ಬೆಳಗಾವಿ: ವಿಧಾನಪರಿಷತ್ ಚುನಾವಣೆಯಲ್ಲಿ ಗೆದ್ದ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಅಭಿಮಾನಿಗಳು ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ವಿಜಯೋತ್ಸವ ಮೆರವಣಿಗೆ ನಡೆಸುವ ವೇಳೆ, ಬೆಂಬಲಿಗರೊಬ್ಬರು ₹500 ಮುಖಬೆಲೆಯ ನೋಟುಗಳನ್ನು ಗಾಳಿಗೆ ತೂರಿ ಸಂಭ್ರಮಿಸಿದ್ದಾರೆ.
ಆ ವ್ಯಕ್ತಿ ಯಾರು ಎನ್ನುವುದು ನಿಖರವಾಗಿ ತಿಳಿದುಬಂದಿಲ್ಲ. ಆದರೆ, ಅವರು ನೋಟನ್ನು ತೂರಿದ್ದನ್ನು ಸ್ಥಳೀಯರೊಬ್ಬರು ವಿಡಿಯೊ ಮಾಡಿದ್ದಾರೆ. ಸಾವಿರಾರು ರೂಪಾಯಿಯನ್ನು ಅವರು ಎಸೆದರು. ಅದನ್ನು ಆಯ್ದುಕೊಳ್ಳಲು ಕೆಲವರು ಮುಗಿಬಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
ಫಲಿತಾಂಶ | ಪಕ್ಷಗಳ ಬಲಾಬಲ: ಬಿಜೆಪಿ–11, ಕಾಂಗ್ರೆಸ್–11, ಜೆಡಿಎಸ್–02, ಇತರೆ–01