ಹೈಲೈಟ್ಸ್:
- ವಿಮಾನ ನಿಲ್ದಾಣದಲ್ಲಿ ದಾಖಲೆ ಪರಿಶೀಲನೆ ವೇಳೆ ಸತ್ಯ ಬಹಿರಂಗ
- ಮಂಗಳೂರಿನ ಯುವಕನನ್ನು ವಿವಾಹವಾಗಿದ್ದ ಮಹಿಳೆ
- 2015ರಿಂದ ಬೆಂಗಳೂರಿನಲ್ಲಿ ಮಹಿಳೆ ವಾಸ
ನಕಲಿ ದಾಖಲೆಗಳನ್ನು ಸೃಷ್ಟಿಸಿ ಹಿಂದೂ ಧರ್ಮದ ಯುವತಿಯ ಹೆಸರಿಟ್ಟುಕೊಂಡು ಭಾರತದ ಪೌರತ್ವ ಪಡೆದಿದ್ದ ಮುಸ್ಲಿಂ ಸಮುದಾಯದ ರೋನಿ ಬೇಗಂ ಬಂಧಿತ ಮಹಿಳೆ. ಈಕೆ ಮಂಗಳೂರಿನ ಯುವಕ ನಿತಿನ್ ಎಂಬಾತನನ್ನು ವಿವಾಹವಾಗಿ ನಗರದಲ್ಲಿ ನೆಲೆಸಿದ್ದಳು ಎಂದು ಪೊಲೀಸರು ತಿಳಿಸಿದರು.
2006 – 2007 ರಲ್ಲಿ ರೋನಿ ಬೇಗಂ ಅಕ್ರಮವಾಗಿ ದೇಶದೊಳಗೆ ಬಂದಿದ್ದಳು. ಬಳಿಕ ಮುಂಬೈನ ಬಾರ್‌ವೊಂದರಲ್ಲಿ ಡಾನ್ಸರ್ ಆಗಿ ಕೆಲಸ ಮಾಡಿದ್ದಳು. ಅದೇ ವೇಳೆಗೆ ಮಂಗಳೂರಿನ ನಿತಿನ್ ಪರಿಚಯವಾಗಿದೆ. ಪರಿಚಯ ಪ್ರೀತಿಗೆ ತಿರುಗಿ 2015ರಲ್ಲಿ ಇಬ್ಬರೂ ಬೆಂಗಳೂರಿಗೆ ಬಂದು ಬ್ಯಾಡರ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಿದ್ದರು. ರೋನಿ ಬೇಗಂ ಜೀವನ ನಿರ್ವಹಣೆಗಾಗಿ ಟೈಲರಿಂಗ್ ಕೆಲಸ ಮಾಡುತ್ತಿದ್ದಳು.
ನಕಲಿ ದಾಖಲೆ ಸೃಷ್ಟಿಸಿ ಪೌರತ್ವ
ರೋನಿ ಬೇಗಂ ತನ್ನ ಹೆಸರನ್ನು ಪಾಯಲ್ ಘೋಷ್ ಎಂದು ಬದಲಿಸಿಕೊಂಡು ಹಿಂದೂ ಧರ್ಮದ ಸಂಪ್ರದಾಯದಂತೆ ನಿತಿನ್‌ನನ್ನು ಮದುವೆಯಾಗಿದ್ದಳು. ನಂತರ ನಕಲಿ ದಾಖಲೆಗಳನ್ನು ಸೃಷ್ಟಿಸಿ ಪಾಯಲ್ ಘೋಷ್ ಹೆಸರಿನಲ್ಲಿ ಭಾರತದ ಪೌರತ್ವ ಪಡೆದುಕೊಂಡಿದ್ದಳು. ಅಲ್ಲದೆ ಪಾಯಲ್ ಘೋಷ್ ಹೆಸರಿನಲ್ಲಿ ಚುನಾವಣೆ ಗುರುತಿನ ಚೀಟಿ, ಆಧಾರ್ ಕಾರ್ಡ್ ಹಾಗೂ ಪಾಸ್ ಪೋರ್ಟ್ ಮಾಡಿಸಿಕೊಂಡಿದ್ದಳು.
ಇದೇ ಪಾಸ್ ಪೋರ್ಟ್ ಬಳಸಿ ಬಾಂಗ್ಲಾ ದೇಶಕ್ಕೆ ತೆರಳುವಾಗ ಪಶ್ಚಿಮ ಬಂಗಾಳದ ವಿಮಾನ ನಿಲ್ದಾಣದಲ್ಲಿ ಏರ್ ಪೋರ್ಟ್ ಅಧಿಕಾರಿಗಳು ದಾಖಲೆ ತಪಾಸಣೆ ನಡೆಸಿದ್ದಾರೆ. ದಾಖಲೆಗಳ ಬಗ್ಗೆ ಅನುಮಾನ ಬಂದು ವಿಚಾರಿಸಿದಾಗ ಗೊಂದಲದ ಹೇಳಿಕೆ ನೀಡಿದ್ದಾಳೆ.
ಕೂಡಲೇ ವಿಚಾರಣೆಗೊಳಪಡಿಸಿದಾಗ ಆಕೆ ಬಳಿ ಇರುವುದು ನಕಲಿ ದಾಖಲೆಗಳು ಎಂಬುದು ಬಯಲಾಗಿದೆ. ಹೀಗಾಗಿ, ಆಕೆಯ ವಿರುದ್ಧ ಎಫ್‌ಆರ್‌ಆರ್‌ಓ ಅಧಿಕಾರಿಗಳು ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆನಂತರ ಆಕೆ ವಾಪಸ್ ಬೆಂಗಳೂರಿಗೆ ಬಂದು ತಲೆಮರೆಸಿಕೊಂಡಿದ್ದಳು. ಒಂದೂವರೆ ವರ್ಷದ ನಂತರ ರೋನಿ ಬೇಗಂನನ್ನು ಬ್ಯಾಡರ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ರೋನಿ ಬೇಗಂ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆಕೆಗೆ ನಕಲಿ ದಾಖಲಿ ಸೃಷ್ಟಿಸಿ ಕೊಟ್ಟಿರುವವರ ಪತ್ತೆಗೂ ಶೋಧ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಅವರನ್ನೂ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದರು.
Read more
[wpas_products keywords=”deal of the day sale today offer all”]