Karnataka news paper

ಎಫ್‌ಐಎಚ್‌ ಪ್ರೊ ಲೀಗ್‌: ಮನ್‌ಪ್ರೀತ್‌ ಸಾರಥ್ಯದ ಭಾರತ ಹಾಕಿ ತಂಡ ಪ್ರಕಟ!


ಹೊಸದಿಲ್ಲಿ: ಫೆಬ್ರವರಿ 8ರಿಂದ 13ರವರೆಗೆ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಎಫ್‌ಐಎಚ್‌ ಪ್ರೊ ಲೀಗ್‌ಗೆ 20 ಸದಸ್ಯರ ಭಾರತ ಪುರುಷರ ತಂಡವನ್ನು ಪ್ರಕಟಿಸಲಾಗಿದೆ. ಮನ್‌ಪ್ರೀತ್‌ ಸಿಂಗ್‌ಗೆ ನಾಯಕತ್ವ ಹಾಗೂ ಹರ್ಮನ್‌ಪ್ರೀತ್‌ ಸಿಂಗ್‌ಗೆ ಉಪನಾಯಕನ ಸ್ಥಾನ ನೀಡಲಾಗಿದೆ.

ಭಾರತ ತಂಡ ಫೆಬ್ರವರಿ 4ರಂದು ಬೆಂಗಳೂರಿನಿಂದ ದಕ್ಷಿಣ ಆಫ್ರಿಕಾಗೆ ಪ್ರಯಾಣ ಬೆಳೆಸಲಿದೆ. ಫೆಬ್ರವರಿ 8 ರಂದು ತನ್ನ ಮೊದಲ ಪಂದ್ಯದಲ್ಲಿ ಫ್ರಾನ್ಸ್‌ ತಂಡವನ್ನು ಎದುರಿಸಲಿರುವ ಮನ್‌ಪ್ರೀತ್‌ ಬಳಗ, ಫೆಬ್ರವರಿ 9ರಂದು ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಡಲಿದೆ. ನಂತರ 12ರಂದು ಫ್ರಾನ್ಸ್‌ ಹಾಗೂ ಮರು ದಿನ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಹೋರಾಟ ನಡೆಸಲಿದೆ.

ಯುವ ಡ್ರ್ಯಾಗ್‌ ಫ್ಲಿಕ್ಕರ್‌ ಜುಗ್ರಾಜ್‌ ಸಿಂಗ್‌ ಮತ್ತು ಸ್ಟ್ರೈಕರ್‌ ಅಭಿಷೇಕ್‌ ತಂಡದಲ್ಲಿ ಸ್ಥಾನ ಪಡೆದಿರುವ ಹೊಸ ಮುಖಗಳಾಗಿವೆ.
ಅಟಾರಿಯ ಜುಗ್ರಾಜ್‌ ಇದೇ ಮೊದಲ ಸಲ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇತ್ತೀಚಿಗೆ ನಡೆದ ರಾಷ್ಟ್ರೀಯ ಅಂತರ ಇಲಾಖೆ ಸೀನಿಯರ್‌ ಹಾಕಿ ಟೂರ್ನಿಯಲ್ಲಿಅವರು ಸರ್ವಿಸಸ್‌ ಕ್ರೀಡಾ ನಿಯಂತ್ರಣ ಮಂಡಳಿ ತಂಡದ ಪರ ಗಮನ ಸೆಳೆದಿದ್ದರು.

ಆಸ್ಟ್ರೇಲಿಯಾ ಓಪನ್‌ 2022: ಫೈನಲ್‌ಗೇರಿದ ಆಶ್ಲಿ ಬಾರ್ಟಿ, ಕಾಲಿನ್ಸ್‌!

ಸ್ಟ್ರೈಕರ್‌ ಅಭಿಷೇಕ್‌ ಜೂನಿಯರ್‌ ಪ್ರತಿಭಾನ್ವೇಷಣೆಯಲ್ಲಿ ಆಯ್ಕೆಯಾದ ಆಟಗಾರನಾಗಿದ್ದಾರೆ. 2017 ಮತ್ತು 2018ರಲ್ಲಿಅಲ್ಲದೇ ಸುಲ್ತಾನ್‌ ಆಫ್‌ ಜೊಹರ್‌ ಕಪ್‌ ಟೂರ್ನಿಯಲ್ಲಿ ಭಾರತ ಯುವ ತಂಡದಲ್ಲಿಆಡಿದ್ದರು. ಹರಿಯಾಣದ ಸೋನೆಪತ್‌ನ ಅಭಿಷೇಕ್‌ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ತಂಡವನ್ನು ಪ್ರತಿನಿಧಿಸಿದ್ದಾರೆ. ಅನುಭವಿ ಗೋಲ್‌ಕೀಪರ್‌ಗಳಾದ ಪಿ.ಆರ್‌. ಶ್ರೀಜೇಶ್‌ ಮತ್ತು ಕೃಷನ್‌ ಬಹಾದರೂ ಪಾಠಕ್‌ ಕೂಡ ಸ್ಥಾನ ಪಡೆದಿದ್ದಾರೆ.

‘‘ಬೆಂಗಳೂರಿನ ಸಾಯ್‌ ಕೇಂದ್ರದಲ್ಲಿ ನಡೆದ ಮೂರು ವಾರಗಳ ಶಿಬಿರದ ಬಳಿಕ ಅಂತಿಮ ತಂಡವನ್ನು ಪ್ರಕಟಿಸಲಾಗಿದೆ. ಇದರಲ್ಲಿ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದ 14 ಮಂದಿ ಆಟಗಾರರು ಹಾಗೂ ಇಬ್ಬರು ಹೊಸ ಮುಖಗಳಿಗೆ ಸ್ಥಾನ ಕಲ್ಪಿಸಲಾಗಿದೆ,’’ ಎಂದು ಭಾರತ ತಂಡದ ಮುಖ್ಯ ಕೋಚ್‌ ಗ್ರಹಂ ರೀಡ್‌ ಹೇಳಿಕೆಯಲ್ಲಿತಿಳಿಸಿದ್ದಾರೆ.

ಭಾರತದ ಕ್ರೀಡೆಗೆ ಮೆರಗು ತಂದ 2021, ವರ್ಷದ ಸಾಧನೆಯ ಮೆಲುಕು!

ಕೋವಿಡ್‌-19 ಮುಂಜಾಗ್ರತ ಕ್ರಮವಾಗಿ ಐದು ಮೀಸಲು ಆಟಗಾರರ ಜತೆಗೆ ನಾಲ್ವರು ಹೆಚ್ಚುವರಿ ಆಟಗಾರರು ತಂಡದೊಂದಿಗೆ ತೆರಳಲಿದ್ದಾರೆ.

ಭಾರತ ತಂಡ: ಶ್ರೀಜೇಶ್‌ ಮತ್ತು ಪಿ.ಆರ್‌ ಕೃಷ್ಣ ಬಹಾದೂರ್‌ ಪಾಠಕ್‌ (ಗೋಲ್‌ಕೀಪರ್‌ಗಳು); ಹರ್ಮನ್‌ಪ್ರೀತ್‌ ಸಿಂಗ್‌ (ಉಪನಾಯಕ), ಅಮಿತ್‌ ರೋಹಿದಾಸ್‌, ಸುರೇಂದರ್‌ ಕುಮಾರ್‌, ವರುಣ್‌ ಕುಮಾರ್‌, ಜರ್ಮನ್‌ಪ್ರೀತ್‌ ಸಿಂಗ್‌, ಜುಗ್ರಾಜ್‌ ಸಿಂಗ್‌ (ಡಿಫೆಂಡರ್‌ಗಳು); ಮನ್‌ಪ್ರೀತ್‌ ಸಿಂಗ್‌(ನಾಯಕ), ನೀಲಕಂಠ ಶರ್ಮ, ಹಾರ್ದಿಕ್‌ ಸಿಂಗ್‌, ಜಸ್ಕರಣ್‌ ಸಿಂಗ್‌, ಶಂಶೇರ್‌ ಸಿಂಗ್‌, ವಿವೇಕ್‌ ಸಾಗರ್‌ ಪ್ರಸಾದ್‌ (ಮಿಡ್‌ಫೀಲ್ಡರ್‌ಗಳು); ಮನ್‌ದೀಪ್‌ ಸಿಂಗ್‌, ಲಲಿತ್‌ ಕುಮಾರ್‌ ಉಪಾಧ್ಯಾಯ್‌, ಆಕಾಶ್‌ದೀಪ್‌ ಸಿಂಗ್‌, ಶಿಲಾನಂದ್‌ ಲಾಕ್ರಾ, ದಿಲ್‌ಪ್ರೀತ್‌ ಸಿಂಗ್‌, ಅಭಿಷೇಕ್‌ (ಫಾರ್ವರ್ಡ್‌ಗಳು); ಸೂರಜ್‌ ಕರ್ಕೆರಾ, ಮನ್‌ದೀಪ್‌ ಮೋರ್‌, ರಾಜ್‌ ಕುಮಾರ್‌ ಪಾಲ್‌, ಸುಮಿತ್‌, ಗುರ್‌ಸಾಹಿಬ್ಜಿತ್‌ ಸಿಂಗ್‌ (ಮೀಸಲು ಆಟಗಾರರು).

ಭಾರತದಲ್ಲಿ ಮೊತ್ತ ಮೊದಲ ಪ್ಯಾರಾ ಬ್ಯಾಡ್ಮಿಂಟನ್ ಅಕಾಡೆಮಿ ಆರಂಭ



Read more

[wpas_products keywords=”deal of the day gym”]