ಪ್ರಸ್ತುತ ಮೊಬೈಲ್ ಡಿವೈಸ್ ಸಾಕಷ್ಟು ಉಪಯುಕ್ತ ಎನಿಸಿದ್ದು, ಬಹುತೇಕ ಕೆಲಸಗಳು ಫೋನ್ ಮೂಲಕವೇ ಆಗುತ್ತವೆ. ಈ ನಿಟ್ಟಿನಲ್ಲಿ ಹೊಸ ಹೊಸ ಫೋನ್‌ಗಳು ಲಗ್ಗೆ ಎಂಟ್ರಿ ಕೊಡುತ್ತಿವೆ. ಇಂದಿನ ನೂತನ ಫೋನ್‌ಗಳ ಹಲವು ಅಪ್‌ಗ್ರೇಡ್ ಓಎಸ್ ಸಾಮರ್ಥ್ಯವನ್ನು ಹೊಂದಿರುವ ಜೊತೆಗೆ ಕ್ಯಾಮೆರಾ, ಬ್ಯಾಟರಿ ಬ್ಯಾಕ್‌ಅಪ್ ಆಯ್ಕೆಯಿಂದಲೂ ಉತ್ತಮ ಎನಿಸಿವೆ. ಅದಾಗ್ಯೂ ಕೆಲವು ಬಳಕೆದಾರರು ಬ್ಯಾಟರಿ ನಿರ್ವಹಣೆಯಲ್ಲಿ ಎಡವುತ್ತಾರೆ.

ಹೌದು, ಫೋನ್‌ಗಳಿಗೆ ಬ್ಯಾಟರಿ ಪ್ರಮುಖ ಶಕ್ತಿ ಕೇಂದ್ರ ಇದ್ದಂತೆ. ಬ್ಯಾಟರಿ ಬ್ಯಾಕ್‌ಅಪ್ ಸರಿ ಇಲ್ಲದಿದ್ದರೇ ಸ್ಮಾರ್ಟ್‌ಫೋನ್ ಕಾರ್ಯವೈಖರಿ ಶೂನ್ಯ. ಈ ನಿಟ್ಟಿನಲ್ಲಿ ಸ್ಮಾರ್ಟ್‌ಫೋನ್ ಬ್ಯಾಟರಿ ಕಾಳಜಿ ಪ್ರಮುಖ ಎನಿಸುತ್ತದೆ. ಫೋನ್ ಜೊತೆಗೆ ನೀಡಿರುವ ಅಧಿಕೃತ ಚಾರ್ಜರ್ ಬಳಸಿ ಫೋನ್ ಚಾರ್ಜಿಂಗ್ ಮಾಡುವುದು ಸರಿಯಾದ ಕ್ರಮವಾಗಿದೆ. ಆದರೆ ಅನೇಕ ಸಂದರ್ಭಗಳಲ್ಲಿ ಬಳಕೆದಾರರು ಸಿಕ್ಕ ಸಿಕ್ಕ ಚಾರ್ಜರ್ ಬಳಸಿ ಫೋನ್ ಚಾರ್ಜಿಂಗ್ ಮಾಡುತ್ತಾರೆ. ಆದರೆ ಇದರಿಂದ ಬ್ಯಾಟರಿ ಹಾಳಾಗುವ ಸಾಧ್ಯತೆಗಳಿರುತ್ತವೆ.
ಬೇರೆ ಚಾರ್ಜರ್ ಬಳಕೆ ಮಾಡಿದರೇ ಏನಾಗುತ್ತದೆ?
ಸ್ಮಾರ್ಟ್‌ಫೋನ್ ಚಾರ್ಜ್ ಮಾಡುವಾಗ ಫೋನಿನೊಂದಿಗೆ ನೀಡಿರುವ ಚಾರ್ಜರ್ ಅನ್ನು ಮಾತ್ರವೇ ಬಳಕೆ ಮಾಡಿರಿ. ಚಾರ್ಜರ್ ಇಲ್ಲ ಅಂತಾ ಬೇರೆ ಕಂಪನಿಯ ಅಥವಾ ಭಿನ್ನ ಚಾರ್ಜಿಂಗ್ ಸಾಮರ್ಥ್ಯದ ಚಾರ್ಜರ್ ಹೀಗೆ ಸಿಕ್ಕ ಸಿಕ್ಕ ಚಾರ್ಜರ್ ಬಳಕೆ ಮಾಡಬೇಡಿ. ಇದರಿಂದ ನಿಮ್ಮ ಫೋನಿನ ಬ್ಯಾಟರಿ ಬಾಳಿಕೆಗೆ ಧಕ್ಕೆ ಆಗುವ ಸಾಧ್ಯತೆಗಳಿರುತ್ತವೆ. ಅಲ್ಲದೇ ಫೋನ್ ಹೆಚ್ಚಿನ ಬಿಸಿ ಆಗುವ ಸಾಧ್ಯತೆಗಳಿರುತ್ತವೆ.
ಮುಂಜಾನೆವರೆಗೂ ಚಾರ್ಜ್ ಇಡಬೇಡಿ
ಬಹುತೇಕ ಬಳಕೆದಾರರಿಗೆ ರಾತ್ರಿಯಿಡಿ ಫೋನ್ ಚಾರ್ಜ್ ಹಾಕಿ ಮಲಗುವ ಅಭ್ಯಾಸ ಇರುತ್ತದೆ. ಆದರೆ ಖಂಡಿತಾ ಇದು ಉತ್ತಮ ಆಯ್ಕೆ ಅಲ್ಲವೇ ಅಲ್ಲ. ಆ ರೀತಿ ಓವರ್ ಚಾರ್ಜ್ ಮಾಡುವುದರಿಂದ ಫೋನ್ ಬ್ಯಾಟರಿ ಬಾಳಿಕೆ ಕುಗ್ಗುವುದರಲ್ಲಿ ಅನುಮಾನವೇ ಬೇಡ. ಹೀಗಾಗಿ ರಾತ್ರಿಯಿಡಿ ಚಾರ್ಜ್ ಮಾಡಬೇಡಿರಿ.
ಚಾರ್ಜಿಂಗ್ ಮಾಡುವಾಗ ಫೋನ್ ಬಳಸಬೇಡಿ
ಮೊಬೈಲ್ ಚಾರ್ಜಿಂಗ್ ಮಾಡುವಾಗ ಯಾವುದೇ ಕಾರಣಕ್ಕೂ ಫೋನ್ ಬಳಕೆ ಮಾಡಬೇಡಿರಿ. ಫೋನ್ ಬಳಕೆ ಮಾಡುತ್ತ ಚಾರ್ಜ್ ಮಾಡುವುದರಿಂದ ಫೋನ್ ಬಿಸಿ ಆಗಬಹುದು ಹಾಗೂ ಅತೀ ಬಿಸಿಯಾಗಿ ಅಪಾಯಕರ ಹಾನಿಗೆ ಕಾರಣವಾಗಲೂಬಹುದು. ಚಾರ್ಜ್ ಮಾಡುವಾಗ ಫೋನ್ ಬಳಕೆ ಮಾಡುವ ಅಭ್ಯಾಸ ಇದ್ದರೇ ಬಿಟ್ಟುಬಿಡಿ.
ಎಷ್ಟು ಬಾರಿ ಫೋನ್ ಚಾರ್ಜ್ ಮಾಡಬೇಕು
ಪ್ರತಿದಿನ ಒಂದೇ ಬಾರಿ ಫೋನ್ ಚಾರ್ಜ್ ಮಾಡಬೇಕು ಎಂಬ ನಿಯಮವಿಲ್ಲ. ಆದರೆ ದಿನಕ್ಕೆ ಎರಡು ಮೂರು ಬಾರಿ ಚಾರ್ಜ್ ಮಾಡುವುದರಿಂದ ಏನು ಸಮಸ್ಯೆ ಇಲ್ಲ. ಸಾಧ್ಯವಾದಷ್ಟು ಫೋನ್ ಬ್ಯಾಟರಿಯನ್ನು 60% ನಿಂದ 75% ಪರ್ಸೆಂಟ್ ನಡುವೆ ಇರುವಂತೆ ನೋಡಿಕೊಳ್ಳಿ, ಅದಾಗ್ಯೂ ಚಾರ್ಜ್ ಅನಿವಾರ್ಯ ಎಂದಾಗ ಚಾರ್ಜ್ ಮಾಡಿ ಆದರೆ ಪದೇ ಪದೇ ಚಾರ್ಜ್ ಅಂತೂ ಮಾಡಲೆಬೇಡಿ.
ಪೂರ್ಣ ಚಾರ್ಜ್ ಮಾಡದಿರಿ
ಫೋನ್ ಚಾರ್ಜ್ ಮಾಡುವಾಗ ಸಾಧಾರಣವಾಗಿ ಬ್ಯಾಟರಿ (100%) ಪೂರ್ಣ ಚಾರ್ಜ್ ಆಗುವವರೆಗೂ ತೆಗೆಯುವುದೇ ಇಲ್ಲ. ಇದು ಬ್ಯಾಟರಿ ಲೈಫ್ ದೃಷ್ಟಿಯಿಂದ ಉತ್ತಮ ನಿರ್ಧಾರವಲ್ಲ. ಫುಲ್ 100% ಚಾರ್ಜ್ ಮಾಡಲೇಬೇಡಿ. 90ರ ಗಡಿ ಮುಟ್ಟಿದ್ದರೇ ಸಾಕು. ಈ ಕ್ರಮ ಫೋನಿನ ಬ್ಯಾಟರಿ ಬಾಳಿಕೆಯನ್ನು ಹೆಚ್ಚಿಸುತ್ತವೆ.
ಫೋನ್ ಬ್ಯಾಟರಿ ಬಣಗಲು ಬಿಡಬೇಡಿ
ಮೊಬೈಲ್‌ನ ಪ್ರಮುಖ ಅಂಗವೇ ಬ್ಯಾಟರಿ ಆಗಿದ್ದು, ಫೋನಿಗೆ ಅತ್ಯುತ್ತಮ ಕಾರ್ಯನಿರ್ವಹಿಸಲು ಬ್ಯಾಟರಿ ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು. ಅಂದರೇ ಸ್ಮಾರ್ಟ್‌ಫೋನ್ ಬ್ಯಾಟರಿ ಪೂರ್ಣ 0 ಆಗುವವರೆಗೂ ಫೋನ್ ಬಳಕೆ ಮಾಡುವುದು ಒಳ್ಳೆಯದಲ್ಲ. ಹೀಗಾಗಿ ಫೋನ್ ಬ್ಯಾಟರಿ ಯಾವತ್ತು ಡ್ರೈ ಆಗಲು ಬಿಡಲೇಬೇಡಿ. ಶೇ.30% ಸನಿಹ ಬಂದಾಗ ಚಾರ್ಜ್ ಮಾಡುವುದು ಉತ್ತಮ.
Best Mobiles in India
English summary
Stop Useing Other Charger To Charge Your Smartphone: Why?
Read more…
[wpas_products keywords=”smartphones under 15000 6gb ram”]