Karnataka news paper

ನಾಗ ಚೈತನ್ಯ, ಸಮಂತಾ ವಿಚ್ಛೇದನಕ್ಕೆ ಮೊದಲ ಬಾರಿಗೆ ಸ್ಫೋಟಕ ಕಾರಣ ಬಿಚ್ಚಿಟ್ಟ ನಾಗಾರ್ಜುನ!


Online Desk

ಹೈದರಾಬಾದ್: ಟಾಲಿವುಡ್ ಸ್ಟಾರ್ ಗಳಾದ ನಾಗಚೈತನ್ಯ ಮತ್ತು ಸಮಂತಾ ರುತ್ ಪ್ರಭು 2021ರಲ್ಲಿ ವಿಚ್ಛೇದನ ಘೋಷಿಸಿದರು. ಅಂದಿನಿಂದ ಇಂದಿನವರೆಗೆ ಅವರ ನಡುವಿನ ಪ್ರತ್ಯೇಕತೆಗೆ ಕಾರಣ ಏನು ಎಂಬುದು ಇಬ್ಬರು ಮಾತನಾಡಿಲ್ಲ. ನಾಗಚೈತನ್ಯ ಬಂಗಾರರಾಜು ಸಿನಿಮಾ ಬಿಡುಗಡೆಯಾದ ಸಂತಸದಲ್ಲಿದ್ದರೆ, ಸಮಂತಾ ಪುಷ್ಪ ಸಿನಿಮಾದ ಯಶಸ್ಸಿನಲ್ಲಿ ಬೀಗುತ್ತಾ ಇಬ್ಬರು ಬೇರೆ ಬೇರೆ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ.

ಇದನ್ನೂ ಓದಿ: ಸಮಂತಾ ಜೊತೆಗಿನ ವಿಚ್ಛೇದನ ಬಳಿಕ ನಟ ನಾಗ ಚೈತನ್ಯ ಮೊದಲ ಪ್ರತಿಕ್ರಿಯೆ ಹೀಗಿದೆ!

ಇದೀಗ ನಾಗಚೈತನ್ಯ ಅವರ ತಂದೆ, ಸಮಂತಾ ಅವರ ಮಾವ, ನಾಗಾರ್ಜುನ ಇವರಿಬ್ಬರ ವಿಚ್ಛೇದನದ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ. 2021ರ ನಂತರ ಅವರ ವಿವಾಹ ಜೀವನದಲ್ಲಿ ಮೊದಲು ಇದ್ದಷ್ಟು ಸಾಮರಸ್ಯ ಇರಲಿಲ್ಲ. 2021ರ ನಂತರ ಅವರ ದಾಂಪತ್ಯ ಜೀವನದಲ್ಲಿ ಸಮಸ್ಯೆಗಳು ಪ್ರಾರಂಭವಾದವು. ಮೊದಲು ಸಮಂತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ಇದನ್ನು ನಾಗ ಚೈತನ್ಯ ಒಪ್ಪಿಕೊಂಡರು ಎಂದು ಹೇಳಿದ್ದಾರೆ.

ಆದರೆ ನಾಗಚೈತನ್ಯ ನನ್ನ ಬಗ್ಗೆ ತುಂಬಾ ಚಿಂತಾಕ್ರಾಂತರಾಗಿದ್ದರು. ನಾನು ಏನು ಯೊಚಿಸುತ್ತೇನೆ, ಕುಟುಂಬದ ಖ್ಯಾತಿಗೆ ತೊಂದರೆಯಾಗುತ್ತಿದೆಯೇ ಎಂದು ಆಲೋಚಿಸಿದ್ದರು. ನಾನು ತುಂಬಾ ಚಿಂತೆ ಮಾಡುತ್ತೇನೆ ಎಂಬ ಕಾರಣಕ್ಕೆ ನನಗೆ ಸಾಂತ್ವಾನವನ್ನು ಹೇಳಿದ್ದರು.

ಇದನ್ನೂ ಓದಿ: ಸಮಂತಾ ಡ್ಯಾನ್ಸ್ ನಂಬರ್ ಗೆ ಪುರುಷರ ಸಂಘ ಆಕ್ಷೇಪ: ‘ಪುಷ್ಪ’ ಸಿನಿಮಾದ ಡ್ಯಾನ್ ನಂಬರ್ ನಿಷೇಧಿಸುವಂತೆ ಪ್ರಕರಣ ದಾಖಲು

ದಾಂಪತ್ಯ ಜೀವನದಲ್ಲಿ ಅವರಿಬ್ಬರೂ 4 ವರ್ಷಗಳಿಂದ ಒಟ್ಟಿಗೆ ಇದ್ದಾರೆ ಆದರೆ ಅಂತಹ ಯಾವುದೇ ಸಮಸ್ಯೆ ಅವರ ನಡುವೆ ಬಂದಿಲ್ಲ. ಇಬ್ಬರೂ ತುಂಬಾ ಆತ್ಮೀಯರಾಗಿದ್ದರು ಮತ್ತು ಅದು ಹೇಗೆ ಇವರಿಬ್ಬರು ಈ ನಿರ್ಧಾರಕ್ಕೆ ಬಂದರು ಎಂದು ನನಗೆ ತಿಳಿದಿಲ್ಲ. 2021ರ ಹೊಸ ವರ್ಷವನ್ನು ಒಟ್ಟಿಗೆ ಆಚರಿಸಿದರು, ಅದರ ನಂತರ ಸಮಸ್ಯೆಗಳು ಉದ್ಭವಿಸಿವೆ ಎಂದು ತೋರುತ್ತದೆ ನಾಗಾರ್ಜುನ ಹೇಳಿದರು.



Read more…

[wpas_products keywords=”party wear dress for women stylish indian”]