Karnataka news paper

ಕರ್ನಾಟಕದಲ್ಲಿ 263 ಹೊಸ ಕೊರೊನಾ ಕೇಸ್‌..! ಬೆಂಗಳೂರಲ್ಲೇ ಹೆಚ್ಚು ಪಾಸಿಟಿವ್‌


ಬೆಂಗಳೂರು: ಕರ್ನಾಟಕದಲ್ಲಿ ಮಂಗಳವಾರ ಹೊಸದಾಗಿ 263 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ವೈರಸ್‌ ಸೋಂಕಿತರ ಸಂಖ್ಯೆ 30,00,934ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಮಂಗಳವಾರ ಕೊರೊನಾ ವೈರಸ್‌ ಕಾರಣದಿಂದ ಚಿಕಿತ್ಸೆ ಫಲಿಸದೇ 7 ಮಂದಿ ಸಾವನ್ನಪ್ಪಿದ್ದು, ಇವರೆಗೂ ಕೊರೊನಾದಿಂದ ರಾಜ್ಯದಲ್ಲಿ 38,275 ಜನ ಸಾವನ್ನಪ್ಪಿದ್ದಾರೆ.

ಕಳೆದ 24 ಗಂಟೆಗಳಲ್ಲಿ 327 ಜನ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಅದರಂತೆ ಒಟ್ಟು ಸೋಂಕಿತರ ಪೈಕಿ 29,55,465 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರೆ, 7,165 ಕೊರೊನಾ ಪ್ರಕರಣಗಳು ಕರ್ನಾಟಕದಲ್ಲಿ ಸಕ್ರಿಯವಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಇನ್ನು, ಬೆಂಗಳೂರಿನಲ್ಲಿ ಕಳೆದ 24 ಗಂಟೆಗಳಲ್ಲಿ 158 ಜನರಿಗೆ ಕೊರೊನಾ ವೈರಸ್‌ ತಗುಲಿರುವುದು ಖಚಿತವಾಗಿದೆ. ಈ ಮೂಲಕ ಬೆಂಗಳೂರಲ್ಲಿ ಕೊರೊನಾ ಪೀಡಿತರ ಸಂಖ್ಯೆ 12,59,183ಕ್ಕೆ ಏರಿಕೆಯಾಗಿದೆ. 12,59,183 ಸೋಂಕಿತರ ಪೈಕಿ 12,37,306 ಜನರು ಗುಣಮುಖರಾಗಿದ್ದಾರೆ. ರಾಜಧಾನಿಯಲ್ಲಿ ಕೊರೊನಾ ಸೋಂಕಿನಿಂದ ಮಂಗಳವಾರ ಓರ್ವ ಮೃತಪಟ್ಟಿದ್ದಾರೆ. ನಗರದಲ್ಲಿ ಕೊರೊನಾದಿಂದ ಈವರೆಗೆ 16,370 ಜನರ ಸಾವು ಸಂಭವಿಸಿದ್ದು, 5,506 ಕೊರೊನಾ ಪ್ರಕರಣಗಳು ಸಕ್ರಿಯವಾಗಿವೆ.

ಕರ್ನಾಟಕದಲ್ಲಿ ಮತ್ತೆ ಏರುಗತಿಯಲ್ಲಿ ಸಾಗುತ್ತಿದೆ ಕೊರೊನಾ! 399 ಹೊಸ ಪ್ರಕರಣ
ಜಿಲ್ಲಾವಾರು ಕೊರೊನಾ ಪ್ರಕರಣಗಳು
ಜಿಲ್ಲಾವಾರು ಹೊಸ ಪಾಸಿಟಿವ್‌ ಪ್ರಕರಣಗಳನ್ನು ಗಮನಿಸುವುದಾದರೆ ಬಾಗಲಕೋಟೆಯಲ್ಲಿ 00, ಬಳ್ಳಾರಿ 00, ಬೆಳಗಾವಿ 10, ಬೆಂಗಳೂರು ಗ್ರಾಮಾಂತರ 02, ಬೆಂಗಳೂರು ನಗರ 158, ಬೀದರ್ 01, ಚಾಮರಾಜನಗರ 00, ಚಿಕ್ಕಬಳ್ಳಾಪುರ 01, ಚಿಕ್ಕಮಗಳೂರು 11, ಚಿತ್ರದುರ್ಗ 04, ದಕ್ಷಿಣ ಕನ್ನಡ 13, ದಾವಣಗೆರೆ 00, ಧಾರವಾಡ 06, ಗದಗ 00, ಹಾಸನ 02, ಹಾವೇರಿ 00, ಕಲಬುರಗಿ 02, ಕೊಡಗು 14, ಕೋಲಾರ 00, ಕೊಪ್ಪಳ 00, ಮಂಡ್ಯ 01, ಮೈಸೂರು 16, ರಾಯಚೂರು 02, ರಾಮನಗರ 00, ಶಿವಮೊಗ್ಗ 07, ತುಮಕೂರು 07, ಉಡುಪಿ 02, ಉತ್ತರಕನ್ನಡ 04, ವಿಜಯಪುರ 00, ಯಾದಗಿರಿಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.



Read more