Karnataka news paper

ಪರಿಷತ್‌ ಚುನಾವಣೆ ಫಲಿತಾಂಶ: ಯಾವ ಕ್ಷೇತ್ರದಲ್ಲಿ ಯಾರಿಗೆ ಗೆಲುವು? ಇಲ್ಲಿದೆ ಪೂರ್ಣ ಪಟ್ಟಿ



ಬೆಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ನ 25 ಸ್ಥಾನಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಮಂಗಳವಾರ ನಡೆಯಿತು. ಫಲಿತಾಂಶ ಹೊರಬಿದ್ದಾಗ ಬಿಜೆಪಿ ತನ್ನ ಸ್ಥಾನ ಗಳಿಕೆಯನ್ನು ಹೆಚ್ಚಿಸಿಕೊಂಡಿದ್ದರೆ, ಭಾರಿ ನಷ್ಟ ಅನುಭವಿಸಿದೆ. ಕಾಂಗ್ರೆಸ್‌ ಕೂಡ ಕೆಲವು ಸ್ಥಾನಗಳನ್ನು ಕಳೆದುಕೊಂಡಿದೆ.

25 ಕ್ಷೇತ್ರಗಳಲ್ಲಿ 22 ಕ್ಷೇತ್ರಗಳ ಮತ ಎಣಿಕೆ ಪೂರ್ಣಗೊಂಡಿದ್ದು, ಕಾಂಗ್ರೆಸ್‌ 11 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಜೆಡಿಎಸ್‌ ಕೇವಲ ಒಂದೇ ಕ್ಷೇತ್ರವನ್ನು ಪಡೆದುಕೊಂಡಿದ್ದು, ಬಿಜೆಪಿ 10 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ.

ಮೂರು ಕ್ಷೇತ್ರಗಳಲ್ಲಿ ಎರಡನೇ ಪ್ರಾಶಸ್ತ್ರ್ಯದ ಮತಗಳ ಎಣಿಕೆ ಪ್ರಗತಿಯಲ್ಲಿದೆ. ಬೆಳಗಾವಿಯಲ್ಲಿ ಪಕ್ಷೇತರ ಮತ್ತು ಬಿಜೆಪಿ ಅಭ್ಯರ್ಥಿ ನಡುವೆ ಸ್ಪರ್ಧೆಯಿದ್ದರೆ, ಮೈಸೂರಿನಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಅಭ್ಯರ್ಥಿ ನಡುವೆ ಪೈಪೋಟಿ ಏರ್ಪಟ್ಟಿದೆ. ವಿಜಯಪುರ-ಬಾಗಲಕೋಟೆ ಕ್ಷೇತ್ರದಲ್ಲಿಯೂ ಬಿಜೆಪಿ ಮತ್ತು ಪಕ್ಷೇತರ ಅಭ್ಯರ್ಥಿ ನಡುವೆ ಜಿದ್ದಾ ಜಿದ್ದಿನ ಹೋರಾಟ ನಡೆಯುತ್ತಿದೆ.

ಕ್ಷೇತ್ರವಾರು ಗೆದ್ದ ಅಭ್ಯರ್ಥಿಗಳು ಮತ್ತು ಪಕ್ಷಗಳ ವಿವರಗಳು ಹೀಗಿವೆ,

ಕ್ರ. ಸಂಖ್ಯೆಕ್ಷೇತ್ರಗೆದ್ದ ಅಭ್ಯರ್ಥಿಪಕ್ಷ
1ಚಿಕ್ಕಮಗಳೂರುಎಂ.ಕೆ. ಪ್ರಾಣೇಶ್‌ಬಿಜೆಪಿ
2ಮಂಡ್ಯದಿನೇಶ್‌ ಗೂಳಿಗೌಡಕಾಂಗ್ರೆಸ್‌
3ಬೆಳಗಾವಿಚನ್ನರಾಜ ಹಟ್ಟಿಹೊಳಿಕಾಂಗ್ರೆಸ್‌
4ಬೆಳಗಾವಿಮತ ಎಣಿಕೆ ಜಾರಿಯಲ್ಲಿ
5ಬೆಂಗಳೂರು ಗ್ರಾಮಾಂತರಎಸ್‌. ರವಿಕಾಂಗ್ರೆಸ್‌
6ವಿಜಯಪುರ-ಬಾಗಲಕೋಟೆಸುನಿಲಗೌಡ ಪಾಟೀಲಕಾಂಗ್ರೆಸ್‌
7ವಿಜಯಪುರ-ಬಾಗಲಕೋಟೆಮತ ಎಣಿಕೆ ಜಾರಿಯಲ್ಲಿ
8ತುಮಕೂರುರಾಜೇಂದ್ರ ರಾಜಣ್ಣಕಾಂಗ್ರೆಸ್
9ಮೈಸೂರು-ಚಾಮರಾಜನಗರಡಾ.ಡಿ. ತಿಮ್ಮಯ್ಯಕಾಂಗ್ರೆಸ್
10ಮೈಸೂರು-ಚಾಮರಾಜನಗರಮತ ಎಣಿಕೆ ಜಾರಿಯಲ್ಲಿ
11ಕಲಬುರಗಿಬಿಜಿ ಪಾಟೀಲ್ಬಿಜೆಪಿ
12ಕೋಲಾರಅನಿಲ್ ಕುಮಾರ್ಕಾಂಗ್ರೆಸ್
13ಬೀದರ್ಭೀಮರಾವ್ ಬಿ. ಪಾಟೀಲ್ಕಾಂಗ್ರೆಸ್
14ಹಾಸನಸೂರಜ್ ರೇವಣ್ಣಜೆಡಿಎಸ್‌
15ರಾಯಚೂರುಶರಣಗೌಡ ಪಾಟೀಲ್ ಬಯ್ಯಾಪುರಕಾಂಗ್ರೆಸ್
16ಧಾರವಾಡಪ್ರದೀಪ್ ಶೆಟ್ಟರ್ಬಿಜೆಪಿ
17ಧಾರವಾಡಸಲೀಂ ಅಹಮದ್‌ಕಾಂಗ್ರೆಸ್
18ಶಿವಮೊಗ್ಗಡಿ.ಎಸ್‌. ಅರುಣ್‌ಬಿಜೆಪಿ
19ದಕ್ಷಿಣ ಕನ್ನಡಮಂಜುನಾಥ ಭಂಡಾರಿಕಾಂಗ್ರೆಸ್
20ದಕ್ಷಿಣ ಕನ್ನಡಕೋಟ ಶ್ರೀನಿವಾಸ ಪೂಜಾರಿಬಿಜೆಪಿ
21ಬೆಂಗಳೂರು ನಗರಗೋಪಿನಾಥ ರೆಡ್ಡಿಬಿಜೆಪಿ
22ಉತ್ತರ ಕನ್ನಡಗಣಪತಿ ಉಳ್ವೇಕರಬಿಜೆಪಿ
23ಬಳ್ಳಾರಿವೈ.ಎಂ. ಸತೀಶ್‌ಬಿಜೆಪಿ
24ಕೊಡಗುಸುಜಾ ಕುಶಾಲಪ್ಪಬಿಜೆಪಿ
25ಚಿತ್ರದುರ್ಗಕೆ.ಎಸ್. ನವೀನ್ಬಿಜೆಪಿ

25 ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ತಲಾ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದವು. ಜೆಡಿಎಸ್‌ 6 ಕ್ಷೇತ್ರಗಳಲ್ಲಿ ಮಾತ್ರ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.



Read more