Karnataka news paper

ಹುಮ್ನಾಬಾದ್‌ನಲ್ಲಿ ಮನವಿ ಸ್ವೀಕರಿಸಲು ಬಾರದ ತಹಶೀಲ್ದಾರ್‌ಗೆ ಒದ್ದ ದಲಿತ ಸಂಘಟನೆ ಕಾರ್ಯಕರ್ತರು..!


ಬೀದರ್: ಬೀದರ್ ಜಿಲ್ಲೆಯ ಹುಮ್ನಾಬಾದ್ ತಹಶಿಲ್ದಾರ್ ಡಾ. ಪ್ರದೀಪ್ ಕುಮಾರ್ ಹಿರೇಮಠ ಅವರ ಮೇಲೆ ದಲಿತ ಪರ ಸಂಘಟನೆ ಕಾರ್ಯಕರ್ತರು ಮೀಟಿಂಗ್ ಹಾಲ್‌ನಲ್ಲೇ ಹಲ್ಲೆ ನಡೆಸಿರೋ ಆರೋಪ ಕೇಳಿ ಬಂದಿದೆ.

ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿದ ರಾಯಚೂರು ಜಿಲ್ಲಾ ನ್ಯಾಯಾಧೀಶರ ವಿರುದ್ಧ ಪ್ರತಿಭಟನೆ ಮಾಡಲು ಹುಮ್ನಾಬಾದ್ ತಹಶೀಲ್ದಾರ್ ಕಚೇರಿ ಬಳಿ ಬಂದಿದ್ದ ದಲಿತ ಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ಬಳಿಕ ಮನವಿ ಪತ್ರ ನೀಡಲು ಮುಂದಾದರು.

ಈ ವೇಳೆ, ತಹಶೀಲ್ದಾರ್ ಬರುವ ಬದಲು ಉಪ ತಹಶೀಲ್ದಾರ್ ಸ್ಥಳಕ್ಕೆ ಬಂದರು. ಈ ವೇಳೆ ಕಾರ್ಯಕರ್ತರು, ತಹಶೀಲ್ದಾರ್ ಅವರೇ ಸ್ಥಳಕ್ಕೆ ಬರಬೇಕು ಎಂದು ಪಟ್ಟು ಹಿಡಿದರು. ಅಷ್ಟೇ ಅಲ್ಲ, ಸ್ಥಳಕ್ಕೆ ಬಾರದ ತಹಶೀಲ್ದಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ, ತಹಶೀಲ್ದಾರ್ ಸಭೆ ನಡೆಸುತ್ತಿದ್ದ ಮೀಟಿಂಗ್ ಹಾಲ್‌ಗೆ ನುಗ್ಗಿದ ಕಾರ್ಯಕರ್ತರು, ಕುರ್ಚಿ ಬಿಸಾಡಿ ತಹಶೀಲ್ದಾರ್ ಅವರ ಮೇಲೆ ಹಲ್ಲೆ ನಡೆಸಿದ ಆರೋಪ ಕೇಳಿ ಬಂದಿದೆ.

ತಹಶೀಲ್ದಾರ್ ಅವರಿಗೆ ದಲಿತ ಪರ ಸಂಘಟನೆ ಕಾರ್ಯಕರ್ತರು ಒದ್ದರು ಎಂಬ ಆರೋಪವೂ ಕೇಳಿ ಬಂದಿದೆ. ಅಷ್ಟೇ ಅಲ್ಲ, ಈ ಕಾರ್ಯಕರ್ತರು ತಹಶೀಲ್ದಾರ್ ಕಚೇರಿಯಲ್ಲಿನ ಪೀಠೋಪಕರಣಗಳನ್ನು ಕಿತ್ತೆಸೆದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂಬ ಆರೋಪವನ್ನೂ ಮಾಡಲಾಗಿದೆ.

ಗುಡಿಬಂಡೆ: ಕಳಪೆ ಪಡಿತರ ದಿನಸಿ ನೀಡಿದ್ದನ್ನು ಪ್ರಶ್ನಿಸಿದ ದಲಿತ ಮಹಿಳೆಯ ಜುಟ್ಟು ಹಿಡಿದು ಜಾತಿ ನಿಂದನೆ!
ಮನವಿ ಪತ್ರ ತೆಗೆದುಕೊಳ್ಳಲು ಬಾರದ ತಹಶೀಲ್ದಾರ್‌ಗೆ ಕಾಲಿಂದ ಒದ್ದು ಹಲ್ಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಇದೀಗ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಕಾರ್ಯಕರ್ತರಿಂದ ಹಲ್ಲೆಗೆ ಒಳಗಾದ ಬೀದರ್ ಜಿಲ್ಲೆಯ ಹುಮ್ನಾಬಾದ್ ತಹಶೀಲ್ದಾರ್ ಅವರು ತಾಲೂಕು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳೀಯ ಶಾಸಕ ರಾಜಶೇಖರ ಪಾಟೀಲ, ವಿಧಾನ ಪರಿಷತ್ ಸದಸ್ಯ ಚಂದ್ರಶೇಖರ ಪಾಟೀಲ್, ವಿಧಾನ ಪರಿಷತ್ ಸದಸ್ಯ ಭೀಮರಾವ ಪಾಟೀಲ ಸೇರಿದಂತೆ ಹಲವು ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿ ತಹಶೀಲ್ದಾರ್ ಆರೋಗ್ಯ ವಿಚಾರಿಸಿದ್ದಾರೆ.

‘ದಲಿತ ವಿರೋಧಿ ಬಿಜೆಪಿ’: ಕೊರಗರ ಮೇಲಿನ ಹಲ್ಲೆ ಯೋಜಿತ ಸಂಚಿನಂತೆ ಕಾಣುತ್ತಿದೆ ಎಂದ ಸಿದ್ದರಾಮಯ್ಯ
ಬಳಿಕ ಮಾತನಾಡಿದ ಶಾಸಕ ರಾಜಶೇಖರ ಪಾಟೀಲ್, ತಹಶೀಲ್ದಾರ್ ಮೇಲೆ ಹಲ್ಲೆ ನಡೆದಸುದ್ದಿ ತಿಳಿದ ತಕ್ಷಣ ಆಸ್ಪತ್ರೆಗೆ ಬಂದಿದ್ದೇನೆ. ಈ ರೀತಿಯ ಘಟನೆಗಳು ಆಗಬಾರದು. ನಾನು ಜಿಲ್ಲಾಧಿಕಾರಿಗಳ ಜೊತೆ ಈ ಸಂಬಂಧ ಮಾತನಾಡುತ್ತೇನೆ. ಸರ್ಕಾರಿ ಅಧಿಕಾರಿಗಳಿಗೆ ಜನತೆ ಗೌರವಿಸಬೇಕು. ಆದ್ರೆ, ಈ ರೀತಿಯ ಅಹಿತಕರ ಘಟನೆ ನಡೆದಿದೆ. ಹೀಗಾಗಿ, ಜಿಲ್ಲಾಧಿಕಾರಿಗಳಿಗೆ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ಜೊತೆ ಈ ಸಂಬಂಧ ಮಾತನಾಡುವೆ ಎಂದಿದ್ದಾರೆ. ಅಷ್ಟೇ ಅಲ್ಲ, ಸಿಸಿ ಟಿವಿ ಕ್ಯಾಮೆರಾಗಳನ್ನು ಪಲಿಶೀಲನೆ ಮಾಡಿದ ಬಳಿಕ ಘಟನೆ ಬಗ್ಗೆ ಮಾಹಿತಿ ಪಡೆಯುತ್ತೇನೆ ಎಂದಿದ್ದಾರೆ.

ಪಾನಿಪೂರಿ ತಿನ್ನಲು ಬಂದರೆಂದು ಪರಿಶಿಷ್ಟರ ಮನೆಗೆ ನುಗ್ಗಿ ಹಲ್ಲೆ! ಹೊರ ರಾಜ್ಯದಲ್ಲಲ್ಲ.. ನಮ್ಮದೇ ಮೈಸೂರಿನಲ್ಲಿ!



Read more

[wpas_products keywords=”deal of the day sale today offer all”]