ಹೈಲೈಟ್ಸ್:
- ಈ ಬಾರಿಯೂ ರಣಜಿ ಟ್ರೋಫಿ ಮುಂದೂಡಿಕೆ ಬಗ್ಗೆ ಅಸಮಾಧಾನ ಹೊರಹಾಕಿದ ರವಿ ಶಾಸ್ತ್ರಿ.
- ಕಳೆದ ಎರಡು ರಣಜಿ ಟ್ರೋಫಿ ಟೂರ್ನಿ ಕೋವಿಡ್-19 ಕಾರಣ ಆಯೋಜನೆ ಆಗಿಲ್ಲ.
- ಎರಡು ಭಾಗಗಳಾಗಿ 2021-22ರ ಸಾಲಿನ ಟೂರ್ನಿ ಆಯೋಜನೆಗೆ ಬಿಸಿಸಿಐ ನಿರ್ಧಾರ.
ಆದರೆ, ಕೊರೊನಾ ವೈರಸ್ ಮಹಾಮಾರಿ ಸೋಂಕಿನ ಕಾರಣ ಕಳೆದ 2 ವರ್ಷಗಳಿಂದ ದೇಶಿ ಕ್ರಿಕೆಟ್‌ನ ಬಹುದೊಡ್ಡ ಟೂರ್ನಿ ಆಗಿರುವ ರಣಜಿ ಟ್ರೋಫಿ ಟೂರ್ನಿಯನ್ನು ಆಯೋಜಿಸಲು ಬಿಸಿಸಿಐ ಯಶಸ್ವಿಯಾಗಿಲ್ಲ. ಕೋವಿಡ್-19 ಸೋಂಕಿನ ಮೂರನೇ ಅಲೆಯ ಆರ್ಭಟ ಶುರುವಾದ್ದರಿಂದ 2021-22ರ ಸಾಲಿನ ರಣಜಿ ಟ್ರೋಫಿ ಟೂರ್ನಿಯನ್ನು ಬಿಸಿಸಿಐ ಮುಂದೂಡಿತ್ತು.
ಈ ಬಾರಿ ಟೂರ್ನಿಯನ್ನು ಎರಡು ಅವಧಿಯಲ್ಲಿ ಆದರೂ ಆಯೋಜಿಸಲು ಬಿಸಿಸಿಐ ಲೆಕ್ಕಾಚಾರ ಮಾಡಿದೆ. ಆದರೆ, ಕಳೆದ ಎರಡು ವರ್ಷಗಳಿಂದ ಟೂರ್ನಿ ಆಯೋಜಿಸದೇ ಇರುವ ಬಗ್ಗೆ ಭಾರತ ತಂಡದ ಮಾಜಿ ಮುಖ್ಯ ಕೋಚ್ ರವಿ ಶಾಸ್ತ್ರಿ ಬಿಸಿಸಿಇಐ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇದು ಹೀಗೇ ಮುಂದುವರಿದೆ ದೇಶದ ಕ್ರಿಕೆಟ್‌ನ ಬೆನ್ಮೂಳೆ ಮುರಿದಂತ್ತಾಗುತ್ತದೆ ಎಂದು ಶಾಸ್ತ್ರಿ ಟ್ವೀಟ್ ಮಾಡಿದ್ದಾರೆ.
ರವಿ ಶಾಸ್ತ್ರಿ ಬುದ್ಧಿವಂತರಂತೆ ಮಾತನಾಡುವುದಿಲ್ಲ ಎಂದ ಮಾಂಜ್ರೇಕರ್!
“ಭಾರತೀಯ ಕ್ರಿಕೆಟ್‌ನ ಬೆನ್ಮೂಳೆಯೇ ರಣಜಿ ಟ್ರೋಫಿ ಕ್ರಿಕೆಟ್. ಇದನ್ನು ಈಗೆಯೇ ನಿರ್ಲಕ್ಷಿಸುತ್ತಾ ಬೇದರೆ ನಮ್ಮ ಕ್ರಿಕೆಟ್ ಬಲವಿಲ್ಲದಂತ್ತಾಗುತ್ತದೆ,” ಎಂದು ಶಾಸ್ತ್ರಿ ಕಳವಳ ವ್ಯಕ್ತ ಪಡಿಸಿದ್ದಾರೆ. 2019-20ರ ಸಾಲಿನ ರಣಜಿ ಟ್ರೋಫಿ ಮುಕ್ತಾಯದ ಬಳಿಕ ಭಾರತದಲ್ಲಿ ಸಂಪೂರ್ಣ ಲಾಕ್‌ಡೌನ್ ಶುರುವಾಗಿತ್ತು. ಬಳಿಕ ಇದೇ ಕಾರಣದಿಂದ 2020-21ರ ಸಾಲನ್ನು ಸಂಪೂರ್ಣ ರದ್ದು ಪಡಿಸಲಾಯಿತು.
ಎರಡು ಹಂತದಲ್ಲಿ ಲೀಗ್ ಆಯೋಜನೆ
ಪ್ರಸಕ್ತ ಸಾಲಿನ ಟೂರ್ನಿ ಜನವರಿ 13ರಂದು ನಿಗದಿಯಂತೆ ಶುರುವಾಗಬೇಕಿತ್ತು. ಆದರೆ, ಮೂರನೇ ಅಲೆಯ ಆರ್ಭಾಟ ಶುರುವಾದ ಕಾರಣ ಟೂರ್ನಿಯನ್ನು ಮುಂದೂಡಲಾಗಿದೆ. ಪಿಟಿಐ ಸುದ್ದಿ ಸಂಸ್ಥೆ ಮಾಡಿರುವ ವರದಿ ಪ್ರಕಾರ ಎರಡು ಹಂತದಲ್ಲಿ ಲೀಗ್ ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ಲೆಕ್ಕಾಚಾರ ಮಾಡಿದೆ.
ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಸಮಸ್ಯೆಗೆ ಸೂಕ್ತ ಪರಿಹಾರ ಸೂಚಿಸಿದ ಕಾರ್ತಿಕ್!
ಇಂಡಿಯನ್ ಪ್ರೀಮಿಯರ್ ಲೀಗ್‌ಗೂ ಮುನ್ನ ಅರ್ಧದಷ್ಟು ಪಂದ್ಯಗಳನ್ನು ಆಯೋಜಿಸಿ, ಐಪಿಎಲ್ ಟೂರ್ನಿ ಮುಗಿದ ಬಳಿಕ ಉಳಿದ ಪಂದ್ಯಗಳನ್ನು ನಡೆಸಲು ಮುಂದಾತಗಿದೆ. ಮೊದಲ ಚರಣಕ್ಕೆ ಫೆಬ್ರವರಿ 10ರಂದು ಚಾಲನೆ ಸಿಗುವ ಸಾಧ್ಯತೆ ಇದೆ.
“ಮೊದಲ ಹಂತದಲ್ಲಿ ಎಲ್ಲಾ ಲೀಗ್ ಪಂದ್ಯಗಳನ್ನು ಆಯೋಜಿಸುತ್ತೇವೆ. ಬಳಿಕ ನಾಕ್‌ಔಟ್ ಹಂತದ ಪಂದ್ಯಗಳನ್ನು ಜೂನ್‌ನಲ್ಲಿ ನಡೆಸಲಾಗುವುದು. ಕೊರೊನಾ ವೈರಸ್ ಮಹಾಮಾರಿ ಸೋಂಕಿನ ಸಮಯದಲ್ಲಿ ಎದುರಾಗವಹುದಾದ ಆರೋಗ್ಯ ಸಮಸ್ಯೆಗಳನ್ನು ನಿಭಾಯಿಸುವ ಕಡೆಗೆ ನಮ್ಮ ತಂಡ ಕೆಲಸ ಮಾಡುತ್ತಿದೆ. ಜೊತೆಗೆ ಸ್ಪರ್ಧಾತ್ಮಕ ದೇಶಿ ಟೂರ್ನಿಗೆ ಆದ್ಯತೆ ನೀಡಿದ್ದೇವೆ,” ಎಂದು ಬಿಸಿಸಿಐ ಕಾರ್ಯದರ್ಶಿ ಜಯ ಶಾ ಹೇಳಿದ್ದಾರೆ.
Read more
[wpas_products keywords=”deal of the day gym”]