Karnataka news paper

ಗಂಭೀರ ಕಾಯಿಲೆ ಇದ್ದರೆ ನಿರ್ಲಕ್ಷ್ಯ ಬೇಡ; ಕಳೆದ 1 ವಾರದಲ್ಲಿ ಸೋಂಕಿನ ಜೊತೆ ಸಾವಿನ ಸಂಖ್ಯೆಯೂ ಏರಿಕೆ!


ಮಹಾಬಲೇಶ್ವರ ಕಲ್ಕಣಿ
ಬೆಂಗಳೂರು: ಮೂರನೇ ಅಲೆ ಆರಂಭದಲ್ಲಿ ಕೋವಿಡ್‌ ಸೋಂಕು ತೀವ್ರವಾಗಿ ಹರಡಿದರೂ ಸಾವಿನ ಸಂಖ್ಯೆ ತೀರಾ ಕಡಿಮೆ ಇತ್ತು. ಆದರೆ, ಕಳೆದ ಒಂದು ವಾರದಿಂದ ಸೋಂಕಿನ ಜತೆ ಸಾವಿನ ಸಂಖ್ಯೆ ಕೂಡ ಏರಿಕೆಯಾಗಿದೆ.

ಸೋಂಕಿತ ಮೃತರಲ್ಲಿ ಎರಡನೇ ಅಲೆಯಲ್ಲಿ ಕಾಣಿಸಿಕೊಂಡ ರೋಗ ಲಕ್ಷಣಗಳೇ ಕಾಣಿಸುತ್ತಿದ್ದು, ಗಂಭೀರ ಕಾಯಿಲೆಗಳನ್ನು ಉಳ್ಳವರು ಎಚ್ಚರಿಕೆ ವಹಿಸಬೇಕಾಗಿದೆ. ಕಳೆದ ಎರಡು ದಿನಗಳಲ್ಲಿ 91 ಜನ ಮೃತಪಟ್ಟಿದ್ದಾರೆ. ಈ ಪೈಕಿ ಶೇ.50ರಷ್ಟು ಜನರು ರಕ್ತದ ಒತ್ತಡ ಮತ್ತು ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರಾಗಿದ್ದಾರೆ. ಉಳಿದವರು ಕಿಡ್ನಿ, ಹೃದ್ರೋಗ, ಯಕೃತ್ತಿನ ಸಮಸ್ಯೆ ಸೇರಿದಂತೆ ಇತರ ದೀರ್ಘಕಾಲದ ಸಮಸ್ಯೆಯಿಂದ ಬಳಲುತ್ತಿರುವವರಾಗಿದ್ದಾರೆ.
ಬೆಂಗಳೂರಿನಲ್ಲಿ ಸೋಂಕು ದಿನದಿಂದ ದಿನಕ್ಕೆ ಇಳಿಕೆ : ಆಸ್ಪತ್ರೆ ಸೇರುವ ಪ್ರಮೇಯ ವಿರಳ, ಲಸಿಕೆಯೇ ಶ್ರೀರಕ್ಷೆ
ಮೃತಪಟ್ಟ ಹೆಚ್ಚಿನವರಲ್ಲಿ ಜ್ವರ, ಕೆಮ್ಮು ಉಸಿರಾಟದ ತೊಂದರೆ ಕಂಡು ಬಂದಿದೆ. ಜ್ವರ ಮತ್ತು ಕೆಮ್ಮಿನಿಂದ 11 ಜನ ಮೃತಪಟ್ಟರೆ, ಜ್ವರ, ಕೆಮ್ಮು, ಉಸಿರಾಟ ತೊಂದರೆಯಿಂದ 16 ಹಾಗೂ ಜ್ವರ ಮತ್ತು ಉಸಿರಾಟ ತೊಂದರೆಯಿಂದ 11, ಕೇವಲ ಜ್ವರದಿಂದ 23 ಜನ ಮೃತಪಟ್ಟಿದ್ದಾರೆ. ಇದೇ ವೇಳೆ ಕೆಮ್ಮು, ಉಸಿರಾಟ ತೊಂದರೆಯಿಂದ 11, ಕೇವಲ ಉಸಿರಾಟ ತೊಂದರೆಯಿಂದ 17 ಹಾಗೂ ಕೆಮ್ಮಿನಿಂದ ಕೇವಲ ಇಬ್ಬರು ಮೃತಪಟ್ಟಿದ್ದಾರೆ.

‘ಮೂರನೇ ಅಲೆಯಲ್ಲಿ ಸೋಂಕು ಸೌಮ್ಯವಾಗಿದೆ. ಸೋಂಕಿನಿಂದ ಹೆಚ್ಚು ಸಮಸ್ಯೆ ಇಲ್ಲ’ ಎಂದು ಗಂಭೀರ ಕಾಯಿಲೆಗಳನ್ನು ಉಳ್ಳ ಕೋವಿಡ್‌ ಸೋಂಕಿತರು ನಿರ್ಲಕ್ಷ್ಯ ತೋರುವಂತಿಲ್ಲ. ಇಂಥವರ ಮೇಲೆ ಸೋಂಕು ಹೆಚ್ಚು ಪರಿಣಾಮ ಬೀರುತ್ತಿದೆ. 2ನೇ ಅಲೆಯಲ್ಲಿ ಸೋಂಕು ಶ್ವಾಸಕೋಶದ ಮೇಲೆ ದಾಳಿ ಮಾಡಿ ಉಸಿರಾಟಕ್ಕೆ ಸಮಸ್ಯೆ ಉಂಟು ಮಾಡಿತ್ತು. ಕ್ಷಣಾರ್ಧದಲ್ಲಿ ಪಲ್ಸ್‌ ರೇಟ್‌ ಇಳಿಕೆಯಾಗಿ ಸೋಂಕಿತರನ್ನು ಸಾವಿನ ಕೂಪಕ್ಕೆ ನೂಕುವ ಶಕ್ತಿಯನ್ನು ವೈರಸ್‌ ಹೊಂದಿತ್ತು. ಕಾಯಿಲೆ ಇಲ್ಲದವರಿಗೂ ಸೋಂಕು ಕಾಣಿಸಿಕೊಂಡರೆ ಆಕ್ಸಿಜನ್‌ ಬೇಕಾಗುತ್ತಿತ್ತು. ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದು ಅನಿವಾರ್ಯವಾಗಿತ್ತು.



Read more

[wpas_products keywords=”deal of the day sale today offer all”]