ಹೈಲೈಟ್ಸ್:
- ಯಕೃತ್ತಿನ ಶಸ್ತ್ರ ಚಿಕಿತ್ಸೆಗೆ 20 ರಿಂದ 23 ಲಕ್ಷ ರೂ. ವರೆಗೆ ವೆಚ್ಚವಾಗಲಿದೆ
- ತಮಿಳುನಾಡು ಸರಕಾರ ಇಂತಹ ಶಸ್ತ್ರ ಚಿಕಿತ್ಸೆಗಳಿಗೆ ನೆರವು ನೀಡುತ್ತದೆ
- 20 ಲಕ್ಷ ರೂ.ವರೆಗೆ ವಿಮೆ ಮಾಡಿಸಿದವರಿಗೆ ಇದು ಅನುಕೂಲವಾಗಲಿದೆ
‘ಚಯಾಪಚಯ ತೊಂದರೆಯಿಂದ ಲಿವರ್ ಸಿರೋಸಿಸ್ (ಹೊಟ್ಟೆಯಲ್ಲಿ ನೀರು ತುಂಬಿರುವುದು) ಕಾಯಿಲೆಯಿಂದ ಬಳಲುತ್ತಿದ್ದ 22 ವರ್ಷದ ಯುವಕನಿಗೆ ಆತನ ತಾಯಿಯಿಂದಲೇ ಯಕೃತ್ ದಾನ ಪಡೆದು ಡಿಸೆಂಬರ್ 17 ರಂದು ಕಸಿ ಮಾಡಲಾಗಿದ್ದು, ಕಸಿ ಮಾಡಲಾದ 5ನೇ ದಿನವೇ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿತ್ತು. ಇದೀಗ ಇಬ್ಬರೂ ಆರೋಗ್ಯವಾಗಿದ್ದಾರೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪ್ರಾಂಶುಪಾಲ ಡಾ. ಬಸವನ ಗೌಡಪ್ಪ ಮಾತನಾಡಿ, ‘ಆಸ್ಪತ್ರೆಯ ನುರಿತ ವೈದ್ಯರಾದ ಡಾ. ಎಚ್. ಪಿ. ನಂದೀಶ್, ಡಾ. ಮಹೇಶ್ ಎಸ್. ಶೆಟ್ಟಿ ನೇತೃತ್ವದ ತಂಡ ಬಿಜಿಎಸ್ ಗ್ಲೆನೇಂಜಲ್ಸ್ ಗ್ಲೋಬಲ್ ಆಸ್ಪತ್ರೆ ತಜ್ಞ ವೈದ್ಯರಾದ ಡಾ. ಮಹೇಶ ಗೋಪಶೆಟ್ಟಿ, ಡಾ. ಸುನಿಲ್ ಶೆನ್ವಿ, ಡಾ. ಆಶಿಶ್ ಶೆಟ್ಟಿ ಮತ್ತು ಡಾ. ಅರುಣ್ ಅವರ ತಂಡ, ಕಸಿ ಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದೆ’ಎಂದರು.
‘ಯಕೃತ್ತಿನ ಶಸ್ತ್ರ ಚಿಕಿತ್ಸೆಗೆ 20 ರಿಂದ 23 ಲಕ್ಷ ರೂ. ವರೆಗೆ ವೆಚ್ಚವಾಗಲಿದೆ. ತಮಿಳುನಾಡು ಸರಕಾರ ಇಂತಹ ಶಸ್ತ್ರ ಚಿಕಿತ್ಸೆಗಳಿಗೆ ನೆರವು ನೀಡುತ್ತದೆ. ಅಲ್ಲದೆ, 20 ಲಕ್ಷ ರೂ.ವರೆಗೆ ವಿಮೆ ಮಾಡಿಸಿದವರಿಗೆ ಇದು ಅನುಕೂಲವಾಗಲಿದೆ. ಆದರೆ, ಕರ್ನಾಟಕ ರಾಜ್ಯ ಸರಕಾರದಿಂದ ಯಾವುದೇ ನೆರವು ಸಿಗುತ್ತಿಲ್ಲ’ ಎಂದು ತಿಳಿಸಿದರು.
ಹೆಚ್ಚಿನ ತೂಕದಿಂದ ಲಿವರ್‌ಗೆ ಹಾನಿ: ವೈದ್ಯ ಡಾ. ಎಚ್. ಪಿ. ನಂದೀಶ್ ಮಾತನಾಡಿ, ‘ಇತ್ತೀಚಿನ ದಿನಗಳಲ್ಲಿ ತೂಕ ಹೆಚ್ಚುವುದರಿಂದಲೂ ಲಿವರ್‌ಗೆ ಹಾನಿಯಾಗುತ್ತಿದೆ. ಇಂತಹ ಪ್ರಕರಣ ಹೆಚ್ಚುತ್ತಿವೆ. ಹಾಗಾಗಿ ಎಲ್ಲರೂ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು. ಹಾಗೆಯೇ ಒಂದು ಕಿಡ್ನಿ ದಾನ ಮಾಡಿದರೆ, ಮತ್ತೊಂದು ಕಿಡ್ನಿಯಿಂದ ಜೀವಿಸಬಹುದು. ಹಾಗೆಯೇ ಲಿವರ್‌ನಲ್ಲೂ ಕೊಂಚ ದಾನ ಮಾಡುವುದರಿಂದ ಅದು ಮತ್ತೊಂದು ಜೀವಕ್ಕೆ ಆಧಾರವಾಗುತ್ತದೆ’ ಎಂದು ಸಲಹೆ ನೀಡಿದರು. ತಜ್ಞ ವೈದ್ಯರಾದ ಡಾ. ಮಹೇಶ್ ಎಸ್. ಶೆಟ್ಟಿ, ಡಾ. ಮಹೇಶ್ ಗೋಪಶೆಟ್ಟಿ ಹಾಜರಿದ್ದರು.
ಲಿವರ್ ಕಸಿಗೆ ಹೆಚ್ಚಿದ ಬೇಡಿಕೆ: ದೇಶದಲ್ಲಿ 1998ರಿಂದ ಯಕೃತ್‌ಗೆ ಕಸಿ ಮಾಡುವ ಪ್ರಕ್ರಿಯೆ ಚಾಲ್ತಿಗೆ ಬಂದಿತು. ಅಂದಿನಿಂದ 2004ರ ವರೆಗೆ ಕೇವಲ 150 ಮಂದಿಗೆ ಕಸಿ ಮಾಡಲಾಗಿತ್ತು. ಆದರೆ, 2004 ರಿಂದ 2020ರ ಅವಧಿಯಲ್ಲಿ ಸುಮಾರು 10 ಸಾವಿರ ಸಂಖ್ಯೆಗೆ ಏರಿಕೆಯಾಯಿತು. ಇದೀಗ ಮುಂದಿನ ದಿನಗಳಲ್ಲಿ ಇದರ ಬೇಡಿಕೆ ಹೆಚ್ಚಾಗುತ್ತಿದ್ದು, ಇನ್ನೂ ಹೆಚ್ಚಿನ ಸಂಖ್ಯೆ ದಾಟುವ ಸಾಧ್ಯತೆಗಳಿವೆ’ ಎಂದು ಡಾ. ಕರ್ನಲ್ ದಯಾನಂದ್ ತಿಳಿಸಿದರು.
Read more
[wpas_products keywords=”deal of the day sale today offer all”]