Karnataka news paper

ಗೂಗಲ್‌ ಮ್ಯಾಪ್‌ನ ಈ ಫೀಚರ್ಸ್‌ ಇದೀಗ ನಿಮಗೂ ಕೂಡ ಲಭ್ಯ!


ಗೂಗಲ್‌

ಹೌದು, ಗೂಗಲ್‌ ಮ್ಯಾಪ್‌ ಇದೀಗ ಭಾರತದ ಬಳಕೆದಾರರಿಗೆ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದೆ. ಇದರಿಂದ ತಮ್ಮ ಮನೆಯ ವಿಳಾಸಗಳನ್ನು ಸೇವ್‌ ಮಾಡುವಾಗ ಮತ್ತು ಶೇರ್‌ ಮಾಡುವಾಗ ‘ಪ್ಲಸ್ ಕೋಡ್‌ಗಳನ್ನು’ ಸಾಮಾನ್ಯ ಬಳಕೆದಾರರು ಬಳಸಲು ಅನುಮತಿಸುತ್ತದೆ. ಇನ್ನು ಈ ಪ್ಲಸ್ ಕೋಡ್‌ಗಳ ಮೂಲಕ ನೀವು ನಿಮ್ಮ ಮನೆಯ ವಿಳಾಶಕ್ಕೆ ಕೋಡ್‌ ಅನ್ನು ಸೆಟ್‌ ಮಾಡಬಹುದಾಗಿದೆ. ಹಾಗಾದ್ರೆ ಗೂಗಲ್‌ ಮ್ಯಾಪ್‌ ಸೇರಿರುವ ಪ್ಲಸ್‌ ಕೋಡ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಗೂಗಲ್‌ ಮ್ಯಾಪ್‌

ಗೂಗಲ್‌ ಮ್ಯಾಪ್‌ ಪ್ಲಸ್‌ ಕೋಡ್‌ಗಳನ್ನು ಬಳಸಲು ಅವಕಾಶ ನೀಡಿದೆ. ಇದರಿಂದ ನೀವು ನಿರ್ದಿಷ್ಟ ವಿಳಾಸಕ್ಕಾಗಿ ಪಟ್ಟಣ ಅಥವಾ ನಗರಗಳ ಹೆಸರಿನೊಂದಿಗೆ 6 ಅಥವಾ 7 ಅಕ್ಷರಗಳ ಗುಂಪನ್ನು ಸೇರಿಸಬಹುದಾಗಿದೆ. ಇದು ರಸ್ತೆ ಮತ್ತು ಪ್ರದೇಶದ ಹೆಸರುಗಳನ್ನು ಅವಲಂಬಿಸಿಲ್ಲ. ಬದಲಿಗೆ ಅಕ್ಷಾಂಶಗಳು ಮತ್ತು ರೇಖಾಂಶಗಳನ್ನು ಬಳಸಬಹುದಾಗಿದೆ. ಇನ್ನು ಭಾರತದಲ್ಲಿ ಪ್ಲಸ್ ಕೋಡ್‌ಗಳ ಫೀಚರ್ಸ್‌ ಅನ್ನು ಗೂಗಲ್‌ 2018 ರಲ್ಲಿಯೇ ಲಾಂಚ್‌ ಮಾಡಿತ್ತು. ಇದನ್ನು ಇಲ್ಲಿ ತನಕ ವ್ಯಾಪಾರಿಗಳು, ಎನ್‌ಜಿಒಗಳು ಬಳಸುತ್ತಿದ್ದವು, ಇದೀಗ ಮನೆ ವಿಳಾಸಗಳಿಗೂ ವಿಸ್ತರಿಸಲಾಗುತ್ತಿದೆ.

ಫೀಚರ್ಸ್‌

ಗೂಗಲ್‌ ಈ ಫೀಚರ್ಸ್‌ ಅನ್ನು ಇದೀಗ ಭಾರತದಲ್ಲಿ ಒಂದು ತಿಂಗಳ ಹಿಂದೆ ಪ್ರಾಯೋಗಿಕವಾಗಿ ಜಾರಿ ಮಾಡಿದೆ. ಭಾರತದಲ್ಲಿನ 300,000 ಕ್ಕೂ ಹೆಚ್ಚು ಬಳಕೆದಾರರು ಈಗಾಗಲೇ ಪ್ಲಸ್ ಕೋಡ್‌ಗಳನ್ನು ಬಳಸಿಕೊಂಡು ತಮ್ಮ ಮನೆಯ ವಿಳಾಸವನ್ನು ಕಂಡುಕೊಂಡಿದ್ದಾರೆ ಎನ್ನಲಾಗಿದೆ. ಇದನ್ನು ಇನ್ನು ಹೆಚ್ಚಿನ ರೀತಿಯ ಸ್ಥಳಗಳಿಗೆ ವಿಸ್ತರಿಸಲು ನಾವು ಪ್ರಯತ್ನಿಸುತ್ತಿದ್ದೆವೆ ಎಂದು ಗೂಗಲ್‌ ಮ್ಯಾಪ್‌ ಹೇಳಿಕೊಂಡಿದೆ. ಇದಕ್ಕಾಗಿ ಪ್ರಪಂಚದಾದ್ಯಂತ ಹೆಚ್ಚಿನ ಜನರಿಗೆ ಅನುಭವವನ್ನು ಹೆಚ್ಚಿಸಲು ಇ-ಕಾಮರ್ಸ್, ಲಾಜಿಸ್ಟಿಕ್ಸ್ ಮತ್ತು ವಿತರಣಾ ಕಂಪನಿಗಳೊಂದಿಗೆ ಪಾಲುದಾರರಾಗಲು ಅವಕಾಶಗಳನ್ನು ಸಕ್ರಿಯವಾಗಿ ಹುಡುಕುತ್ತಿದ್ದೇವೆ ಎಂದು ಹೇಳಿದೆ.

ಫೀಚರ್ಸ್‌

ಇನ್ನು ಈ ಫೀಚರ್ಸ್‌ ಮೊದಲಿಗೆ ಆಂಡ್ರಾಯ್ಡ್‌ ಬಳಕೆದಾರರಿಗೆ ಮಾತ್ರ ಲಭ್ಯವಾಗಲಿದೆ. ಮುಂದಿನ ದಿನಗಳಲ್ಲಿ ಐಒಎಸ್ ಬಳಕೆದಾರರಿಗೂ ಲಭ್ಯವಾಗಲಿದೆ. ಈಗ ಯಾರಾದರೂ ಗೂಗಲ್‌ ಮ್ಯಾಪ್‌ನಲ್ಲಿ’ಹೋಮ್’ ಲೊಕೇಶನ್‌ ಅನ್ನು ಸೇವ್‌ ಮಾಡುವುದಾದರೆ “ಪ್ರಸ್ತುತ ಸ್ಥಳವನ್ನು ಬಳಸಿ” ಎಂದು ಕೇಳುವ ಪ್ರಾಂಪ್ಟ್ ಅನ್ನು ಕಾಣಬಹುದು. ಇದು ಪ್ಲಸ್ ಕೋಡ್ ಅನ್ನು ಕ್ರಿಯೆಟ್‌ ಮಾಡಲು ಅವರ ಫೋನ್‌ ಲೊಕೇಶನ್‌ ಅನ್ನು ಬಳಸುತ್ತದೆ. ನಂತರ ಅದನ್ನು ಅವರು ತಮ್ಮ ಮನೆಯ ವಿಳಾಸವಾಗಿ ಬಳಸಬಹುದು. ಇದಲ್ಲದೆ ಈ ಹೋಮ್‌ ಲೊಕೇಶನ್‌ಗಳನ್ನು ಹಿಂಪಡೆಯಲು, ಕಾಪಿ ಮಾಡಲು ಮತ್ತು ಶೇರ್‌ ಮಾಡಲು ಸುಲಭವಾಗುವಂತೆ ಗೂಗಲ್‌ ‘ಸೇವ್‌’ ಟ್ಯಾಬ್‌ನ ಮೇಲ್ಭಾಗದಲ್ಲಿ ಡಿವಿಷನ್‌ ಅನ್ನು ಕೂಡ ಸೇರಿಸಿದೆ.

ಪ್ಲಸ್ ಕೋಡ್‌ಗಳನ್ನು ಗುರುತಿಸುವುದು ಹೇಗೆ?

ಪ್ಲಸ್ ಕೋಡ್‌ಗಳನ್ನು ಗುರುತಿಸುವುದು ಹೇಗೆ?

ಗೂಗಲ್‌ ಮ್ಯಾಪ್‌ನಲ್ಲಿ ಪ್ಲಸ್ ಕೋಡ್‌ ಅನ್ನು ಗುರುತಿಸುವುದು ಸುಲಭವಾಗಿದೆ. ಪ್ಲಸ್‌ ಕೋಡ್‌ ಮೂಲಕ ಜನರು ವಿತರಣೆಗಳನ್ನು ಪಡೆಯಬಹುದು, ತುರ್ತು ಮತ್ತು ಸಾಮಾಜಿಕ ಸೇವೆಗಳನ್ನು ಪ್ರವೇಶಿಸಬಹುದು ಅಥವಾ ಇತರ ಜನರಿಗೆ ಅವುಗಳನ್ನು ಹುಡುಕಲು ಸಹಾಯ ಮಾಡಬಹುದು ಎಂದು ಗೂಗಲ್ ತನ್ನ ವೆಬ್‌ಸೈಟ್‌ನಲ್ಲಿ ವಿವರಿಸಿದೆ.

ಪ್ಲಸ್ ಕೋಡ್‌ಗಳ ಪ್ರಯೋಜನಗಳು

ಪ್ಲಸ್ ಕೋಡ್‌ಗಳ ಪ್ರಯೋಜನಗಳು

ಗೂಗಲ್‌ ಕೆಲವು ಪ್ರಮುಖ ಪಾಯಿಂಟರ್‌ಗಳಲ್ಲಿ ಪ್ಲಸ್ ಕೋಡ್‌ಗಳನ್ನು ಬಳಸುವ ಅನುಕೂಲಗಳನ್ನು ಸಹ ಪಟ್ಟಿ ಮಾಡಿದೆ. ಇವುಗಳು ಓಪನ್ ಸೋರ್ಸ್ ಆಗಿದ್ದು, ಬಳಸಲು ಸುಲಭ ಎಂದು ಕಂಪನಿ ಹೇಳಿಕೊಂಡಿದೆ. ಇದು ಸಾಂಪ್ರದಾಯಿಕ ಜಾಗತಿಕ ನಿರ್ದೇಶಾಂಕಗಳಿಗಿಂತ ತುಂಬಾ ಚಿಕ್ಕದಾಗಿರುವುದರಿಂದ ಶೇರ್‌ಮಾಡುವುದು ಸುಲಭವಾಗಿದೆ. ಇನ್ನು ಪ್ಲಸ್ ಕೋಡ್‌ಗಳು ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಕಾರ್ಯನಿರ್ವಹಿಸುತ್ತವೆ. ಕೋಡ್ ಅನ್ನು ಕ್ರಿಯೆಟ್‌ ಮಾಡುವುದಕ್ಕೆ ಇಂಟರ್ನೆಟ್ ಸಂಪರ್ಕದ ಅಗತ್ಯವಿಲ್ಲ. ಇದಲ್ಲದೆ, ಪ್ಲಸ್ ಕೋಡ್‌ಗಳ ಭಾಷೆ ಸ್ವತಂತ್ರವಾಗಿದ್ದು, ಸುಲಭವಾಗಿ ಗೊಂದಲಕ್ಕೊಳಗಾದ ಅಕ್ಷರಗಳನ್ನು ಒಳಗೊಂಡಿಲ್ಲ, ಕೇಸ್-ಸೆನ್ಸಿಟಿವ್ ಕೂಡ ಅಲ್ಲ.



Read more…

[wpas_products keywords=”smartphones under 15000 6gb ram”]