ಇತ್ತ ‘ಕನ್ನಡತಿ’ ಧಾರಾವಾಹಿಯಲ್ಲಿ ಸಾನಿಯಾ ಹೈಡ್ರಾಮಾ ನಡೆಯುತ್ತಿದೆ. 25 ಲಕ್ಷ ರೂಪಾಯಿ ಹೊಂದಿಸುವ ಸಲುವಾಗಿ ತಾಯಿಗೆ ಅನಾರೋಗ್ಯ ಉಂಟಾಗಿದೆ ಅಂತ ಆಸ್ಪತ್ರೆಯಲ್ಲಿ ಸಾನಿಯಾ ನಾಟಕವಾಡುತ್ತಿದ್ದಾಳೆ. ಭುವಿ ಟೀಚರ್ ಯಾವಾಗ ವಾಪಸ್ ಬರುತ್ತಾರೋ ಅಂತ ವೀಕ್ಷಕರು ಕಾಯುತ್ತಿರುವಾಗಲೇ, ರಂಜನಿ ರಾಘವನ್ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಶೂಟಿಂಗ್ ಸೆಟ್‌ಗೆ ವಾಪಸ್ ಆದ ರಂಜನಿ ರಾಘವನ್
ಕೊರೊನಾ ವೈರಸ್ ಸೋಂಕಿನಿಂದ ಸಂಪೂರ್ಣವಾಗಿ ಗುಣಮುಖರಾಗಿರುವ ನಟಿ ರಂಜನಿ ರಾಘವನ್ ಇದೀಗ ‘ಕನ್ನಡತಿ’ ಶೂಟಿಂಗ್ ಸೆಟ್‌ಗೆ ಮರಳಿದ್ದಾರೆ. ಕೋವಿಡ್-19 ನೆಗೆಟಿವ್ ಬಂದ ಬಳಿಕ ‘ಕನ್ನಡತಿ’ ಧಾರಾವಾಹಿಯ ತಂಡವನ್ನು ರಂಜನಿ ರಾಘವನ್ ಸೇರಿಕೊಂಡಿದ್ದಾರೆ. ಈಗಾಗಲೇ ಸಂಚಿಕೆಗಳ ಚಿತ್ರೀಕರಣದಲ್ಲಿ ರಂಜನಿ ರಾಘವನ್ ಭಾಗವಹಿಸಿದ್ದಾರೆ. ಶೂಟಿಂಗ್ ಸೆಟ್‌ನಲ್ಲಿ ತಾವು ಪಾಲ್ಗೊಂಡಿರುವ ವಿಡಿಯೋವನ್ನು ರಂಜನಿ ರಾಘವನ್ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ಎರಡು ವರ್ಷಗಳ ಸಂಭ್ರಮ
‘ಕನ್ನಡತಿ’ ಧಾರಾವಾಹಿಯ ಪ್ರಸಾರ ಆರಂಭವಾಗಿ ಎರಡು ವರ್ಷಗಳು ತುಂಬಿವೆ. ಜನವರಿ 27, 2020 ರಂದು ‘ಕನ್ನಡತಿ’ ಧಾರಾವಾಹಿಯ ಪ್ರಸಾರ ಶುರುವಾಯಿತು. ಇದೀಗ 2 ವರ್ಷಗಳು ತುಂಬಿರುವ ಹಿನ್ನೆಲೆಯಲ್ಲಿ ಶೂಟಿಂಗ್ ಸೆಟ್‌ನಲ್ಲಿ ಧಾರಾವಾಹಿ ತಂಡ ಸೆಲೆಬ್ರೇಷನ್ ಮಾಡಿದೆ. ಆ ವಿಡಿಯೋವನ್ನೂ ಇನ್ಸ್ಟಾಗ್ರಾಮ್‌ನಲ್ಲಿ ರಂಜನಿ ರಾಘವನ್ ಶೇರ್ ಮಾಡಿಕೊಂಡಿದ್ದಾರೆ.
‘ಕನ್ನಡತಿ’ ಇಲ್ಲಿಯವರೆಗಿನ ಕಥೆ..?
ಹಸಿರುಪೇಟೆ ಟೀಚರ್ ಭುವನೇಶ್ವರಿ ಹಾಗೂ ಮಾಲಾ ಕೆಫೆ ಮುಖ್ಯಸ್ಥ ಹರ್ಷ ಕುಮಾರ್ ಮಧ್ಯೆ ಪ್ರೀತಿ ಮೊಳಕೆಯೊಡೆದಿದೆ. ಭುವನೇಶ್ವರಿಯೇ ಸೌಪರ್ಣಿಕ ಎಂಬ ಸತ್ಯ ಸಾನಿಯಾಗೆ ಗೊತ್ತಾಗಿದೆ. ಆದರೆ, ಸಾನಿಯಾಗೆ ‘ಸೌಪರ್ಣಿಕ ರಹಸ್ಯ’ ಗೊತ್ತಾಗಿದೆ ಅಂತ ಅಮ್ಮಮ್ಮ ರತ್ನಮಾಲಾಗಿನ್ನೂ ತಿಳಿದಿಲ್ಲ. ಅತ್ತ ಹರ್ಷ ಪ್ರೀತಿಸುತ್ತಿರುವ ಹುಡುಗಿ ಭುವಿ ಅಂತ ವರೂಧಿನಿಗೂ ಗೊತ್ತಾಗಿಲ್ಲ. ಇತ್ತ ಮಾಲಾ ಇನ್ಸ್ಟಿಟ್ಯೂಟ್‌ನ 25 ಲಕ್ಷ ರೂಪಾಯಿ ಹಣವನ್ನು ವೈಯಕ್ತಿಕ ಕಾರಣಕ್ಕೆ ಸಾನಿಯಾ ಬಳಸಿಕೊಂಡಿದ್ದಾಳೆ. ಎಂ.ಡಿ.ಪೋಸ್ಟ್ ಉಳಿಸಿಕೊಳ್ಳುವ ಸಲುವಾಗಿ 25 ಲಕ್ಷ ರೂಪಾಯಿ ಹೊಂದಿಸಲು ತನ್ನ ತಾಯಿಗೆ ಹುಷಾರಿಲ್ಲ ಅಂತ ಸಾನಿಯಾ ನಾಟಕವಾಡುತ್ತಿದ್ದಾಳೆ. ಹೀಗಿರುವಾಗಲೇ, ನಿಜವಾಗಿಯೂ ಸಾನಿಯಾ ತಾಯಿ ಹರಿಣಿಗೆ ಹೃದಯಾಘಾತ ಉಂಟಾಗಿದೆ.
ಹಣಕ್ಕಾಗಿ, ಅಧಿಕಾರಕ್ಕಾಗಿ ಮನುಷ್ಯತ್ವವನ್ನೇ ಅಸ್ತ್ರ ಮಾಡಿಕೊಂಡಿರುವ ಸಾನಿಯಾ ರತ್ನಮಾಲಾ ಹಾಗೂ ಹರ್ಷ ಮುಂದೆ ಸಿಕ್ಕಿಬೀಳ್ತಾಳಾ? ಸದಾ ಕುತಂತ್ರ ಮಾಡುವ ಸಾನಿಯಾಗೆ ಇನ್ನಾದರೂ ಬುದ್ಧಿ ಬರುತ್ತಾ? ಅಂತ ಕಾದುನೋಡಬೇಕಿದೆ.
ಅಂದ್ಹಾಗೆ, ‘ಕನ್ನಡತಿ’ ಧಾರಾವಾಹಿಯಲ್ಲಿ ಹರ್ಷ ಕುಮಾರ್ ಆಗಿ ಕಿರಣ್ ರಾಜ್, ಸಾನಿಯಾ ಆಗಿ ಆರೋಹಿ ನೈನಾ, ರತ್ನಮಾಲಾ ಆಗಿ ಚಿತ್ಕಳಾ ಬಿರಾದಾರ, ವರೂಧಿನಿ ಆಗಿ ಸಾರಾ ಅಣ್ಣಯ್ಯ ನಟಿಸುತ್ತಿದ್ದಾರೆ.
Read more
[wpas_products keywords=”deal of the day party wear dress for women stylish indian”]