Karnataka news paper

ಏರ್‌ ಇಂಡಿಯಾ ಸೇವೆಯಲ್ಲಿ ಅಮೂಲಾಗ್ರ ಬದಲಾವಣೆ: ಕಳೆಗುಂದಿದ್ದ ‘ಮಹಾರಾಜ’ನಿಗೆ ಟಾಟಾದಿಂದ ಹೊಸ ಸ್ಪರ್ಶ


ಹೈಲೈಟ್ಸ್‌:

  • ಟಾಟಾ ತೆಕ್ಕೆಗೆ ಬರುತ್ತಿದ್ದಂತೆಯೇ ಏರ್ ಇಂಡಿಯಾದಲ್ಲಿ ಆಮೂಲಾಗ್ರ ಬದಲಾವಣೆ
  • ಕಳೆಗುಂದಿನ ಮಹಾರಾಜನಿಗೆ ಏರ್‌ ಟಾಟಾ ಸಮೂಹದಿಂದ ಹೊಸ ಸ್ಪರ್ಶ
  • ವಿಮಾನ ಸೇವೆ, ಸೇveಯ ಗುಣಮಟ್ಟದಲ್ಲಿ ಭಾರೀ ಬದಲಾವಣೆ ತಂದ ಟಾಟಾ ಸಮೂಹ

ಹೊಸದಿಲ್ಲಿ: ನಷ್ಟದ ಸುಳಿಯಲ್ಲಿ ಸಿಲುಕಿ ನಲುಗಿದ್ದ ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಟಾಟಾ ಸಮೂಹ ಖರೀದಿ ಮಾಡಿ ಮೂರು ತಿಂಗಳು ಕಳೆದಿದೆ. ಶುಕ್ರವಾರ ಟಾಟಾ ಸಮೂಹಕ್ಕೆ ಏರ್‌ ಇಂಡಿಯಾ ಅಧಿಕೃತವಾಗಿ ಹಸ್ತಾಂತರವಾಗಲಿದೆ. ಆ ಮೂಲಕ 76 ವರ್ಷಗಳ ಬಳಿಕ ಏರ್‌ ಇಂಡಿಯಾ ಅಧಿಕೃತವಾಗಿ ಸಂಸ್ಥಾಪಕರ ಮಡಿಲು ಸೇರಲಿದೆ.

ತನ್ನ ತೆಕ್ಕೆಗೆ ಮರಳುತ್ತಿದ್ದಂತೆಯೇ, ಏರ್‌ ಇಂಡಿಯಾದ ಸೇವೆಗಳಲ್ಲಿ ಹಲವು ಬದಲಾವಣೆ ತರಲು ಟಾಟಾ ಸೇವೆ ಮುಂದಾಗಿದೆ. ಆ ಮೂಲಕ ಕಳೆಗುಂದಿರುವ ‘ಮಹಾರಾಜ’ನಿಗೆ ಹೊಸ ಸ್ಪರ್ಶ ನೀಡಲು ಮುಂದಾಗಿದೆ. ಈಗಾಗಲೇ ಹಲವು ಸೇವೆಗಳು ಆರಂಭವಾಗಿದ್ದು, ಸೇವೆಯ ಗುಣಮಟ್ಟ ಕಾಪಾಡಿಕೊಳ್ಳುವ ಬಗ್ಗೆ ಸಿಬ್ಬಂದಿಗಳಿಗೆ ಟಾಟಾ ಸಂದೇಶ ರವಾನೆ ಮಾಡಿದೆ.

ಹಾಗಾದ್ರೆ ಟಾಟಾ ಸಮೂಹಕ್ಕೆ ಬರುತ್ತಿದ್ದಂತೆಯೇ ಏರ್‌ ಇಂಡಿಯಾದಲ್ಲಿ ಆದ ಬದಲಾವಣೆಗಳೇನು? ಸಂಕ್ಷಿಪ್ತ ವರದಿ ಇಲ್ಲಿದೆ.

ಊಟದ ವ್ಯವಸ್ಥೆಯಲ್ಲಿ ಬದಲಾವಣೆ: ಟಾಟಾ ಸಮೂಹಕ್ಕೆ ಏರ್‌ ಇಂಡಿಯಾ ಹಸ್ತಾಂತರ ವಿಳಂಬ
ಊಟದ ವ್ಯವಸ್ಥೆಯಲ್ಲಿ ಬದಲಾವಣೆ

ಮೊದಲನೆಯದಾಗಿ ಏರ್‌ ಇಂಡಿಯಾದಲ್ಲಿ ನೀಡಲಾಗುತ್ತಿದ್ದ ಊಟದ ಪಟ್ಟಿ ಹಾಗೂ ವ್ಯವಸ್ಥೆಯಲ್ಲಿ ಟಾಟಾ ಸಮೂಹ ಬದಲಾವಣೆ ಮಾಡಿದೆ. ಇದೇ ಕಾರಣಕ್ಕಾಗಿ ಗುರುವಾರ ನಡೆಯಬೇಕಿದ್ದ ಹಸ್ತಾಂತರ ಪ್ರಕ್ರಿಯೆ ಶುಕ್ರವಾರಕ್ಕೆ ಮುಂದೂಡಲ್ಪಟ್ಟಿದೆ.

ಮುಂಬೈ- ದೆಹಲಿ, ಮುಂಬೈ – ದೆಹಲಿ, ಮುಂಬೈ – ಬೆಂಗಳೂರು, ಮುಂಬೈ – ಲಂಡನ್‌, ಮುಂಬೈ – ನ್ಯೂಯಾರ್ಕ್‌, ಮುಂಬೈ – ಅಬುಧಾಬಿ ನಡುವೆ ಕಾರ್ಯನಿರ್ವಹಿಸುವ ವಿಮಾನಗಳಲ್ಲಿ ಊಟದ ವ್ಯವಸ್ಥೆ ಸುಧಾರಣೆ ಮಾಡಲು ನಿರ್ಧರಿಸಲಾಗಿದೆ.

ಟಾಟಾ ವಿಮಾನ ಕ್ಯಾಟೆರಿಂಗ್ ಸೇವೆ ನೀಡುವ ತಾಜ್‌ಸಾಟ್ಸ್‌ನ ನಿರ್ದೇಶನದನ್ವಯ ಈ ಬದಲಾವಣೆ ತರಲಾಗಿದೆ.

ಅಮೆರಿಕದಲ್ಲಿ 5ಜಿ ಕಾಟ!: ಏರ್ ಇಂಡಿಯಾ ವಿಮಾನಗಳ ಸಂಚಾರ ರದ್ದು
ಭೋಜನಕ್ಕೆ ಹೊಸ ಮಾರ್ಗಸೂಚಿ

ಪ್ರಯಾಣಿಕರಿಗೆ ಗುಣಮಟ್ಟದ ಊಟ ಹಾಗೂ ಸೇವೆ ಒದಗಿಸಲು ಟಾಟಾ ಸಮೂಜ ಭೋಜನಕ್ಕಾಗಿಯೇ ಹೊಸ ಮಾರ್ಗಸೂಚಿ ರಚಿಸಿದೆ. ಪ್ರತೀಯೊಂದು ಊಟದ ವೇಳೆ ನಿರ್ದೇಶಿಸಲಾದ ಮಾರ್ಗಸೂಚಿಯನ್ವಯವೇ ಗ್ರಾಹಕರಿಗೆ ನೀಡಬೇಕು ಎಂದು ಸಿಬ್ಬಂದಿಗಳಿಗೆ ಸೂಚಿಲಾಗಿದೆ. ಬ್ಯುಸಿನೆಸ್‌ ಕ್ಲಾಸ್‌ ಹಾಗೂ ಎಕಾನಮಿ ಕ್ಲಾಸ್‌ಗೆ ಪ್ರತ್ಯೇಕ ಸೂಚಿಗಳನ್ನು ತಯಾರಿಸಲಾಗಿದೆ.

ವೈನ್‌ ಗ್ಲಾಸ್‌ ಹಾಗೂ ಮೆಲಮೈನ್‌ ಕಪ್‌ಗಳ ಬಳಕೆ

ಬ್ಯುಸಿನೆಸ್ ಹಾಗೂ ಫಸ್ಟ್‌ ಕ್ಲಾಸ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ವೈನ್‌ ನೀಡುವಾಗ ಹೈ ಬಾಲ್‌ ಹಾಗೂ ವೈನ್‌ ಗ್ಲಾಸ್‌ಗಳಲ್ಲಿ ನೀಡಬೇಕು ಎಂದು ಸಿಬ್ಬಂದಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಪ್ರಾಸಿಲೈನ್‌ ಕಪ್‌ಗಳಲ್ಲಿ ಚಹಾ ಅಥವಾ ಕಾಫಿ ನೀಡಬೇಕು ಎಂದು ಸೂಚಿಸಲಾಗಿದೆ.

ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸುವವರಿಗೆ ಮೆಲಮೈನ್ ಗ್ಲಾಸ್‌ಗಳಲ್ಲಿ ಚಹಾ ಹಾಗೂ ಕಾಫಿಯನ್ನು ನೀಡಬೇಕು ಎಂದು ಸಿಬ್ಬಂದಿಗಳಿಗೆ ನಿರ್ದೇಶಿಸಲಾಗಿದೆ.

ಏರ್‌ ಇಂಡಿಯಾ ಖರೀದಿಗೆ ಟಾಟಾ ಗ್ರೂಪ್‌ 15,000 ಕೋಟಿ ರೂ. ಸಾಲ ಪಡೆದುಕೊಳ್ಳುವ ಸಾಧ್ಯತೆ
ದಿನ ಪತ್ರಿಕೆ ಹಾಗೂ ನಿಯಾತಕಾಲಿಕೆಗಳು

ಇನ್ನು ಬ್ಯುಸಿನೆಸ್‌, ಫಸ್ಟ್‌ ಕ್ಲಾಸ್‌ ಹಾಗೂ ಎಕಾನಮಿ ಕ್ಲಾಸ್‌ ಪ್ರಯಾಣಿಕರಿಗೆ ದಿನ ಪತ್ರಿಕೆ ಹಾಗೂ ನಿಯಾತಕಾಲಿಕೆ ಒದಗಿಸಬೇಕು ಎಂದು ಟಾಟಾ ಬಿಡುಗಡೆ ಮಾಡಿರುವ ಸುತ್ತೋಲೆಯಲ್ಲಿ ಹೇಳಲಾಗಿದೆ.

ಬ್ಲಾಂಕೆಟ್‌ ಹಾಗೂ ತಲೆದಿಂಬು

ಬ್ಯುಸಿನೆಸ್‌ ಹಾಗೂ ಫಸ್ಟ್‌ ಕ್ಲಾಸ್ ಪ್ರಯಾಣಿಕರಿಗೆ ತಪ್ಪದೇ ಬ್ಲಾಕೆಂಟ್‌ ಹಾಗೂ ತಲೆದಿಂಬು ನೀಡುವುದು ಹಾಗೂ ಎಕಾನಮಿ ಕ್ಲಾಸ್‌ ಪ್ರಯಾಣಿಕರು ಬಯಸಿದರೆ ನೀಡಲು ಪ್ರತೀ ವಿಮಾನದಲ್ಲೂ 50 ಬ್ಲಾಕೆಂಟ್ ಹಾಗೂ ತಲೆದಿಂಬುಗಳನ್ನು ಹೆಚ್ಚುವರಿಯಾಗಿ ಇಟ್ಟುಕೊಳ್ಳಲು ಸೂಚನೆ ನೀಡಲಾಗಿದೆ.

ಜೆಆರ್‌ಡಿ ಇದ್ದಿದ್ದರೆ ಬಹಳ ಸಂತೋಷಪಡುತ್ತಿದ್ದರು, ವೆಲ್‌ಕಂ ಬ್ಯಾಕ್‌ ಏರ್‌ ಇಂಡಿಯಾ ಎಂದ ರತನ್‌ ಟಾಟಾ!
ಪ್ರಯಾಣಿಕರನ್ನು ಅತಿಥಿಗಳಂತೆ ಪರಿಗಣಿಸುವುದು

ಪ್ರಯಾಣಿಕರ ಸೇವೆಯ ಬಗ್ಗೆ ಅತೀ ಹೆಚ್ಚು ಗಮನ ವಹಿಸಿರುವ ಟಾಟಾ ಪ್ರತೀ ಪ್ರಯಾಣಿಕರನ್ನೂ ಅತಿಥಿಯಂತೆ ಸ್ವಾಗತಿಸಿ ಎಂದು ತನ್ನ ಸಿಬ್ಬಂದಿಗಳಿಗೆ ಸೂಚನೆ ನೀಡಿದೆ. ಪ್ರತಿಯೊಬ್ಬ ಪ್ರಯಾಣಿಕರ ಸುರಕ್ಷತೆ ಹಾಗೂ ಅವರಿಗೆ ನೀಡುವ ಸೇವೆಯ ಗುಣಮಟ್ಟದ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.

ಉತ್ತಮ ಬಟ್ಟೆ ಧರಿಸಿ

ಪ್ರತೀ ಸಿಬ್ಬಂದಿಗಳು ತಮಗೆ ನಿಗದಿ ಪಡಿಸಲಾದ ಉತ್ತಮ ಬಟ್ಟೆ ಧರಿಸಬೇಕು. ಕ್ಯಾಬಿನ್‌ ಕ್ರೂಗಳ ಬ್ರಾಂಡ್‌ ಬೆಳವಣಿಗೆಯ ರಾಯಭಾರಿಗಳಾಗಿರುವುದರಿಂದ ಈ ಬಗ್ಗೆ ಗಮನ ಹರಿಸಬೇಕು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ. ಅಲ್ಲದೇ ಈ ಬಗ್ಗೆ ನಿಗಾ ವಹಿಸುವುದಾಗಿಯೂ ಟಾಟಾ ಹೇಳಿದೆ.

ಏರ್‌ ಇಂಡಿಯಾ ಗೆದ್ದ ಟಾಟಾಗಳಿಗೆ ಸಾಲ ನೀಡಲು ಬ್ಯಾಂಕ್‌ಗಳ ಪೈಪೋಟಿ, ₹35,000 ಕೋಟಿ ಲೋನ್‌ ಆಫರ್‌!
ಸಮಯ ಪರಿಪಾಲನೆ

ಸಮಯ ಪಾಲನೆಗೆ ಹೆಚ್ಚಿನ ಒತ್ತು ನೀಡಿರುವ ಟಾಟಾ ಸಮೂಹ, ಪ್ರತೀ ವಿಮಾನ ಕಾರ್ಯಾಚರಣೆ ಸಮಯಕ್ಕೆ ಸರಿಯಾಗಿ ಆಗುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದೆ. ಜತೆಗೆ ಹೊರಡುವುದಕ್ಕಿಂತ 10 ನಿಮಿಷ ಮುಂಚೆ ವಿಮಾನದ ಬಾಗಿಲುಗಳನ್ನು ಮುಚ್ಚಬೇಕು ಎಂದು ನಿರ್ದೇಶಿಸಿದೆ.



Read more…

[wpas_products keywords=”deal of the day”]