತದಲ್ಲೂ ಮನೆ ಸದಸ್ಯರು!


ಬೆಂಗಳೂರು: ವಿಧಾನ ಪರಿಷತ್‌ ಪರಿಷತ್‌ ಚುನಾವಣೆಯಲ್ಲಿಜೆಡಿಎಸ್‌ ಪಕ್ಷ ಹಲವು ಕ್ಷೇತ್ರಗಳನ್ನು ಕಳೆದುಕೊಂಡರೂ ದೇವೇಗೌಡರ ಕುಟುಂಬ ರಾಷ್ಟ್ರ ಹಾಗೂ ರಾಜ್ಯದಲ್ಲಿ ವಿಶೇಷ ದಾಖಲೆ ಮಾಡಿದೆ!

ಪಂಚಾಯಿತಿಯಿಂದ ಪಾರ್ಲಿಮೆಂಟ್‌ ತನಕ ರಾಜಕೀಯ ಶಕ್ತಿ ಪ್ರದರ್ಶನ ಮಾಡುವುದು ರಾಜಕೀಯ ಪಕ್ಷದ ಗುರಿ. ಆ ದಿಸೆಯಲ್ಲಿ ಜೆಡಿಎಸ್‌ ಪಕ್ಷ ಕುಟುಂಬದ ಮೂಲಕ ಮಾಡಿ ತೋರಿಸಿದ ದೇಶದ ಏಕೈಕ ಪಕ್ಷವಾಗಿದೆ. ಪ್ರಜಾಪ್ರಭುತ್ವ ಭದ್ರವಾಗಿಟ್ಟಿರುವ ಸಂಸತ್ತು, ರಾಜ್ಯ ಮತ್ತು ಪಂಚಾಯಿತಿ ಎಲ್ಲ ಮಾದರಿ ಚುನಾವಣೆ ವ್ಯವಸ್ಥೆಯಲ್ಲೂ ಸರಣಿಯಾಗಿ ಸರಪಳಿ ಕುಟುಂಬ ಜೋಡಿಸಿರುವುದು ವಿಶೇಷವಾಗಿದೆ.

ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಏಳನೆಯ ಕುಡಿಯಾದ ಸೂರಜ್‌ ರೇವಣ್ಣ ವಿಧಾನಪರಿಷತ್‌ಗೆ ಹಾಸನ ಕ್ಷೇತ್ರದಿಂದ ಆಯ್ಕೆಯಾಗುವ ಮೂಲಕ ಈ ದಾಖಲೆಯಾಗಿದೆ. ಇದರ ಜತೆಗೆ ಮೊದಲ ಬಾರಿಗೂ ಗೌಡರ ಕುಟುಂಬ ವಿಧಾನಪರಿಷತ್‌ ಅಂಗಳಕ್ಕೆ ಕಾಲಿಟ್ಟಂತಾಗಿದೆ.

ಚುನಾವಣೆ ಮೂಲಕ ನನ್ನ ತಾಯಿ ನನಗೆ ರಾಜಕೀಯ ಜನ್ಮ ನೀಡಿದ್ದಾರೆ: ಸೂರಜ್‌ ರೇವಣ್ಣ

ರಾಷ್ಟ್ರೀಯ ನಾಯಕರಾದ ದೇವೇಗೌಡರು ರಾಜ್ಯಸಭೆಯ ಸದಸ್ಯರಾಗಿದ್ದಾರೆ. ಮೊಮ್ಮಗ ಪ್ರಜ್ವಲ ರೇವಣ್ಣ ಸಂಸತ್ತಿನ ಅಂಗಳಕ್ಕೆ ಹಾಸನ ಕ್ಷೇತ್ರದ ಪ್ರತಿನಿಧಿಯಾಗಿದ್ದಾರೆ. ಗೌಡರ ಮಕ್ಕಳಾದ ಎಚ್‌.ಡಿ.ಕುಮಾರಸ್ವಾಮಿ, ಎಚ್‌.ಡಿ.ರೇವಣ್ಣ ವಿಧಾನಸಭೆಯ ಕ್ರಮವಾಗಿ ಚನ್ನಪಟ್ಟಣ ಮತ್ತು ಹೊಳೆನರಸಿಪುರದಿಂದ ಆಯ್ಕೆಯಾಗಿ ಬಂದಿದ್ದಾರೆ. ಅನಿತಾ ಕುಮಾರಸ್ವಾಮಿ ರಾಮನಗರದಿಂದ ಗೆದ್ದಿದ್ದಾರೆ. ರೇವಣ್ಣ ಪತ್ನಿ ಭವಾನಿ ರೇವಣ್ಣ ಜಿಲ್ಲಾ ಪಂಚಾಯಿತಿಯ ಪ್ರತಿನಿಧಿಯಾಗಿದ್ದಾರೆ.

ಬಿಹಾರದಲ್ಲಿ ಲಾಲೂ ಪ್ರಸಾದ್‌ ಯಾದವ್‌, ಉತ್ತರ ಪ್ರದೇಶದಲ್ಲಿ ಮುಲಾಯಂಸಿಂಗ್‌ ಯಾದವ್‌ ಹಾಗೂ ತಮಿಳುನಾಡಿನಲ್ಲಿ ಕರುಣಾನಿಧಿ ಕುಟುಂಬ ಇದ್ದರೂ ಇಂತಹ ದಾಖಲೆ ಬರೆಯಲು ಸಾಧ್ಯವಾಗಿರಲಿಲ್ಲ.

ತಪ್ಪಿದ ಅವಕಾಶ:
ಲೋಕಸಭೆ ಚುನಾವಣೆಯಲ್ಲಿ ಮಂಡ್ಯದಿಂದ ನಿಖಿಲ್‌ ಕುಮಾರಸ್ವಾಮಿ ಜಯಗಳಿಸಿದ್ದರೆ ಜೆಡಿಎಸ್‌ ಹೆಸರಲ್ಲಿ ಸಂಸತ್ತಿನಲ್ಲಿ ಮತ್ತು ವಿಧಾನಸಭೆಯಲ್ಲಿ ಸಹೋದರರು ಇದ್ದ ಏಕೈಕ ರಾಜಕೀಯ ಕುಟುಂಬ ದಾಖಲೆ ಬರೆಯಬಹುದಾಗಿತ್ತು.

ಚುನಾವಣೆ ವಿಶೇಷ

ಮೊದಲ ಬಾರಿ ಗೆಲುವು
ಬಿಜೆಪಿ: ಕಾರವಾರ, ಚಿತ್ರದುರ್ಗ, ಬಳ್ಳಾರಿ, ಬೆಂಗಳೂರು ನಗರ

ಕಳೆದುಕೊಂಡಿರುವುದು
ಬಿಜೆಪಿ: ಬೆಳಗಾವಿ
ಕಾಂಗ್ರೆಸ್‌:ಕಾರವಾರ, ಚಿತ್ರದುರ್ಗ, ಬಳ್ಳಾರಿ, ಬೆಂಗಳೂರು ನಗರ, ಹಾಸನ
ಜೆಡಿಎಸ್‌: ಕೋಲಾರ, ಮಂಡ್ಯ, ಮೈಸೂರು, ತುಮಕೂರು

ಗೌಡರ ಕುಟುಂಬದ ಮತ್ತೊಂದು ಕುಡಿ ಮೇಲ್ಮನೆಗೆ ಎಂಟ್ರಿ; ಹಾಸನದಲ್ಲಿ ಗೆದ್ದು ಬೀಗಿದ ಸೂರಜ್ ರೇವಣ್ಣ!

ಉಳಿಸಿಕೊಂಡಿರುವುದು

ಬಿಜೆಪಿ: ಚಿಕ್ಕಮಗಳೂರು, ಕೊಡಗು, ಮಂಗಳೂರು, ಹುಬ್ಬಳ್ಳಿ, ಕಲಬುರಗಿ, ಧಾರವಾಡ
ಕಾಂಗ್ರೆಸ್‌: ಮೈಸೂರು, ಬೆಂ.ಗ್ರಾಮಾಂತರ, ವಿಜಯಪುರ, ಧಾರವಾಡ, ಬೀದರ್‌, ರಾಯಚೂರು, ಮಂಗಳೂರು

ಗಳಿಸಿಕೊಂಡಿರುವುದು
ಕಾಂಗ್ರೆಸ್‌: ಕೋಲಾರ, ಮಂಡ್ಯ, ಹಾಸನ, ಬೆಳಗಾವಿ, ತುಮಕೂರು
ಜೆಡಿಎಸ್‌: ಹಾಸನ



Read more