Karnataka news paper

ಮಾ.3ರಿಂದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ


ಬೆಂಗಳೂರು: 13ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಮಾ.3ರಿಂದ ಮಾ.10ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ. ಕೋವಿಡ್‌ ಮಾರ್ಗಸೂಚಿಗಳನ್ನು ಅನುಸರಿಸಿ ಹೈಬ್ರಿಡ್‌ ಮಾದರಿಯಲ್ಲಿ ಈ ಬಾರಿಯ ಚಲನಚಿತ್ರೋತ್ಸವವನ್ನು ನಡೆಸಲು ನಿರ್ಧರಿಸಲಾಗಿದೆ.

ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಂಘಟನಾ ಸಮಿತಿ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಬೊಮ್ಮಾಯಿ ಅವರು ಚಲನಚಿತ್ರೋತ್ಸವದ ಲಾಂಛನ ಬಿಡುಗಡೆಗೊಳಿಸಿದರು.

‘ಮಾ.3ರಂದು ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ(ಜಿಕೆವಿಕೆ) ಉದ್ಘಾಟನಾ ಸಮಾರಂಭ ನಡೆಯಲಿದೆ. ಉದ್ಘಾಟನೆ ಯಾರಿಂದ ಎನ್ನುವುದು ಇನ್ನೂ ಅಂತಿಮಗೊಂಡಿಲ್ಲ. ಚಿತ್ರಮಂದಿರಗಳಲ್ಲಿ ಹಾಗೂ ಆನ್‌ಲೈನ್‌ ಮೂಲಕ ಈ ಬಾರಿಯ ಚಿತ್ರೋತ್ಸವ ನಡೆಯಲಿದ್ದು, ಇಲ್ಲಿಯವರೆಗೆ 296 ಸಿನಿಮಾಗಳು ಸ್ಪರ್ಧೆಗೆ ಬಂದಿವೆ. ರೂಪುರೇಷೆ ಮುಂದಿನ ದಿನಗಳಲ್ಲಿ ಸಿದ್ಧವಾಗಲಿದ್ದು, ಈ ಬಾರಿ ಸರಳವಾಗಿ ಚಲನಚಿತ್ರೋತ್ಸವ ನಡೆಯಲಿದೆ’ ಎಂದು ಆಯೋಜಕರು ತಿಳಿಸಿದ್ದಾರೆ.

‘ಕನ್ನಡಿಗರಿಗೆ ಜಾಗತಿಕ ಚಿತ್ರಗಳನ್ನು ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಚಿತ್ರಗಳನ್ನು ಪ್ರದರ್ಶಿಸಲು ಚಿತ್ರೋತ್ಸವ ವೇದಿಕೆಯಾಗಬೇಕು. ಚಿತ್ರೋತ್ಸವದ ಮೂಲಕ ಸಾಮಾಜಿಕ ಸಂದೇಶ ನೀಡಬೇಕು. ಸಿನಿಮಾಗಳಲ್ಲಿ ಆಸಕ್ತಿ ಇರುವ ನಿರ್ದಿಷ್ಟ ಜನ ಚಲನಚಿತ್ರೋತ್ಸವಕ್ಕೆ ಆಗಮಿಸುವುದರಿಂದ ನಿರ್ದಿಷ್ಟ ವಿಷಯವನ್ನು ಆಧರಿಸಿ ಚಲನಚಿತ್ರೋತ್ಸವಕ್ಕೆ ನಡೆಸುವುದು ಅಗತ್ಯ’ ಎಂದು  ಬೊಮ್ಮಾಯಿ ಹೇಳಿದರು.

ಸಚಿವ ಮುನಿರತ್ನ, ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನೀಲ್ ಪುರಾಣಿಕ್, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಂ ಸಭೆಯಲ್ಲಿ ಉಪಸ್ಥಿತರಿದ್ದರು.



Read More…Source link

[wpas_products keywords=”deal of the day party wear for men wedding shirt”]