Karnataka news paper

ಉತ್ತರ ಪ್ರದೇಶ ಚುನಾವಣೆಯಲ್ಲಿ ಒಬಿಸಿ ಮತಗಳೇ ನಿರ್ಣಾಯಕ..! ಮತ್ತೆ ಬಿಜೆಪಿಗೆ ಒಲಿಯುತ್ತಾ..?


ಹೈಲೈಟ್ಸ್‌:

  • 2017ರ ವಿಧಾನ ಸಭೆ ಹಾಗೂ 2019ರ ಲೋಕ ಸಭೆ ಚುನಾವಣೆಗಳಲ್ಲಿ ಒಬಿಸಿ ಸಮುದಾಯಗಳ ಒಲವು ಗಳಿಸಿದ್ದ ಬಿಜೆಪಿ
  • ಈ ಬಾರಿ ಕೂಡ ಒಬಿಸಿ ಮತಗಳತ್ತ ಬಿಜೆಪಿ ಗುರಿ ಇಟ್ಟು ನಿಂತಿದೆ
  • ಎಸ್ಪಿಯೂ ಈ ಸಮುದಾಯದ ಒಲವನ್ನು ಮರಳಿ ಗಳಿಸಿಕೊಳ್ಳಲು ಪೈಪೋಟಿ ನಡೆಸಿದೆ

ಲಖನೌ (ಉತ್ತರ ಪ್ರದೇಶ): ಉತ್ತರ ಪ್ರದೇಶದ ವಿಧಾನ ಸಭೆ ಚುನಾವಣೆಯಲ್ಲಿ ಇತರೆ ಹಿಂದುಳಿದ ವರ್ಗ (ಒಬಿಸಿ) ನಿರ್ಣಾಯಕವಾಗಿದ್ದು, ಈ ಸಮುದಾಯದ ಒಲವು ಗಳಿಸಿಕೊಳ್ಳಲು ಎಲ್ಲಾ ಪಕ್ಷಗಳೂ ಕಸರತ್ತು ತೀವ್ರಗೊಳಿಸಿವೆ.

‘ಸಾಮಾಜಿಕ ನ್ಯಾಯ’ ಪರಿಕಲ್ಪನೆಯ ಪದಕ್ಕೆ ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ಎಲ್ಲಿಲ್ಲದ ಮಹತ್ವ ಇದೆ. ಒಬಿಸಿ ಮೀಸಲು ಪ್ರತಿಪಾದಿಸಿದ ಮಂಡಲ್‌ ಕಮಿಷನ್‌ ವರದಿ ಮೂಲಕ, ಈ ಎರಡೂ ರಾಜ್ಯಗಳಲ್ಲಿ ಅಗಾಧ ರಾಜಕೀಯ ಪರಿವರ್ತನೆಗಳು ಘಟಿಸಿದವು.

ಈ ಆಂದೋಲನದ ಜ್ವಾಲೆಯಲ್ಲಿಯೇ ಮುಲಾಯಂ ಸಿಂಗ್‌ ಯಾದವ್‌ ಅಭ್ಯುದಯಕ್ಕೆ ಬಂದರು. 1990ರ ದಶಕದಲ್ಲಿ ಸಮಾಜ ವಾದಿ ಪಾರ್ಟಿ ಕಟ್ಟಿ ಯಶಸ್ಸಿನ ಉತ್ತುಂಗ ತಲುಪಿದರು. ಅಲ್ಲಿಂದ ಇಲ್ಲಿಯವರೆಗೆ ಒಬಿಸಿ ಮತ ಬ್ಯಾಂಕ್‌ ಪ್ರತ್ಯೇಕತೆಯ ಅಸ್ಮಿತೆಯನ್ನು ಕಾಯ್ದುಕೊಂಡಿದೆ.

2017ರ ವಿಧಾನ ಸಭೆ ಹಾಗೂ 2019ರ ಲೋಕ ಸಭೆ ಚುನಾವಣೆಗಳಲ್ಲಿ ಒಬಿಸಿ ಸಮುದಾಯಗಳ ಒಲವು ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದರಿಂದಲೇ ಬಿಜೆಪಿ ಭರ್ಜರಿ ಗೆಲುವು ಸಾಧಿಸಿತ್ತು. ಈ ಸಾರಿ ಕೂಡ ಒಬಿಸಿ ಮತಗಳತ್ತ ಬಿಜೆಪಿ ಗುರಿ ಇಟ್ಟು ನಿಂತಿದೆ. ಎಸ್ಪಿಯೂ ಈ ಸಮುದಾಯದ ಒಲವನ್ನು ಮರಳಿ ಗಳಿಸಿಕೊಳ್ಳಲು ಪೈಪೋಟಿ ನಡೆಸಿದೆ. ಬಿಎಸ್‌ಪಿ ಮಾತ್ರ ತನಗೆ ದಲಿತರ ಮತಗಳು ಸಾಕು, ಬ್ರಾಹ್ಮಣರ ಮತಗಳು ಬಂದರೆ ಬೋನಸ್‌ ಎನ್ನುವ ನಿಲುವಿಗೆ ಅಂಟಿಕೊಂಡಿದೆ. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಚುನಾವಣೆಯು ಒಟ್ಟಾರ್ಥದಲ್ಲಿ ಒಬಿಸಿ ಮತಗಳ ಸುತ್ತ ನಡೆಯುತ್ತಿರುವ ಮಹಾ ಸಮರ ಎನಿಸಿದೆ.

ಹೊಸ ‘ಎತ್ತರ’ಕ್ಕೆ ಸಮಾಜವಾದಿ ಪಕ್ಷ!: ‘ಸೈಕಲ್’ ಏರಿದ ಭಾರತದ ಅತಿ ಎತ್ತರದ ವ್ಯಕ್ತಿ!
ಬೃಹತ್‌ ಜನಸಂಖ್ಯೆ: ಉತ್ತರ ಪ್ರದೇಶದ ಒಟ್ಟು ಜನಸಂಖ್ಯೆಯಲ್ಲಿ ಒಬಿಸಿ ಸಮುದಾಯಗಳ ಪಾಲು ಶೇ.54.5ರಷ್ಟಿದೆ. ಅರ್ಧಕ್ಕಿಂತ ಹೆಚ್ಚಿರುವ ಈ ಸಮುದಾಯಗಳ ಮನ ಗೆಲ್ಲುವ ಪಕ್ಷ ಅಧಿಕಾರದ ಗದ್ದುಗೆ ಏರುತ್ತದೆ. ಒಬಿಸಿ ವಿರೋಧ ಕಟ್ಟಿಕೊಂಡ ಪಕ್ಷ ಎರಡಂಕಿ ದಾಟುವುದು ಕಷ್ಟ. ಅದು ಹಿಂದಿನ ಚುನಾವಣೆಗಳಲ್ಲಿ ಸಾಬೀತಾಗಿದೆ.

ಜಾತ್ಯತೀತ ರಾಜಕಾರಣಕ್ಕೆ ಒತ್ತು ನೀಡುವ ಪಕ್ಷಗಳು ಕೂಡ ಒಬಿಸಿ ವಿಷಯದಲ್ಲಿ ರಾಜಿ ಮಾಡಿಕೊಳ್ಳುತ್ತವೆ. ಬಿಜೆಪಿ ಆದಿಯಾಗಿ ಎಲ್ಲಾ ಪಕ್ಷಗಳು ಈ ಸಮುದಾಯಗಳನ್ನು ಒಲಿಸಿಕೊಳ್ಳಲು ಸರ್ಕಸ್‌ ಮಾಡುತ್ತವೆ. ಇದಕ್ಕೆ ಸಾಕ್ಷಿ, ಪ್ರಮುಖ ಪಕ್ಷಗಳ ರಾಜ್ಯಾಧ್ಯಕ್ಷರು. ಎಸ್‌ಪಿ, ಬಿಜೆಪಿಯಿಂದ ಮೊದಲ್ಗೊಂಡು ರಾಜ್ಯದ ಎಲ್ಲಾ ಪ್ರಮುಖ ಪಕ್ಷಗಳ ಅಧ್ಯಕ್ಷರು ಒಬಿಸಿಯವರೇ ಆಗಿದ್ದಾರೆ.

ಯುದ್ಧದಲ್ಲಿ ಹೋರಾಡಲಾಗದವರು ಹೇಡಿಯಂತೆ ಹೋಗುತ್ತಾರೆ: ಪಕ್ಷ ತೊರೆದ ನಾಯಕನ ವಿರುದ್ಧ ಕಾಂಗ್ರೆಸ್ ಕಿಡಿ
2017ರ ವಿಧಾನಸಭೆ ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಅಲೆ ಮ್ಯಾಜಿಕ್‌ ಸೃಷ್ಟಿಸಿತು. ಎಸ್‌ಪಿಯ ಯಾದವೇತರ ಒಬಿಸಿ ಮತ ಮತ್ತು ಬಿಎಸ್‌ಪಿಯ ಜಾಟವಾ ದಲಿತೇತರ ಮತಗಳು ಮೋದಿ ಅಲೆಗೆ ಪಕ್ಕಾದವು. ಇದರಿಂದಾಗಿ ಎರಡೂ ಕಡೆ ಬಿಜೆಪಿ ಅಧಿಕಾರ ಹಿಡಿಯಿತು.

ಈ ಸೂತ್ರವೇ ಈ ಸಾರಿಯೂ ಮ್ಯಾಜಿಕ್‌ ಸೃಷ್ಟಿಸುವುದು ಖಚಿತವಾಗಿದೆ. ಅದಕ್ಕಾಗಿ ಎಲ್ಲಾ ಪಕ್ಷಗಳ ನಡುವೆ ಒಬಿಸಿ ಮತ ಸಮರ ನಡೆದಿದೆ. ಉತ್ತರ ಪ್ರದೇಶ ರಾಜ್ಯದಲ್ಲಿ ಪಕ್ಷಗಳ ಗೆಲುವಿಗೆ ಒಬಿಸಿ ಒಲವೇ ಮಾನದಂಡವಾಗಿದೆ. ಹೆಚ್ಚು ಒಬಿಸಿ ಶಾಸಕರನ್ನು ಹೊಂದಿದ ಪಕ್ಷ ಇಲ್ಲಿ ಅಧಿಕಾರ ಹಿಡಿಯುತ್ತದೆ. ಹಾಲಿ ಬಿಜೆಪಿ 102 ಒಬಿಸಿ ಶಾಸಕರನ್ನು ಹೊಂದಿದ್ದು, ಐದು ವರ್ಷ ಅಚಲ ಆಡಳಿತ ನಡೆಸಿತು. 12 ಒಬಿಸಿ ಶಾಸಕರನ್ನು ಹೊಂದಿದ್ದ ಎಸ್‌ಪಿ ವಿರೋಧ ಪಕ್ಷವಾಯಿತು. ಬಿಎಸ್‌ಪಿ ಐದು, ಅಪ್ನಾ ದಳ ಐದು ಮತ್ತು ಕಾಂಗ್ರೆಸ್‌ ಒಬ್ಬ ಒಬಿಸಿ ಶಾಸಕರನ್ನು ಹೊಂದಿವೆ.

ಅಧಿಕೃತ, ಮೊದಲ ಬಾರಿಗೆ ಉತ್ತರ ಪ್ರದೇಶ ವಿಧಾನಸಭೆಗೆ ಸ್ಪರ್ಧಿಸಲು ಅಖಿಲೇಶ್‌ ಯಾದವ್‌ ನಿರ್ಧಾರ



Read more

[wpas_products keywords=”deal of the day sale today offer all”]