Karnataka news paper

ವಿಧಾನ ಪರಿಷತ್ ಸದಸ್ಯರಾಗಿ ಡಾ ಸೂರಜ್ ರೇವಣ್ಣ ಪ್ರಮಾಣ ವಚನ ಸ್ವೀಕಾರ


Online Desk

ಬೆಂಗಳೂರು: ವಿಧಾನ ಪರಿಷತ್ ನ ನೂತನ ಸದಸ್ಯರಾಗಿ ಜೆಡಿಎಸ್ ನಾಯಕ ಹೆಚ್ ಡಿ ರೇವಣ್ಣ ಪುತ್ರ ಸೂರಜ್ ರೇವಣ್ಣ ಇಂದು ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದ್ದಾರೆ.

ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೆಚ್ ಡಿ ರೇವಣ್ಣ,ಭವಾನಿ ರೇವಣ್ಣ ಹಾಗೂ ಕೆಲವು ಜೆಡಿಎಸ್ ನಾಯಕರು ಭಾಗವಹಿಸಿದ್ದರು. ಏನೇ ಕೆಲಸ ಆರಂಭಿಸುವಾಗಲೂ ದಿನ, ಮುಹೂರ್ತ ನೋಡುವ ಹೆಚ್ ಡಿ ರೇವಣ್ಣನವರು ಕಳೆದ ಬಾರಿ ಇತರ ನೂತನ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ ದಿನ ಭಾಗಿಯಾಗಿರಲಿಲ್ಲ. 

ಈ ಮೂಲಕ ಹೆಚ್ ಡಿ ದೇವೇಗೌಡ ಕುಟುಂಬದ ಮತ್ತೊಬ್ಬ ಸದಸ್ಯ ವಿಧಾನ ಸೌಧ ಪ್ರವೇಶಿಸಿದ್ದಾರೆ.  ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹೆಚ್ ಡಿ ರೇವಣ್ಣ, ಜೆಡಿಎಸ್ ನಿಂದ ಹಾಸನದ ನಾಯಕರು ಯಾರೂ ಪಕ್ಷ ತೊರೆಯುವುದಿಲ್ಲ, ಕಾಂಗ್ರೆಸ್ ಮತ್ತು ಬಿಜೆಪಿ ಹಗಲುಕನಸು, ತಿರುಕನ ಕನಸು ಕಾಣುತ್ತಿವೆ. ಜೆಡಿಎಸ್ ನ್ನು ಮುಗಿಸಲು ದೇವೇಗೌಡರು ಬದುಕಿರುವವರೆಗೂ ಸಾಧ್ಯವಿಲ್ಲ ಎಂದರು. 



Read more

[wpas_products keywords=”deal of the day”]