Online Desk
ಬೆಂಗಳೂರು: ಕಾಂಗ್ರೆಸ್ ವಿಧಾನಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಪಕ್ಷಕ್ಕೆ ಬಂದರೆ ಸ್ವಾಗತ. ಇಬ್ರಾಹಿಂ ಬಂದರೆ ಗೌರವದ ಸ್ಥಾನ ಮಾನ ಕೊಡುತ್ತೇವೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಇಬ್ರಾಹಿಂ ಅವರಿಗೆ ಬಹಿರಂಗ ಆಹ್ವಾನ ಕೊಟ್ಟಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, ಇಬ್ರಾಹಿಂ ಅವರು ರಾಜಕೀಯದಲ್ಲಿ ಹಿರಿಯ ನಾಯಕರಾಗಿದ್ದಾರೆ. ಅವರಿಗೆ ದೇವೇಗೌಡರ ಬಗ್ಗೆ, ಜೆಡಿಎಸ್ ಬಗ್ಗೆ ಪ್ರೀತಿ ಇದೆ. ನಾವು ಕದ್ದು ಮುಚ್ಚಿ ಯಾವುದನ್ನೂ ಮಾಡಿಲ್ಲ, ಇಬ್ರಾಹಿಂ ಬಂದರೆ ಗೌರವದ ಸ್ಥಾನ ಮಾನ ಕೊಡುತ್ತೇವೆ ಎಂದು ಹೇಳಿದ್ದಾರೆ.
ಇಬ್ರಾಹಿಂ ಅವರು ದೇವೇಗೌಡರ ಏಳು-ಬೀಳಿನಲ್ಲಿ ಜೊತೆಯಾಗಿ ನಿಂತಿದ್ದರು, ವಿರೋಧ ಪಕ್ಷದ ನಾಯಕ ಸ್ಥಾನ ಸಿಗೋದಿದ್ದರೆ ಅಲ್ಲೇ ಇರಿ, ಉಪಯೋಗ ಮಾಡಿಕೊಳ್ಳಿ ಅಂತ ನಾನೇ ಹೇಳಿದ್ದೆ. ಜನತಾ ಪರಿವಾರದ ನಾಯಕರು ಎಲ್ಲರೂ ಸೆಟ್ಲ್ ಆಗಿದ್ದಾರೆ, ನಾನು ಇಬ್ರಾಹಿಂ ಅವರಿಗೂ ಕರೆ ಮಾಡಿ ಮಾತನಾಡಿದ್ದೇನೆ ಎಂದು ಹೆಚ್ಡಿಕೆ ಹೇಳಿದ್ದಾರೆ.
Read more
[wpas_products keywords=”deal of the day”]