The New Indian Express
ಕ್ಯಾಲಿಫೋರ್ನಿಯ: ಬಂದೂಕಿಗೆ ಪರವಾನಗಿ ಹೊಂದಬೇಕೆಂಬ ನಿಯಮ ಹಳತಾಯಿತು. ಅಮೆರಿಕದ ಸ್ಯಾನ್ ಒಝೆ ನಗರ ಪಾಲಿಕೆ ಬಂದೂಕು ವಿಮೆ ಕಾನೂನನ್ನು ಜಾರಿಗೊಳಿಸಿದೆ. ಬಂದೂಕು ವಿಮೆ ಜಾರಿಗೊಳಿಸಿದ ಅಮೆರಿಕದ ಮೊದಲ ನಗರ ಎನ್ನುವ ಹೆಸರಿಗೆ ಸ್ಯಾನ್ ಒಝೆ ನಗರ ಪಾತ್ರವಾಗಿದೆ.
ಇದನ್ನೂ ಓದಿ: ಅಮೆರಿಕ: ಸಿನ್ಸಿನ್ನಾಟಿಯಲ್ಲಿ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆ ವೇಳೆ ಶೂಟೌಟ್, ಇಬ್ಬರ ಸಾವು
ಬಂದೂಕಿಗೆ ಇನ್ಷೂರೆನ್ಸ್ ಮಾಡಿಸಬೇಕೆಂಬ ಕೂಗು ಅಮೆರಿಕದಾದ್ಯಂತ ಎದ್ದಿತ್ತು. ಅಮೆರಿಕದಲ್ಲಿ ಶೂಟೌಟ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಆಗ್ರಹ ಕೇಳಿಬಂದಿತ್ತು.
ಇದನ್ನೂ ಓದಿ: ಅಮೆರಿಕದ ಒಹಿವೊದಲ್ಲಿ ಶೂಟೌಟ್: ಕನಿಷ್ಠ ಮೂವರು ಸಾವು
ಬಂದೂಕು ಹೊಂದಿರುವವರು ನಿಗದಿತ ಮೊತ್ತವನ್ನು ಪ್ರೀಮಿಯಂ ರೂಪದಲ್ಲಿ ವರ್ಷಕ್ಕೊಮ್ಮೆ ಪಾವತಿಸಬೇಕಾಗುತ್ತದೆ. ನಗರದಲ್ಲಿ ಶೂಟೌಟ್ ನಡೆದರೆ, ಯಾವ ಬಂದೂಕಿನಿಂದ ದಾಳಿ ನಡೆದಿದೆಯೋ ಅದರ ಮಾಲೀಕರ ವಿಮೆ ಕ್ಲೈಮ್ ಆಗುತ್ತದೆ. ಗುಂಡೇಟು ತಗುಲಿದವರ ಕುಟುಂಬಕ್ಕೆ ಪರಿಹಾರ ನೀಡಲು ಈ ವಿಮೆ ಬಳಕೆಯಾಗಲಿದೆ.
ಇದನ್ನೂ ಓದಿ: ಗುಂಡು ಹಾರಿಸಿ ಹೊಸ ವರ್ಷ ಸಂಭ್ರಮಾಚರಣೆ: ಓರ್ವ ಬಾಲಕ ಮೃತ್ಯು, 18 ಮಂದಿ ಗಾಯಾಳು
Read more
[wpas_products keywords=”deal of the day”]