Karnataka news paper

ಹಾರ್ದಿಕ್ ಪಾಂಡ್ಯ ಅಜ್ಜಿಯನ್ನು ಬಿಡದ “ಪುಷ್ಪ” ಪ್ರಭಾವ, ಶ್ರೀವಲ್ಲಿ ಹಾಡಿಗೆ ಸಖತ್ ಸ್ಟೆಪ್ಸ್: ವಿಡಿಯೋ ವೈರಲ್!


Online Desk

ಬೆಂಗಳೂರು: ಅಲ್ಲು ಅರ್ಜುನ್ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ “ಪುಷ್ಪ” ಸಿನಿಮಾ ಜಗತ್ತನ್ನು ಮಾತ್ರವಲ್ಲದೆ ಇಡೀ ಪ್ರಪಂಚದಲ್ಲೇ ತನ್ನ ಹವಾ ಎಬ್ಬಿಸಿದೆ. ಸಿನಿಮಾ ತಾರೆಯರು, ಸೆಲೆಬ್ರಿಟಿಗಳು, ದೇಶ-ವಿದೇಶದ ಸಾಮಾನ್ಯ ಜನರಿಂದ ಸ್ಟಾರ್ ಕ್ರಿಕೆಟಿಗರು ಸೇರಿದಂತೆ ಬಹುತೇಕ ಎಲ್ಲರಿಗೂ ಈಗ ಪುಷ್ಪ ಪ್ರಭಾವ ಶುರುವಾಗಿದೆ.

ಈ ಸಿನಿಮಾದ ಹಾಡು, ಡೈಲಾಗ್ , ಡ್ಯಾನ್ಸ್ ಗಳಿಗೆ ಅಡಿಕ್ಟ್ ಆಗಿರುವವರು ಸಂದರ್ಭವನ್ನು ಲೆಕ್ಕಿಸದೆ, ಎಲ್ಲೆಂದರಲ್ಲಿ ತಮ್ಮ ಪ್ರತಿಭೆಗೆ ಕೆಲಸ ನೀಡಿ ಮಜಾ ಮಾಡುತ್ತಿದ್ದಾರೆ. ಇಷ್ಟಕ್ಕೇ ನಿಲ್ಲದೆ ತಮ್ಮ ಡ್ಯಾನ್ಸ್, ಡೈಲಾಗ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿ ಸಂಭ್ರಮಿಸುತ್ತಿದ್ದಾರೆ.

ಇತ್ತೀಚೆಗಷ್ಟೇ ಅಜ್ಜಿಯೊಬ್ಬರೂ ಶ್ರೀವಲ್ಲಿ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಈ ಅಜ್ಜಿ ಟೀಂ ಇಂಡಿಯಾದ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರ ಅಜ್ಜಿ.  ವಯಸ್ಸು ಸಹಕರಿಸದಿದ್ದರೂ ತುಂಬಾ ಉತ್ಸಾಹದಿಂದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅಜ್ಜಿಗೆ ಹಾರ್ದಿಕ್ ಪಾಂಡ್ಯ ಸಾಥ್ ನೀಡಿದ್ದಾರೆ.

ಇದನ್ನು ಓದಿ: ವಿಕೆಟ್ ಪಡೆದ ಖುಷಿಯಲ್ಲಿ ನಟ ಅಲ್ಲು ಅರ್ಜುನ್ ರೀತಿ ಸ್ಟೆಪ್ ಹಾಕಿದ ಬ್ರಾವೋ, ವಿಡಿಯೋ!​

ಅಜ್ಜಿ ಜೊತೆ ಹೆಜ್ಜೆ ಹಾಕಿರುವ ಹಾರ್ದಿಕ್ ಪಾಂಡ್ಯ ವಿಡಿಯೋ ಪೋಸ್ಟ್ ಮಾಡಿ ಅದಕ್ಕೆ “ಅವರ್ ಓನ್ ಪುಷ್ಪಾ ನಾನಿ” ಎಂದು ಶೀರ್ಷಿಕೆ ಸೇರಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಜ್ಜಿ ಡ್ಯಾನ್ಸ್ ಗೆ ನೆಟಿಜನ್ ಗಳು ಫಿದಾ ಆಗಿದ್ದಾರೆ.





Read more…

[wpas_products keywords=”deal of the day sports items”]