ಹೈಲೈಟ್ಸ್:
- ಕಾಂಗ್ರೆಸ್ ಮುಗಿಸಲು ಡಿಕೆಶಿ- ಸಿದ್ದರಾಮಯ್ಯ ಜೋಡೆತ್ತುಗಳು ಸಾಕು.!
- ಮೊದಲು ಸೋರುತ್ತಿರುವ ನಿಮ್ಮ ಮನೆಯನ್ನು ಸರಿಪಡಿಸಿಕೊಳ್ಳಿ
- ಸಿದ್ದರಾಮಯ್ಯ ಡಿಕೆ ಶಿವಕುಮಾರ್ ವಿರುದ್ಧ ರೇಣುಕಾಚಾರ್ಯ ಕಿಡಿ
ಮೊದಲು ಸೋರುತ್ತಿರುವ ನಿಮ್ಮ ಮನೆಯನ್ನು ಸರಿಪಡಿಸಿಕೊಳ್ಳಿ. ಉರಿಯುವ ಮನೆಯಲ್ಲಿ ಗಳ ಹಿಡಿಯುತ್ತೇನೆ ಎಂದು ಹೊರಟರೆ ಮೊದಲು ಬೆಂಕಿ ಬೀಳುವುದು ನಿಮಗೆ ಎಂಬುದನ್ನು ಮರೆಯಬೇಡಿ. ಇಬ್ರಾಹಿಂ ನಿರ್ಗಮನ ಇದು ಆರಂಭ. ಮುಂದಿನ ದಿನಗಳಲ್ಲಿ ಮತ್ತಷ್ಟು ಶಾಸಕರ ವಲಸೆ ಗ್ಯಾರಂಟಿ. ಕಾದು ನೋಡಿ.! ಎಂದು ಹೇಳಿದ್ದಾರೆ.
ಬಿಜೆಪಿಯ ಅನೇಕ ಶಾಸಕರು ಕಾಂಗ್ರೆಸ್ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಹೇಳಿದ್ದ ಡಿಕೆಶಿ ಹಾಗೂ ಸಿದ್ದರಾಮಯ್ಯನವರೇ ನಿಮ್ಮದೇ ಪಕ್ಷದ ಎಂಎಲ್ ಸಿ ಸಿ.ಎಂ.ಇಬ್ರಾಹಿಂ ಪಕ್ಷಕ್ಕೆ ಗುಡ್ ಬೈ ಹೇಳುವುದಾಗಿ ಘೋಷಿಸಿದ್ದಾರೆ. ಇದಕ್ಕೆ ಏನು ಹೇಳುತ್ತೀರಿ.? ಎಂದು ಪ್ರಶ್ನಿಸಿದ್ದಾರೆ. ನನ್ನ ಮತ್ತು ಕಾಂಗ್ರೆಸ್ ಸಂಬಂಧ ಮುಗಿದ ಅಧ್ಯಾಯ ಎಂದು ಸಿಎಂ ಇಬ್ರಾಹಿಂ ಹೇಳಿದ್ದಾರೆ. ಸಿದ್ದರಾಮಯ್ಯ ಅವರೇ ನಿಮ್ಮ ಮಾಹಿತಿಗಾಗಿ ಈ ಸುದ್ದಿ ಎಂದು ಕಿಚಾಯಿಸಿದ್ದಾರೆ.
ಬಿಜೆಪಿಗೆ ಕಾಂಗ್ರೆಸ್ ತಿರುಗೇಟು
ಇನ್ನು ಟ್ವಿಟ್ಟರ್‌ನಲ್ಲಿ ಕಾಂಗ್ರೆಸ್ ಬಿಜೆಪಿ ವಾಕ್ಸಮರ ಮುಂದುವರಿದಿದೆ. ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿಕಾರಿದ್ದು, ಸಚಿವ ಅಶೋಕ್ ಮೌನ! ಮಿಕ್ಕವರದ್ದು ಅಸಮಾಧಾನ! ಆಡಳಿತ ಬಗ್ಗೆ ಇಲ್ಲ ಗಮನ! ಜನರ ಬದುಕು ಅಧ್ವಾನ ಎಂದಿದೆ.
ಬಿಜೆಪಿ ತನ್ನ ಅಡಳಿತಾದುದ್ದಕ್ಕೂ ಅಸಮಾಧಾನ, ಸಂಧಾನಗಳನ್ನೇ ಮಾಡಿಕೊಂಡು ಕಾಲ ಕಳೆದಿದೆ, ಬಿಜೆಪಿ ಆಡಳಿತ ಎಂದಿಗೂ ಟೇಕಾಫ್ ಆಗಿಯೇ ಇಲ್ಲ, ಮುಂದೆ ಆಗುವುದೂ ಇಲ್ಲ. ಅಧಿಕಾರದ ಬಗ್ಗೆ ಇರುವ ಅರ್ಧದಷ್ಟು ಆಸಕ್ತಿಯನ್ನೂ ಜನರ ಸಮಸ್ಯೆಗೆ ತೋರಲಿಲ್ಲ ಎಂದು ಕಿಡಿಕಾರಿದೆ.
Read more
[wpas_products keywords=”deal of the day sale today offer all”]