ಕೇಂದ್ರ ಬಜೆಟ್ 2022 ಮಂಡನೆಗೆ ಕೆಲವೇ ದಿನಗಳಷ್ಟೇ ಬಾಕಿ ಇದ್ದು, ಈ ಸಲವೂ ಕಾಗದ ರಹಿತ ಬಜೆಟ್ ಮಂಡನೆಯಾಗಲಿದೆ. ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರಂದು ಬಜೆಟ್ ಮಂಡಿಸಲಿದ್ದಾರೆ. 2022-23 ರ ಕೇಂದ್ರ ಬಜೆಟ್‌ನೊಂದಿಗೆ ಪೇಪರ್‌ಲೆಸ್ ಮಾಡುವ ಮೂಲಕ ಹಣಕಾಸು ಸಚಿವಾಲಯವು ಡಿಜಿಟಲ್ನತ್ತ ಹೆಜ್ಜೆ ಇಡುತ್ತಿದೆ. ಅದಕ್ಕಾಗಿ ಹೊಸದಾಗಿ ಯುನಿಯನ್ ಬಜೆಟ್ 2022 (Union Budget 2022 ) ಅಪ್ಲಿಕೇಶನ್ ಪರಿಚಯಿಸಿದೆ.

ಕೇಂದ್ರ ಪರಿಚಯಿಸಿರುವ ಯೂನಿಯನ್ ಬಜೆಟ್ 2022 ಅಪ್ಲಿಕೇಶನ್ ಈಗಾಗಲೇ ಆಂಡ್ರಾಯ್ಡ್ ನ ಗೂಗಲ್ ಪ್ಲೇ ಸ್ಟೋರ್ (Google Play Store) ಮತ್ತು ಆಪಲ್ ನ ಐಓಎಸ್ ಆಪ್ ಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಲು ಲಭ್ಯವಿದೆ. ಸಂಸತ್ತಿನ ಸದಸ್ಯರು (ಸಂಸದರು) ಮತ್ತು ಸಾರ್ವಜನಿಕರಿಂದ ಬಜೆಟ್ ದಾಖಲೆಗಳ ತೊಂದರೆ-ಮುಕ್ತ ಪ್ರವೇಶಕ್ಕಾಗಿ ಹೊಸ ‘ಯೂನಿಯನ್ ಬಜೆಟ್ ಮೊಬೈಲ್ ಅಪ್ಲಿಕೇಶನ್’ ಅನ್ನು ಪ್ರಾರಂಭಿಸಲಾಗಿದೆ.

ಫೆಬ್ರವರಿ 1 ರಂದು ಸಂಸತ್ತಿನಲ್ಲಿ ಬಜೆಟ್ ಮಂಡನೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಕೇಂದ್ರ ಬಜೆಟ್ 2022-23 ಮೊಬೈಲ್ ಅಪ್ಲಿಕೇಶನ್‌ನಲ್ಲಿ ಲಭ್ಯವಿರುತ್ತದೆ. ಇನ್ನು ಈ ಯುನಿಯನ್ ಬಜೆಟ್ 2022 ಅಪ್ಲಿಕೇಶನ್ ಆಂಡ್ರಾಯ್ಡ್ ಮತ್ತು ಐಓಎಸ್ ಎರಡರಲ್ಲೂ ಲಭ್ಯವಿದ್ದು, ಇಂಗ್ಲಿಷ್ ಮತ್ತು ಹಿಂದಿ ಭಾಷೆಯನ್ನು ಒಳಗೊಂಡಿದೆ. ಅದಾಗ್ಯೂ, ಈ ಅಪ್ಲಿಕೇಶನ್ ಅನ್ನು ಯೂನಿಯನ್ ಬಜೆಟ್ ವೆಬ್ ಪೋರ್ಟಲ್ (www.indiabudget.gov.in) ನಿಂದ ಸಹ ಡೌನ್‌ಲೋಡ್ ಮಾಡಬಹುದು. ಯೂನಿಯನ್ ಬಜೆಟ್ ವೆಬ್ ಪೋರ್ಟಲ್‌ನಲ್ಲಿ (www.indiabudget.gov.in) ಸಾರ್ವಜನಿಕಗೆ ಡೌನ್‌ಲೋಡ್ ಮಾಡಲು ಬಜೆಟ್ ದಾಖಲೆಗಳು ಲಭ್ಯವಿರುತ್ತವೆ.

ಈ ಅಪ್ಲಿಕೇಶನ್ ಬಜೆಟ್ ಭಾಷಣ, ವಾರ್ಷಿಕ ಹಣಕಾಸು ಹೇಳಿಕೆ, ಅನುದಾನಕ್ಕಾಗಿ ಬೇಡಿಕೆ (DG), ಹಣಕಾಸು ಮಸೂದೆ ಇತ್ಯಾದಿಗಳನ್ನು ಒಳಗೊಂಡಂತೆ 14 ಕೇಂದ್ರ ಬಜೆಟ್ ದಾಖಲೆಗಳಿಗೆ ಪ್ರವೇಶವನ್ನು ಅನುಮತಿಸುತ್ತದೆ. ಎಲ್ಲಾ ದಾಖಲೆಗಳನ್ನು PDF ಫಾರ್ಮೇಟ್‌ನಲ್ಲಿ ಲಭ್ಯ ಆಗಲಿವೆ.
ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಂಡನೆಯಾಗುತ್ತಿರುವ 10ನೇ ಬಜೆಟ್ ಇದ್ದಾಗಿದೆ. ಹಾಗೆಯೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡುತ್ತಿರುವ 4ನೇ ಆಯವ್ಯಯವಾಗಿದೆ. ಕಳೆದ ವರ್ಷದಂತೆ ಈ ಸಲದ ಬಜೆಟ್ ಕೂಡ ಕಾಗದ ರಹಿತವಾಗಿ ಮಂಡನೆಯಾಗಲಿದೆ. ಆದರೆ, ಡಿಜಿಟಲ್ ಮಾದರಿಗೆ ಮತ್ತಷ್ಟು ಬಲ ನೀಡುವ ನಿಟ್ಟಿನಲ್ಲಿ ಮೊಬೈಲ್ ಅಪ್ಲಿಕೇಶನ್ ಸಿದ್ಧಪಡಿಸಲಾಗಿದೆ. ‘ಯೂನಿಯನ್ ಬಜೆಟ್’ ಹೆಸರಿನಲ್ಲಿ ಮೊಬೈಲ್ ಅಪ್ಲಿಕೇಶನ್ ಲಭ್ಯ ಮಾಡಿದ್ದು, ರಾಷ್ಟ್ರೀಯ ಮಾಹಿತಿ, ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ಇದನ್ನ ಅಭಿವೃದ್ಧಿಪಡಿಸಿದೆ. ಸಂಸತ್ನಲ್ಲಿ ಬಜೆಟ್ ಮಂಡನೆಯಾದ ಬಳಿಕ ಇದು ಲಭ್ಯವಾಗಲಿದೆ.
Best Mobiles in India
English summary
Union Budget 2022 Available On Mobile App: How to Download.
Read more…
[wpas_products keywords=”smartphones under 15000 6gb ram”]