”ಅರ್ಹ ಖಾಸಗಿ ಏಜೆನ್ಸಿಗಳಿಂದ ಡ್ರೋಣ್- ಒಂದು – ಸೇವೆ ಅಥವಾ ವೈಮಾನಿಕ ಸಮೀಕ್ಷೆ ಕೈಗೊಳ್ಳಲು ನಿರ್ಧರಿಸಲಾಗಿದೆ. ಕೇಂದ್ರ ಸರಕಾರ ಆರಂಭಿಸಿದ್ದ ಯೋಜನೆಯಡಿ ಹಿಂದೆ 5 ಡ್ರೋಣ್ ಒದಗಿಸಿತ್ತು. ಉಳಿದ ಡ್ರೋಣ್‌ಗಳನ್ನು ನಾವೇ ಹೊಂದಿಸಿಕೊಂಡು ಸರ್ವೆ ಮಾಡಿಸಬೇಕಿದ್ದು, 287 ಕೋಟಿ ರೂ. ವೆಚ್ಚಕ್ಕೆ ಅನುಮೋದನೆ ನೀಡಲಾಗಿದೆ,”ಎಂದು ವಿವರಿಸಿದರು.
ಪಶುವೈದ್ಯರ ನೇಮಕ!
ಪಶುಸಂಗೋಪನಾ ಇಲಾಖೆಯಲ್ಲಿ 800 ಪಶುವೈದ್ಯರ ಕೊರತೆಯಿದ್ದು, 400 ಪಶುವೈದ್ಯರ ನೇಮಕಕ್ಕೆ ನಿರ್ಧರಿಸಲಾಗಿದೆ. ಇಲಾಖೆಯೇ ನೇಮಕಾತಿ ನಿಯಮಗಳ ಮೂಲಕ ಭರ್ತಿ ಮಾಡಿಕೊಳ್ಳಲು ಒಪ್ಪಿಗೆ ನೀಡಲಾಗಿದೆ.
ಸಂಪುಟ ಸಭೆ: ಕೋವಿಡ್, ಬಿಬಿಎಂಪಿ ಚುನಾವಣೆ ಬಗ್ಗೆ ಚರ್ಚೆ; ಬಸವರಾಜ ಬೊಮ್ಮಾಯಿ
ಸಮವಸ್ತ್ರ ವಿತರಣೆಗೆ 73.63 ಕೋಟಿ ರೂ.
ಮುಂದಿನ 2022- 23ನೇ ಶೈಕ್ಷಣಿಕ ಸಾಲಿಗೆ ವಿದ್ಯಾ ವಿಕಾಸ ಪ್ರೋತ್ಸಾಹದಾಯಕ ಕಾರ್ಯಕ್ರಮದಡಿ ಸರಕಾರಿ ಶಾಲೆಗಳ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಹಾಗೂ ಜವಳಿ ಮೂಲಸೌಲಭ್ಯ ಅಭಿವೃದ್ಧಿ ನಿಗಮದಿಂದ 60ಲಕ್ಷ ಮೀಟರ್ ಬಟ್ಟೆಯನ್ನು 73.63 ಕೋಟಿ ರೂ. ವೆಚ್ಚದಲ್ಲಿಖರೀದಿಸಿ ಸಮವಸ್ತ್ರ ವಿತರಿಸಲು ತೀರ್ಮಾನಿಸಲಾಗಿದೆ.
6000 ಸ್ಮಾರ್ಟ್ ತರಗತಿ
ರಾಜ್ಯದ 430 ಸರಕಾರಿ ಪ್ರಥಮ ದರ್ಜೆ ಕಾಲೇಜು, 14 ಎಂಜಿನಿಯರಿಂಗ್ ಕಾಲೇಜು ಮತ್ತು 87 ಸರಕಾರಿ ಪಾಲಿಟೆಕ್ನಿಕ್‌ಗಳಲ್ಲಿ ಡಿಜಿಟಲ್ ಕಲಿಕೆ ಭಾಗವಾಗಿ 6000 ಸ್ಮಾರ್ಟ್ ತರಗತಿಗಳನ್ನು ಆರಂಭಿಸಲು 97.50 ಕೋಟಿ ರೂ. ವೆಚ್ಚಕ್ಕೆ ಅನುಮೋದನೆ ನೀಡಲಾಗಿದೆ.
166 ಶಿಕ್ಷಾ ಬಂಧಿ ಬಿಡುಗಡೆ
ರಾಜ್ಯದ ನಾನಾ ಕಾರಾಗೃಹದಲ್ಲಿನ ಜೀವಾವಧಿ ಶಿಕ್ಷಾ ಬಂಧಿಗಳ ಪೈಕಿ 166 ಮಂದಿಯನ್ನು ಸನ್ನಡತೆ ಆಧಾರದ ಮೇಲೆ ಅವಧಿ ಪೂರ್ವ ಬಿಡುಗಡೆ ಮಾಡಲು ಒಪ್ಪಿಗೆ ನೀಡಲಾಗಿದೆ.
ಮೂರು ನಿಗಮ ವಿಲೀನ
ಅರಣ್ಯ ಅಭಿವೃದ್ಧಿ ನಿಗಮ, ರಾಜ್ಯ ಅರಣ್ಯ ಕೈಗಾರಿಕಾ ನಿಗಮ ಹಾಗೂ ಗೇರು ಅಭಿವೃದ್ಧಿ ನಿಗಮವನ್ನು ಒಟ್ಟುಗೂಡಿಸಿ ಒಂದೇ ನಿಗಮವಾಗಿ ವಿಲೀನಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ಸಚಿವ ಸಂಪುಟ ಸಭೆ: ಚರ್ಚೆಯಾಗಲಿರುವ ಪ್ರಮುಖ ವಿಚಾರಗಳೇನು?
ಚಾಮುಂಡೇಶ್ವರಿಯಲ್ಲಿ ಮೂಲ ಸೌಕರ್ಯ
ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗುವ ಭಕ್ತರಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವ 92.81 ಕೋಟಿ ರೂ. ಪರಿಷ್ಕೃತ ಮೊತ್ತ ಕಾಮಗಾರಿಗೆ ಒಪ್ಪಿಗೆ ನೀಡಲಾಗಿದೆ.
ಸಚಿವ ಸಂಪುಟ ಸಭೆ ಪ್ರಮುಖ ನಿರ್ಣಯ
* ಉಡುಪಿ ತಾಲೂಕಿನ ಉದ್ಯಾವರ ನದಿ ಪಡುಕೆರೆ ಸಮೀಪ ಮೀನುಗಾರಿಕೆ ಜೆಟ್ಟಿ ನಿರ್ಮಾಣಕ್ಕೆ 10.52 ಕೋಟಿ ರೂ. ಅನುಮೋದನೆ
* ‘ರಾಮನಗರ ಚನ್ನಪಟ್ಟಣ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆ’ಯನ್ನು ನಬಾರ್ಡ್ ಸಹಯೋಗದಲ್ಲಿ 75 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ
* ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಪ್ರಾದೇಶಿಕ ನಿಧಿಯಡಿ ಕಲಬುರಗಿ ನಗರದ ಸೇಡಂ ವರ್ತುಲ ರಸ್ತೆ ಎನ್‌ಎಚ್- 50ರಲ್ಲಿ ಫ್ಲೈಓವರ್ ನಿರ್ಮಾಣಕ್ಕಾಗಿ 49 ಕೋಟಿ ರೂ.
* ರಾಯಚೂರು ತಾಲೂಕಿನ ಸಿದ್ಧರಾಂಪೂರದ ಸರ್ವೆ ನಂ. 105/3ರಲ್ಲಿ ಬಂಜಾರ ಭವನ ನಿರ್ಮಾಣಕ್ಕೆ ಬಳಸಿದ ಖಾಸಗಿ ಜಮೀನಿಗೆ ಬದಲಾಗಿ ರಾಜೇಶ್ ಪಿ. ಪಾಟೀಲ್ ಅವರಿಗೆ ಸರಕಾರಿ ಭೂಮಿಯನ್ನು ನೀಡಲು ಒಪ್ಪಿಗೆ
* ಗುಂಡ್ಲುಪೇಟೆ ತಾಲೂಕಿನ 131 ಗ್ರಾಮಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಚಾಮರಾಜನಗರ ಜಿಲ್ಲೆಯ 32 ಗ್ರಾಮಗಳಿಗೆ ವಿಸ್ತರಿಸುವ 22 ಕೋಟಿ ರೂ. ಮೊತ್ತಕ್ಕೆ ಅನುಮೋದನೆ
* ಚಿತ್ರದುರ್ಗ ಮತ್ತು ಹಿರಿಯೂರು ತಾಲೂಕುಗಳಲ್ಲಿ ಬಾಕಿಯಿರುವ 300 ಜನವಸತಿಗಳಿಗೆ ಕುಡಿಯುವ ನೀರು ಪೂರೈಕೆಗೆ 392.08 ಕೋಟಿ ರೂ. ವೆಚ್ಚದ ಯೋಜನೆಗೆ ಅಸ್ತು
*ಮಂಗಳೂರು ತಾಲೂಕು, ಚೇಳ್ಯಾರು, ಪದವು ಮತ್ತು ಮಧ್ಯ ಗ್ರಾಮಗಳಲ್ಲಿ ಮಂಗಳೂರು ಪ್ರಾಧಿಕಾರದ ವತಿಯಿಂದ 200 ಎಕರೆ ಭೂಸ್ವಾಧೀನಕ್ಕೆ ನಿರ್ಧಾರವಾಗಿತ್ತು. 72 ಎಕರೆಗೆ ಹಣ ಪಾವತಿಯಾಗಿತ್ತು. ಈ ಪೈಕಿ ಒಂದೇ ಭಾಗದಲ್ಲಿರುವ 45 ಎಕರೆಯಲ್ಲಿ ವಸತಿ ಬಡಾವಣೆ ಯೋಜನೆಗೆ ಅಭಿವೃದ್ಧಿಪಡಿಸಲು 30.50 ಕೋಟಿ ರೂ. ಮೊತ್ತದ ವಿಸ್ತೃತ ಯೋಜನಾ ವರದಿಗೆ ಒಪ್ಪಿಗೆ.
* ಹುಬ್ಬಳ್ಳಿ- ಧಾರವಾಡ ಪಾಲಿಕೆಯ ಅಮರಗೋಳ ಗ್ರಾಮದ ಬ್ಲಾಕ್ ನಂ. 89ರಲ್ಲಿ ಸ್ಥಾಪಿಸಲಾದ ಆರ್ಯಭಟ ಐಟಿ ಪಾರ್ಕ್ನಲ್ಲಿ ಬಾಕಿ ಉಳಿದ 3 ಎಕರೆಯನ್ನು 3 ಐಟಿ/ ಬಿಟಿ ಕಂಪನಿಗಳಿಗೆ ಹಂಚಿಕೆಗೆ ನಿರ್ಧಾರ
* ಯಾದಗಿರಿ ಜಿಲ್ಲೆಯ ಗುರುಮಿಠಕಲ್ ವ್ಯಾಪ್ತಿಯಲ್ಲಿ ಭೀಮಾನದಿ ಪಾತ್ರದಿಂದ 20 ಕೆರೆಗಳಿಗೆ ನೀರು ತುಂಬಿಸುವ 165 ಕೋಟಿ ರೂ. ಮೊತ್ತದ ಪರಿಷ್ಕೃತ ಯೋಜನೆಯನ್ನು ಸಚಿವ ಸಂಪುಟ ಸಭೆ ಮುಂದೆ ತರಲು ಸೂಚನೆ
* ಚಿಕ್ಕೋಡಿ ತಾಲೂಕಿನ ಕಲ್ಲೋಳ ಯಡೂರು ರಸ್ತೆಯಲ್ಲಿಕೃಷ್ಣಾ ನದಿಗೆ ಅಡ್ಡಲಾಗಿ ಬ್ರಿಡ್ಜ್ ಕಂ ಬ್ಯಾರೇಜ್ ಮರು ನಿರ್ಮಾಣ ಕಾಮಗಾರಿಯ 35 ಕೋಟಿ ರೂ. ಮೊತ್ತದ ಡಿಪಿಆರ್‌ಗೆ ಆಡಳಿತಾತ್ಮಕ ಅನುಮೋದನೆ
* ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಲವನಹಳ್ಳಿ, ಹೊಸಕೊಪ್ಪ ಇತರೆ 59 ಜನವಸತಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಡಿ 830.11 ಕೋಟಿ ರೂ. ಮೊತ್ತದ ಪರಿಷ್ಕೃತ ಅಂದಾಜಿಗೆ ಅನುಮೋದನೆ
* ಧಾರವಾಡದಲ್ಲಿನ ಐಐಟಿ ಕ್ಯಾಂಪಸ್‌ಗೆ ಕುಡಿಯುವ ನೀರು ಪೂರೈಕೆ ಸೌಲಭ್ಯಕ್ಕಾಗಿ 11.21 ಕೋಟಿ ರೂ. ವೆಚ್ಚಕ್ಕೆ ಒಪ್ಪಿಗೆ
Read more
[wpas_products keywords=”deal of the day sale today offer all”]