ಹೈಲೈಟ್ಸ್:
- ವಿಶ್ವದ 2ನೇ ಅತಿ ದೊಡ್ಡ ಐಟಿ ಸರ್ವೀಸ್ ಬ್ರ್ಯಾಂಡ್ ಆಗಿ ಹೊರಹೊಮ್ಮಿದ ಟಾಟಾ ಸಮೂಹದ ದಿಗ್ಗಜ ಕಂಪನಿ ಟಿಸಿಎಸ್
- 2022ರ ಟಾಪ್ 10 ಐಟಿ ಸರ್ವೀಸ್ ಬ್ರ್ಯಾಂಡ್‌ಗಳಲ್ಲಿ ಟಿಸಿಎಸ್ ಜತೆಗೆ ಇನ್ಫೋಸಿಸ್, ವಿಪ್ರೋ, ಎಚ್‌ಸಿಎಲ್
- ಬ್ರ್ಯಾಂಡ್ ಫೈನಾನ್ಸ್‌ನ ಸಮೀಕ್ಷೆಯಲ್ಲಿ ಬಹಿರಂಗ
ಟಿಸಿಎಸ್, ಇನ್ಫೋಸಿಸ್, ವಿಪ್ರೋ, ಎಚ್‌ಸಿಎಲ್ 2022ರ ಟಾಪ್ ಐಟಿ ಸರ್ವೀಸ್ ಬ್ರ್ಯಾಂಡ್‌ಗಳಲ್ಲಿ ಸೇರಿವೆ ಎಂದು ಬ್ರ್ಯಾಂಡ್ ಫೈನಾನ್ಸ್‌ನ ಸಮೀಕ್ಷೆ ತಿಳಿಸಿದೆ. 2020ರಿಂದ ಭಾರತೀಯ ಐಟಿ ಬ್ರ್ಯಾಂಡ್‌ಗಳು ಶೇ. 51 ಬೆಳೆದಿವೆ. ಮತ್ತೊಂದು ಕಡೆ ಅಮೆರಿಕದ ಐಟಿ ಕಂಪನಿಗಳ ಬೆಳವಣಿಗೆ ಮೈನಸ್ 7ರಷ್ಟು ಕುಸಿದಿದೆ.
ಕೋವಿಡ್-19 ನಂತರ ಜಗತ್ತಿನ ಕಾರ್ಪೊರೇಟ್ ವಲಯ ಡಿಜಿಟಲೀಕರಣಕ್ಕೆ ಒಳಗಾಗುತ್ತಿದ್ದು, ಇದರ ಪರಿಣಾಮ ಭಾರತದ ಐಟಿ ಕಂಪನಿಗಳಿಗೆ ಬೇಡಿಕೆ ವೃದ್ಧಿಸಿದೆ ಎಂದು ಬ್ರ್ಯಾಂಡ್ ಫೈನಾನ್ಸ್ ವರದಿ ತಿಳಿಸಿದೆ.
ಟಿಸಿಎಸ್ ಸಾಧನೆ
ಮೊದಲ ಬಾರಿಗೆ ಟಿಸಿಎಸ್ ವಿಶ್ವದಲ್ಲೇ 2ನೇ ಅತಿ ದೊಡ್ಡ ಐಟಿ ಸರ್ವೀಸ್ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ. ಇದರ ಬ್ರ್ಯಾಂಡ್ ಮೌಲ್ಯ 16.8 ಶತಕೋಟಿ ಡಾಲರ್ (ಅಂದಾಜು 1.26 ಲಕ್ಷ ಕೋಟಿ ರೂ.) ಎಂದಿದೆ. ಇನ್ಫೋಸಿಸ್ 3ನೇ ಸ್ಥಾನ ಗಳಿಸಿದ್ದರೆ, ವಿಪ್ರೋ 7 ಮತ್ತು ಎಚ್‌ಸಿಎಲ್ 8ನೇ ಸ್ಥಾನ ಹಾಗೂ ಟೆಕ್ ಮಹೀಂದ್ರಾ 15ನೇ ಸ್ಥಾನ ಗಳಿಸಿದೆ.
2020-2022ರ ಅವಧಿಯಲ್ಲಿ ಭಾರತದ 6 ಐಟಿ ಕಂಪನಿಗಳು ವೇಗವಾಗಿ ಬೆಳೆಯುತ್ತಿರುವ ಟಾಪ್ 10 ಐಟಿ ಬ್ರ್ಯಾಂಡ್‌ಗಳಲ್ಲಿ ಸ್ಥಾನ ಪಡೆದಿವೆ ಎಂದೂ ಸಮೀಕ್ಷೆ ತಿಳಿಸಿದೆ. ಪಟ್ಟಿಯಲ್ಲಿ ಐರ್ಲೆಂಡ್ ಮೂಲದ ಅಕ್ಸೆಂಚರ್ ಮೊದಲ ಸ್ಥಾನದಲ್ಲಿದೆ. ಇದರ ಬ್ರ್ಯಾಂಡ್ ಮೌಲ್ಯ 36.2 ಶತಕೋಟಿ ಡಾಲರ್ (ಅಂದಾಜು 2.66 ಲಕ್ಷ ಕೋಟಿ ರೂ.) ಆಗಿದೆ.
ಮಾಹಿತಿ ತಂತ್ರಜ್ಞಾನ ವಲಯದ ಟಾಪ್ 10 ಕಂಪನಿಗಳಲ್ಲಿ ಭಾರತದ ಕಂಪನಿಗಳು ಮುಂಚೂಣಿಯಲ್ಲಿದ್ದರೂ, 2022ರ ಟಾಪ್ 10 ಬ್ರ್ಯಾಂಡ್‌ಗಳಲ್ಲಿ ಅಮೆರಿಕ ಮತ್ತು ಚೀನಾ ಕಂಪನಿಗಳ ಪ್ರಾಬಲ್ಯ ಇದೆ. ವಿಶ್ವದ ಅತ್ಯಧಿಕ ಮೌಲ್ಯದ ಬ್ರ್ಯಾಂಡ್‌ಗಳಲ್ಲಿ ಅಮೆರಿಕದ ಐಫೋನ್ ತಯಾರಕ ಆ್ಯಪಲ್ ಮೊದಲ ಸ್ಥಾನದಲ್ಲಿದೆ. ಅಮೆಜಾನ್, ಗೂಗಲ್, ಮೈಕ್ರೊಸಾಫ್ಟ್, ವಾಲ್‌ಮಾರ್ಟ್, ಸ್ಯಾಮ್‌ಸಂಗ್, ಫೇಸ್‌ಬುಕ್, ಹುವೈ, ವೆರಿಜಾನ್ ಇದೆ. ಚೀನಾ ಮೂಲದ ಟಿಕ್‌ಟಾಕ್ ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ ಎಂದು ಸಮೀಕ್ಷೆ ಹೇಳಿದೆ.
Read more…
[wpas_products keywords=”deal of the day”]