ಭಾರ್ತಿ ಏರ್ಟೆಲ್
ದೇಶದ ಎರಡನೇ ಅತಿದೊಡ್ಡ ಟೆಲಿಕಾಂ ಪರಿಹಾರ ಕಂಪನಿ ಭಾರ್ತಿ ಏರ್‌ಟೆಲ್ ಗೂಗಲ್ ಜೊತೆ ಪಾಲುದಾರಿಕೆಯನ್ನು ಘೋಷಿಸಿದೆ. ಭಾರ್ತಿ ಏರ್‌ಟೆಲ್ ಗೂಗಲ್‌ನೊಂದಿಗೆ ದೀರ್ಘಾವಧಿಯ ಒಪ್ಪಂದ ಮಾಡಿಕೊಳ್ಳಲಿದೆ. ಇದು ಭಾರತದ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸಲು ಸಹಾಯಕ. ಈ ಒಪ್ಪಂದದ ಪ್ರಕಾರ, ಭಾರ್ತಿ ಏರ್‌ಟೆಲ್‌ನಲ್ಲಿ 1 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಗೂಗಲ್ ನಿರ್ಧರಿಸಿದೆ. ಗೂಗಲ್ ಈ ಇಂಡಿಯಾ ಡಿಜಿಟೈಸೇಶನ್ ಫಂಡ್ ಅಡಿಯಲ್ಲಿ ಹೂಡಿಕೆ ಮಾಡಲಿದೆ. ಇದು ಭಾರ್ತಿ ಏರ್‌ಟೆಲ್‌ನಲ್ಲಿ 700 ಮಿಲಿಯನ್ ಡಾಲರ್ ಈಕ್ವಿಟಿ ಹೂಡಿಕೆ ಭಾಗವಾಗಿದೆ. ಏರ್‌ಟೆಲ್ ಮತ್ತು ಗೂಗಲ್ ನಡುವಿನ ಈ ಒಪ್ಪಂದವನ್ನು ಗ್ರಾಹಕರ ಅಗತ್ಯಗಳಿಗೆ ಅತ್ಯುತ್ತಮ ವೈಶಿಷ್ಟ್ಯಗಳು ಮತ್ತು end-to-end ಉತ್ಪನ್ನಗಳನ್ನು ತರಲು ಮಾಡಲಾಗಿದೆ. ಏಕಕಾಲದಲ್ಲಿ, ಉತ್ತಮ ಗ್ರಾಹಕ ಅನುಭವ ಒದಗಿಸಲು Google ಮತ್ತು ಭಾರ್ತಿ ಏರ್‌ಟೆಲ್ ಮುಂದಾಗಿದೆ.
ಲಾರ್ಸೆನ್ & ಟೂಬ್ರೊ
ದೇಶದ ಇಂಜಿನಿಯರಿಂಗ್ ದೈತ್ಯ ಲಾರ್ಸೆನ್ & ಟೌಬ್ರೊದ ಡ್ರೋಕಾರ್ಬನ್ ಇಂಜಿನಿಯರಿಂಗ್ ಲಿಮಿಟೆಡ್ (LTHE), ಒಎನ್‌ಜಿಸಿಯ (ONGC) ಪೈಪ್‌ಲೈನ್ ರಿಪ್ಲೇಸ್‌ಮೆಂಟ್ ಪ್ರಾಜೆಕ್ಟ್‌ನ 7ನೇ ಹಂತದ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಘೋಷಿಸಿದೆ.
ಈ ಒಪ್ಪಂದವು ಇಂಜಿನಿಯರಿಂಗ್, ಸಂಗ್ರಹಣೆ, ನಿರ್ಮಾಣ, ಸ್ಥಾಪನೆ, ಮತ್ತು ಸರಿಸುಮಾರು 350 ಕಿಮೀ ಉಪ-ಸಮುದ್ರ ಪೈಪ್‌ಲೈನ್ ಅಳವಡಿಕೆ ಮತ್ತು ಅದಕ್ಕೆ ಸಂಬಂಧಿಸಿದ ಕಡಲಾಚೆಯ ಕಾರ್ಯಗಳನ್ನು ಹೊಂದಿದೆ. ಭಾರತದ ಪಶ್ಚಿಮ ಕರಾವಳಿಯಾದ್ಯಂತ ONGCಯ ಕ್ಷೇತ್ರಗಳನ್ನು ಈ ಒಪ್ಪಂದ ಒಳಗೊಂಡದೆ.
ಇಂದು ಹೆಚ್ಚಳ ಕಂಡ ಸ್ಟಾಕ್‌ಗಳು:
ನಿಫ್ಟಿ 50 ಸೂಚ್ಯಂಕದಲ್ಲಿ NTPC, UPL, ಸನ್ ಫಾರ್ಮಾ, ಟಾಟಾ ಕನ್ಸೂಮರ್ಸ್ ಮತ್ತು ಇಂಡಸ್‌ಲ್ಯಾಂಡ್ ಬ್ಯಾಂಕ್ ಷೇರುಗಳು ಇಂದಿನ ವಹಿವಾಟಿನ ಅವಧಿಯಲ್ಲಿ ಶೇ1.75 ಕ್ಕಿಂತ ಹೆಚ್ಚು ಏರಿಕೆಯಾಗಿದೆ. ಬಿಎಸ್‌ಇ ಸೆನ್ಸೆಕ್ಸ್ ಸೂಚ್ಯಂಕದಲ್ಲಿ, JSW ಹೋಲ್ಡಿಂಗ್ಸ್, ಎಲ್‌ಐಸಿ ಹೌಸಿಂಗ್ ಫೈನಾನ್ಸ್, ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಸ್, ತಿರುಮಲೈ ಕೆಮಿಕಲ್ಸ್ ಮತ್ತು ಗುಜರಾತ್ ಮಿನರಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಷೇರುಗಳು ತಲಾ ಶೇ. 8.80 ಕ್ಕಿಂತ ಹೆಚ್ಚು ಲಾಭ ಗಳಿಸಿವೆ.
Read more
[wpas_products keywords=”deal of the day sale today offer all”]