Online Desk
ಭೋಪಾಲ್: ಕಿರುತೆರೆ ಹಾಗೂ ಬಾಲಿವುಡ್ ನಟಿ ಶ್ವೇತಾ ತಿವಾರಿ ದೇವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಫ್ಯಾಶನ್ ಸಂಬಂಧಿತ ವೆಬ್ ಸರಣಿಯ ಪ್ರಕಟಣೆಗಾಗಿ ಅವರು ಸ್ಟಾರ್ ಕಾಸ್ಟ್ ಮತ್ತು ನಿರ್ಮಾಣ ತಂಡದೊಂದಿಗೆ ಭೋಪಾಲ್ ನಲ್ಲಿರುವ ಶ್ವೇತಾ ತಿವಾರಿ, ಧಾರಾವಾಹಿಯ ಪ್ರಚಾರದ ವೇಳೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪ್ರಚಾರದ ವೇಳೆ ಶ್ವೇತಾ ತಿವಾರಿ ವೇದಿಕೆಯಲ್ಲಿ ನಡೆದ ಚರ್ಚಾ ಕಾರ್ಯಕ್ರಮದಲ್ಲಿ ತಮಾಷೆ ಮಾಡುತ್ತಾ, ‘ದೇವರು ನನ್ನ ಬ್ರಾ ಗಾತ್ರವನ್ನು ತೆಗೆದುಕೊಳ್ಳುತ್ತಿದ್ದಾರೆ’ ಎಂದು ಹೇಳಿದ್ದಾರೆ.
ಇದನ್ನು ಓದಿ: ನಾಗ ಚೈತನ್ಯ, ಸಮಂತಾ ವಿಚ್ಛೇದನಕ್ಕೆ ಮೊದಲ ಬಾರಿಗೆ ಸ್ಫೋಟಕ ಕಾರಣ ಬಿಚ್ಚಿಟ್ಟ ನಾಗಾರ್ಜುನ!
ಶ್ವೇತಾ ಅವರ ವಿವಾದಾತ್ಮಕ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಮನೀಶ್ ಹರಿಶಂಕರ್ ನಿರ್ದೇಶನದ ಈ ಧಾರಾವಾಹಿಯ ಪ್ರಚಾರದ ವೇಳೆ ಈ ವಿವಾದ ಸೃಷ್ಟಿಯಾಗಿದೆ. ವೀಡಿಯೋ ವೈರಲ್ ಆದ ಬಳಿಕ ಕೆಲವರು ನಟಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶ್ವೇತಾ ತಿವಾರಿ ಅವರ ವಿವಾದಾತ್ಮಕ ಹೇಳಿಕೆ ವಿರುದ್ಧ ಮಧ್ಯ ಪ್ರದೇಶ ಗೃಹ ಸಚಿವ ಡಾ.ನರೋತ್ತಮ್ ಮಿಶ್ರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ನರೋತ್ತಮ್ ಮಿಶ್ರಾ, ‘ನಾನು ಶ್ವೇತಾ ತಿವಾರಿ ಹೇಳಿಕೆಯನ್ನು ಖಂಡಿಸುತ್ತೇನೆ. ತನಿಖೆ ನಡೆಸಿ ಶೀಘ್ರವೇ ವರದಿ ಸಲ್ಲಿಸುವಂತೆ ಭೋಪಾಲ್ ಪೊಲೀಸ್ ಆಯುಕ್ತರಿಗೆ ಸೂಚಿಸಿದ್ದೇನೆ. ಆ ಬಳಿಕ ನಟಿಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
Read more…
[wpas_products keywords=”party wear dress for women stylish indian”]