Karnataka news paper

ಭಾರತದ ಮೊದಲ ಅಡ್ವೆಂಚರ್ ಹೀರೋನನ್ನು ಹೊಸ ದಿನಾಂಕದಲ್ಲಿ ಪರಿಚಯಿಸಲಿದ್ದೇವೆ: ವಿಕ್ರಾಂತ್ ರೋಣ ತಂಡ


ಹೈಲೈಟ್ಸ್‌:

  • ನಟ ಕಿಚ್ಚ ಸುದೀಪ್, ನಿರೂಪ್ ಭಂಡಾರಿ, ನೀತಾ ಅಶೋಕ್ ನಟನೆಯ ‘ವಿಕ್ರಾಂತ್ ರೋಣ’
  • ರಿಲೀಸ್ ದಿನಾಂಕ ಮುಂದಕ್ಕೆ ಹಾಕಿದ ಸಿನಿಮಾ ತಂಡ
  • ಹೊಸ ರಿಲೀಸ್ ದಿನಾಂಕ ಘೋಷಿಸಿದ ‘ವಿಕ್ರಾಂತ್ ರೋಣ’ ಸಿನಿಮಾ ತಂಡ

ನಟ ಕಿಚ್ಚ ಸುದೀಪ್, ನಿರೂಪ್ ಭಂಡಾರಿ, ನೀತಾ ಅಶೋಕ್, ಚಿತ್ಕಲಾ ಬಿರಾದಾರ್ ಅಭಿನಯದ ಅನೂಪ್ ಭಂಡಾರಿ ನಿರ್ದೇಶನದ ‘ವಿಕ್ರಾಂತ್ ರೋಣ’ ಸಿನಿಮಾದ ರಿಲೀಸ್ ದಿನಾಂಕವನ್ನು ಮುಂದೂಡಲಾಗಿದೆ. ಈ ಕುರಿತು ಚಿತ್ರತಂಡ ಹೇಳಿಕೆ ರಿಲೀಸ್ ಮಾಡಿದೆ.

ನಮ್ಮ ಕನಸನ್ನು ಫೆಬ್ರವರಿ 24ರಂದು ನಿಮ್ಮ ಮುಂದೆ ತರಲು ನಾವು ಉತ್ಸುಕರಾಗಿದ್ದರೂ, ಪ್ರಸ್ತುತ ಕೋವಿಡ್ ಪರಿಸ್ಥಿತಿ ಹಾಗೂ ಅದಕ್ಕೆ ಸಂಬಧಿಸಿದ ನಿಯಮಾವಳಿಗಳು ಪ್ರಪಂಚಾದ್ಯಂತ ನಮ್ಮ ಸಿನಿಮಾವನ್ನು ತಲುಪಿಸಲು ಅನುಕೂಲಕರವಾಗಿಲ್ಲ.

ನಿಮ್ಮ ಪ್ರೀತಿ ಹಾಗೂ ತಾಳ್ಮೆಗೆ ನಾವು ಆಭಾರಿ. ಅದಕ್ಕೆ ಪ್ರತಿಯಾಗಿ ನೀವು ಮನಸಾರೆ ಸ್ವೀಕರಿಸುವಂತಹ ಚಿತ್ರ ನಿಮ್ಮ ಮುಂದೆ ತರುತ್ತೇವೆ ಎನ್ನುವ ಭರವಸೆ ನಮಗಿದೆ. ಭಾರತದ ಮೊದಲ ಅಡ್ವೆಂಚರ್ ಹೀರೋನನ್ನು ಪ್ರಪಂಚಕ್ಕೆ ಪರಿಚಿಯಿಸುವ ಹೊಸ ದಿನಾಂಕವನ್ನು ಶೀಘ್ರದಲ್ಲಿಯೇ ತಿಳಿಸುತ್ತೇವೆ
ವಿಕ್ರಾಂತ್ ರೋಣ ತಂಡ

‘ವಿಕ್ರಾಂತ್ ರೋಣ’ ರಿಲೀಸ್‌ ಡೇಟ್ ಬಹಿರಂಗ; ‘ಕಿಚ್ಚ’ ಸುದೀಪ್ ಫ್ಯಾನ್ಸ್‌ಗೆ ಇಲ್ಲಿದೆ ಗುಡ್‌ ನ್ಯೂಸ್!
ಬಹುತೇಕ ಕಥೆ ಕಾಡಿನಲ್ಲೇ ಸಾಗುವ ಈ ಸಿನಿಮಾ ನಟ ಕಿಚ್ಚ ಸುದೀಪ್ ಈವರೆಗೂ ಮಾಡಿರುವ ಸಿನಿಮಾಗಳಿಗಿಂತ ಭಿನ್ನವಾಗಿದೆ. ರೆಟ್ರೋ ಕಾಲದ ಕಥೆಯಿರುವ ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಅವರು ವಿಕ್ರಾಂತ್ ರೋಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೈದರಾಬಾದ್‌ನಲ್ಲಿ ಬೃಹತ್ ಕಾಡಿನ ಸೆಟ್ ಹಾಕಲಾಗಿತ್ತು. ಹೈದರಾಬಾದ್, ಬೆಂಗಳೂರು, ಕೇರಳ ಭಾಗದಲ್ಲಿ ಈ ಸಿನಿಮಾದ ಶೂಟಿಂಗ್ ನಡೆದಿದೆ.

“3Dಯಲ್ಲಿ ಮೂಡಿಬರುತ್ತಿರುವ ವಿಕ್ರಾಂತ್ ರೋಣ ಸಿನಿಮಾದಲ್ಲಿ ಒಂದು ಬ್ಯೂಟಿಫುಲ್ ಪ್ರಪಂಚವನ್ನು ಸೃಷ್ಟಿ ಮಾಡಿ, ಅದರೊಳಗೆ ಕಥೆ ಹೇಳಿದ್ದೇವೆ. ‘ವಿಕ್ರಾಂತ್ ರೋಣ’ ಎಲ್ಲಾ ಕಡೆ ಚೆನ್ನಾಗಿ ಹೋಗಬೇಕು, ವೀಕ್ಷಕರು ನೋಡಬೇಕು ಎಂಬುದು ನಮ್ಮ ಆಸೆ. ಈ ಸಿನಿಮಾ ಹಿಟ್ ಆಗತ್ತೆ ಎಂದು ನಿರೀಕ್ಷೆಯಿದೆ. ಅದು ಯಶಸ್ಸು ಕಂಡರೆ ನಮ್ಮಲ್ಲೇ ಒಂದು ಹೊಸ ಅಲೆ ಸೃಷ್ಟಿಯಾಗಿ, ಹೊಸ ಹೊಸ ಕಥೆಗಳನ್ನು ಹೇಳುವುದಕ್ಕೆ ನಮಗೆ ಧೈರ್ಯ ಬರುತ್ತದೆ” ಎಂದು ಈ ಹಿಂದೆಯೇ ಕಿಚ್ಚ ಸುದೀಪ್ ಹೇಳಿದ್ದರು.

‘ವಿಕ್ರಾಂತ್ ರೋಣ’ ಚಿತ್ರದ ‘ಡೆಡ್ ಮ್ಯಾನ್ ಆಂಥೆಮ್’ ಬಗ್ಗೆ ನಿರ್ದೇಶಕ ಅನೂಪ್ ಭಂಡಾರಿ ಏನ್ ಹೇಳಿದ್ರು?

ಮಲಯಾಳಂ ಬಿಟ್ಟು ಎಲ್ಲ ಭಾಷೆಗಳಲ್ಲಿ ಡಬ್ ಮಾಡಿರುವ ಕಿಚ್ಚ ಸುದೀಪ್

‘ವಿಕ್ರಾಂತ್ ರೋಣ’ ಸಿನಿಮಾವನ್ನು ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಮಾಡಲಾಗುತ್ತಿದೆ. ಮಲಯಾಳಂ ಬಿಟ್ಟು ಮಿಕ್ಕೆಲ್ಲ ಭಾಷೆಗಳಿಗೆ ಕಿಚ್ಚ ಸುದೀಪ್ ಅವರೇ ತಮ್ಮ ಪಾತ್ರಕ್ಕೆ ಧ್ವನಿ ನೀಡಿದ್ದಾರೆ. ರವಿಶಂಕರ್ ಗೌಡ, ಮಧುಸೂದನ್ ರಾವ್, ಜಾಕ್ವೆಲಿನ್ ಫರ್ನಾಂಡಿಸ್ ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಫ್ಯಾಂಟಸಿ, ಆಕ್ಷನ್, ಅಡ್ವೆಂಚರ್, ಥ್ರಿಲ್ಲರ್ ಅಂಶ ಈ ಸಿನಿಮಾದಲ್ಲಿ ಇದೆಯಂತೆ.

ಜಾಕ್ ಮಂಜು, ಅಲಂಕಾರ್ ಪಾಂಡಿಯನ್ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಈ ಸಿನಿಮಾಕ್ಕಿದೆ. ಇನ್ನು ದುಬೈನ ಬುರ್ಜ್ ಖಲೀಫಾದಲ್ಲಿ ವಿಕ್ರಾಂತ್ ರೋಣನ ದರ್ಶನವಾಗಿತ್ತು.



Read more

[wpas_products keywords=”deal of the day party wear dress for women stylish indian”]