Karnataka news paper

ದಾನಿಶ್ ಸೇಟ್ ಅಭಿನಯದ ಅಡ್ವೆಂಚರ್- ಕಾಮಿಡಿ, ಒನ್ ಕಟ್ ಟು ಕಟ್ ಟ್ರೇಲರ್ ಬಿಡುಗಡೆ


Online Desk

ವಂಶಿಧರ್ ಭೋಗರಾಜು ನಿರ್ದೇಶನದ ‘ಒನ್ ಕಟ್ ಟು ಕಟ್’ ಚಿತ್ರವನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಮತ್ತು ಗುರುದತ್ತ ತಲ್ವಾರ್ ನಿರ್ಮಿಸಿದ್ದಾರೆ. ನಾಯಕರಾಗಿ ದಾನಿಶ್ ಸೇಟ್ ನಟಿಸಿದ್ದರೆ, ಸಂಯುಕ್ತಾ ಹೊರನಾಡು, ಪ್ರಕಾಶ್ ಬೆಳವಾಡಿ ತಾರಾಗಣದಲ್ಲಿದ್ದಾರೆ. 

ಇದನ್ನೂ ಓದಿ: PRK ಪ್ರೊಡಕ್ಷನ್ಸ್, ದಾನಿಶ್ ಸೇಠ್ ಅಭಿನಯದ ‘ಒನ್ ಕಟ್ ಟು ಕಟ್’ ಸಿನಿಮಾದ ಫರ್ಸ್ಟ್ ಲುಕ್ ಬಿಡುಗಡೆ

ಅಮೇಜಾನ್ ಪ್ರೈಮ್ ವಿಡಿಯೊನಲ್ಲಿ ಒನ್ ಕಟ್ ಟು ಕಟ್ ಸಿನಿಮಾ ಫೆ.3ರಂದು ತೆರೆಕಾಣುತ್ತಿದೆ. ಭಾರತ ಸೇರಿದಂತೆ 240 ದೇಶಗಳ ಪ್ರೈಮ್‌ ಚಂದಾದಾರರು ಈ ಸಿನಿಮಾ ಸ್ಟ್ರೀಮ್ ಮಾಡಬಹುದು. ಪುನೀತ್ ರಾಜ್ ಕುಮಾರ್ ಅವರ ಪಿ ಆರ್ ಕೆ ಪ್ರೊಡಕ್ಷನ್ಸ್ ಅಡಿ ಒನ್ ಕಟ್ ಟು ಕಟ್ ಸಿನಿಮಾ ನಿರ್ಮಾಣಗೊಂಡಿದೆ.

ಇದನ್ನೂ ಓದಿ: ಪುನೀತ್ ರಾಜ್ ಕುಮಾರ್ ‘ಜೇಮ್ಸ್’ ಸಿನಿಮಾ ಪೋಸ್ಟರ್ ಲಾಂಚ್: ಯೋಧನ ರೂಪದಲ್ಲಿ ಪವರ್ ಸ್ಟಾರ್

ಒಂದು ಸರ್ಕಾರಿ ಶಾಲೆಗೆ ನುಗ್ಗುವ ದುಷ್ಕರ್ಮಿಗಳು ವಿದ್ಯಾರ್ಥಿಗಳು ಮತ್ತು ಶಿಕ್ಷಕರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಳ್ಳುತ್ತಾರೆ. ಈ ಅಪಾಯದಿಂದ ಹೇಗೆ ಪಾರಾಗುತ್ತಾರೆ ಎನ್ನುವುದೇ ಸಿನಿಮಾದ ಸ್ವಾರಸ್ಯ.

ಇದನ್ನೂ ಓದಿ: ಯೋಗಿ ಒಬ್ಬ ರಿಯಲ್ ಆಕ್ಟರ್: ‘ಒಂಭತ್ತನೇ ದಿಕ್ಕು’ ನಿರ್ದೇಶಕ ದಯಾಳ್ ಪದ್ಮನಾಭನ್

ಮಕ್ಕಳಿಗೆ ಕ್ರಾಫ್ಟ್ ಹೇಳಿಕೊಡುವ ಶಿಕ್ಷಕನ ಪಾತ್ರದಲ್ಲಿ ದಾನಿಶ್ ನಟಿಸಿದ್ದಾರೆ. ಸಿನಿಮಾದಲ್ಲಿ ಕಾಮಿಡಿ ಮತ್ತು ಅಡ್ವೆಂಚರ್ ಎರಡೂ ಮಿಳಿತಗೊಂಡಿದೆ ಎಂದು ಚಿತ್ರತಂಡ ಹೇಳಿದೆ. ಅಮೇಜಾನ್ ಪ್ರೈಮ್ ವಾರ್ಷಿಕ ಚಂದಾದಾರಿಕೆ ಶುಲ್ಕ 1499 ರೂ.

ಇದನ್ನೂ ಓದಿ: ‘ವೇದ’ ನಂತರ ನಿರ್ದೇಶಕ ಯೋಗರಾಜ್ ಭಟ್ ಜೊತೆ ಶಿವಣ್ಣ ಹೊಸ ಸಿನಿಮಾ





Read more…

[wpas_products keywords=”party wear dress for women stylish indian”]