Karnataka news paper

ವಿಕೆಟ್ ಪಡೆದ ಖುಷಿಯಲ್ಲಿ ನಟ ಅಲ್ಲು ಅರ್ಜುನ್ ರೀತಿ ಸ್ಟೆಪ್ ಹಾಕಿದ ಬ್ರಾವೋ, ವಿಡಿಯೋ!


Online Desk

ಬಾಂಗ್ಲಾದೇಶ: ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಪುಷ್ಪ ಸಿನಿಮಾದ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ. ಪುಷ್ಪಾ.. ಸಿನಿಮಾ ಜಗತ್ತು ಮಾತ್ರವಲ್ಲದೆ ಕ್ರಿಕೆಟ್ ಜಗತ್ತಿನಲ್ಲೂ ತನ್ನದೇ ಆದ ವೇಗ ಪಡೆಯುತ್ತಿದೆ. ಬೌಲರ್ ವಿಕೆಟ್ ಪಡೆದಾಗ ಸಾಮಾನ್ಯವಾಗಿ ವಿಶಿಷ್ಟ ರೀತಿಯಲ್ಲಿ ಭಾವ ಭಂಗಿಗಳನ್ನ ಆಚರಿಸಿ ತೋರಿಸುತ್ತಾರೆ. 

ಆದರೆ ಈಗ ಬೌಲರ್‌ಗಳು ಪುಷ್ಪ ಡೈಲಾಗ್‌ಗಳು ಮತ್ತು ಹಾಡುಗಳನ್ನು ಹೇಳುವುದರ ಮೂಲಕ ಆಚರಿಸುತ್ತಿದ್ದಾರೆ. ಪುಷ್ಪ ಚಿತ್ರದಲ್ಲಿನ ಶ್ರೀವಲ್ಲಿ ಹಾಡಿಗೆ ಅಲ್ಲು ಅರ್ಜುನ್ ಮಾಡಿದ ಡ್ಯಾನ್ಸ್ ಬಹಳ ಜನಪ್ರಿಯವಾಗಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇತ್ತೀಚೆಗಷ್ಟೇ ವೆಸ್ಟ್ ಇಂಡೀಸ್ ನ ಮಾಜಿ ಕ್ರಿಕೆಟಿಗ ಡ್ವೇನ್ ಬ್ರಾವೋ ಕೂಡ ಹಾಡಿಗೆ ಹೆಜ್ಜೆ ಹಾಕಿದ್ದರು.

ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನ ಅಂಗವಾಗಿ ಕೊಮಿಲ್ಲಾ ವಿಕ್ಟೋರಿಯನ್ಸ್ ಮತ್ತು ಫಾರ್ಚೂನ್ ಬ್ಯಾರಿಸಲ್ ನಡುವಿನ ಪಂದ್ಯದ ವೇಳೆ ಈ ಘಟನೆ ನಡೆದಿದೆ. ಇನಿಂಗ್ಸ್ ನ 18ನೇ ಓವರ್ ನಲ್ಲಿ ಮಹಿದುಲ್ ಇಸ್ಲಾಂ ಅಂಕನ್ ಬೌಲಿಂಗ್ ನಲ್ಲಿ ಭಾರಿ ಶಾಟ್ ಗೆ ಪ್ರಯತ್ನಿಸಿದರು ಆದರೆ ಬಾಲ್ ಫೀಲ್ಡರ್ ಕೈಗೆ ಹೋಯಿತು. ಈ ಕ್ರಮದಲ್ಲಿ ವಿಕೆಟ್ ಪಡೆದ ಖುಷಿಯಲ್ಲಿ ಬ್ರಾವೋ ಪುಷ್ಪ ಸಿನಿಮಾದ ಶ್ರೀವಲ್ಲಿ ಹಾಡಿಗೆ ಹೆಜ್ಜೆ ಹಾಕಿದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.





Read more…

[wpas_products keywords=”deal of the day sports items”]