The New Indian Express
ಕರಾಚಿ: ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ ಎಲ್) ಏಳನೇ ಆವೃತ್ತಿ ಆರಂಭಕ್ಕೂ ಮುನ್ನ ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಅಫ್ರಿದಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ.
ಅಫ್ರಿದಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ಅನ್ನು ಪ್ರತಿನಿಧಿಸುತ್ತಿದ್ದಾರೆ. ಆದರೆ, ಕೋವಿಡ್-19 ದೃಢಪಟ್ಟ ನಂತರ ಆಲ್ ರೌಂಡರ್ ಆಟಗಾರ ಕೆಲವು ಪಂದ್ಯಗಳಿಂದ ಹೊರಗುಳಿದಿದ್ದಾರೆ.
” ದುರದೃಷ್ಟವಶಾತ್ ನನಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ. ಆದರೆ, ಯಾವುದೇ ರೋಗ ಲಕ್ಷಣಗಳಿಲ್ಲ. ಶೀಘ್ರದಲ್ಲಿಯೇ ಗುಣಮುಖವಾಗುವ ವಿಶ್ವಾಸವಿದೆ. ಸಾಧ್ಯವಾದಷ್ಟು ಬೇಗ ಕ್ವೆಟ್ಟಾ ಗ್ಲಾಡಿಯೇಟರ್ಸ್ ಸೇರಿಕೊಳ್ಳಲಿದ್ದೇನೆ ಎಂದು ಅಫ್ರಿದಿ ಟ್ವೀಟ್ ಮಾಡಿದ್ದಾರೆ.
I have unfortunately tested positive but have no symptoms at all. InshALLAH hope to recover soon, test negative and rejoin QG as soon as possible. Good luck to all teams in #HBLPSL7 I’m committed to giving it my all in my last PSL edition. pic.twitter.com/wCiEb5laZS
— Shahid Afridi (@SAfridiOfficial) January 27, 2022
ಫೆಬ್ರವರಿ 7 ರವರೆಗೆ ನ್ಯಾಷನಲ್ ಸ್ಟೇಡಿಯಂನಲ್ಲಿ ಮೊದಲ 15 ಪಂದ್ಯಗಳು ನಡೆಯಲಿವೆ. ಪಾಕಿಸ್ತಾನ ಕ್ರಿಕೆಟ್‌ನ ತವರು ಗಡಾಫಿ ಸ್ಟೇಡಿಯಂನಲ್ಲಿ ಫೆಬ್ರವರಿ 10 ರಿಂದ 27 ರವರೆಗೆ 19 ಪಂದ್ಯಗಳು ನಡೆಯಲಿವೆ.
Read more…
[wpas_products keywords=”deal of the day sports items”]